HomePage_Banner
HomePage_Banner
HomePage_Banner
HomePage_Banner
HomePage_Banner
HomePage_Banner

ಪ್ರಬಲ ಗೋಹತ್ಯಾ ನಿಷೇಧ ಕಾಯಿದೆ ಜಾರಿ ಮಾಡುವಂತೆ ಆಗ್ರಹ – ವಿ.ಹಿಂ.ಪ| ಗೋ ಹಂತಕರಿಗೆ 10 ವರ್ಷ ಜೈಲು, ರೂ. 5ಲಕ್ಷ ದಂಡ ವಿಧಿಸಿ

Puttur_Advt_NewsUnder_1
Puttur_Advt_NewsUnder_1
  • ಅಕ್ರಮ ಗೋಸಾಗಾಟಗಾರರಿ 7 ವರ್ಷ ಜೈಲು ವಿಧಿಸಬೇಕು


ಪುತ್ತೂರು: ಅಕ್ರಮ ಹಿಂಸಾತ್ಮಕ ಗೊಕಳ್ಳ ಸಾಗಾಟ ಮತ್ತು ಗೋ ವಧೆ ಮಾಡಿದವರನ್ನು ಹಿಡಿದು ಕೇಸು ದಾಖಲಿಸಿದರೂ ದುರ್ಬಲ ಕಾನೂನಿಂದಾಗಿ ಇದುವರೆಗೆ ಒಬ್ಬನೇ ಒಬ್ಬ ಆರೋಪಿಗೆ ಶಿಕ್ಷೆ ಯಾಗಿಲ್ಲ. ಈ ನಿಟ್ಟಿನಲ್ಲಿ ಪ್ರಬಲ ಗೋಹತ್ಯಾ ನಿಷೇಧ ಕಾಯ್ದೆ ಜಾರಿ ಮಾಡುವಂತೆ ವಿಶ್ವಹಿಂದೂ ಪರಿಷತ್ ಜಿಲ್ಲಾ ಗೋರಕ್ಷಾ ಪ್ರಮುಖ್ ಸರಪಾಡಿ ಅಶೋಕ್ ಶೆಟ್ಟಿ ಅವರು ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.

ಪ್ರಬಲವಲ್ಲದ ಕಾನೂನಿನಿಂದಾಗಿ ಅಕ್ರಮ ಗೋ ಕಳ್ಳ ಸಾಗಾಟ ಮಾಡಿದ ವಾಹನಗಳನ್ನು ನ್ಯಾಯಾಲಯದಲ್ಲಿ ಬಿಡಿಸಿ ಹೋಗಿ ನಂತರ ಪದೇ ಪದೇ ಅದೇ ವಾಹನದಲ್ಲಿ ಅದೇ ಅಪರಾಧ ಮಾಡಲಾಗುತ್ತಿದೆ. ಆರೋಪಿಗಳು ಮತ್ತೆ ಮತ್ತೆ ಅದೇ ಅಪರಾಧ ಕೃತ್ಯಗಳಲ್ಲಿ ಭಾಗಿಯಾಗುತ್ತಿದ್ದಾರೆ. ಆರೋಪಿಗಳಿಗೆ ಕಾನೂನಿನ ಭಯವಿಲ್ಲ ವಾಗಿದೆ. ಇದಕ್ಕೆಲ್ಲಾ ಈಗ ಜಾರಿಯಲ್ಲಿರುವ ಕರ್ನಾಟಕ ಗೊವಾಧ ನಿಷೇಧ ಹಾಗೂ ಜಾನುವಾರು ಸಂರಕ್ಷಣಾ ಕಾಯಿದೆ ೧೯೬೪ ಅತ್ಯಂತ ದುರ್ಬಲ ವಾಗಿರುವುದಾಗಿದೆ ಎಂದ ಅವರು ಈ ಕಾಯ್ದೆಯ ಪ್ರಕಾರ ಗೋವಧೆ ಮಾಡಿದವರಿಗೆ ಕೇವಲ ೬ ತಿಂಗಳ ಶಿಕ್ಷೆ ರೂ. ೧,೦೦೦/- ದಂಡ ವಿಧಿಸಲಾಗುತ್ತದೆ. ಆರೋಪಿಗಳು ದಂಡ ಪಾವತಿಸಿ ಮತ್ತೆ ಅಕ್ರಮ ಗೋಸಾಗಾಟ ಮಾಡುತ್ತಾರೆ. ಇವತ್ತು ಬಹಳಷ್ಟು ಕಡೆ ಅಕ್ರಮ ಕಸಾಯಿಖಾನೆಗಳ ಸಕ್ರಿಯವಾಗಿದೆ. ಇಂತಹ ಎಲ್ಲಾ ಅಪರಾಧಿಗಳಿಗೆ ಕಿಡಿ ಶಿಕ್ಷೆಯಾಗುವಂತಹ ಪ್ರಬಲ ಗೋಹತ್ಯಾ ನಿಷೇಧ ಕಾಯಿದೆ ಜಾರಿಗೆ ತರಬೇಕೆಂದು ವಿಶ್ವ ಹಿಂದೂ ಪರಿಷತ್ ಬಲವಾಗಿ ರಾಜ್ಯ ಸರ್ಕಾರಕ್ಕೆ ಆಗ್ರಹಿಸುತ್ತದೆ. ರಾಜ್ಯ ಸರ್ಕಾರವು ಈ ವಿಚಾರವನ್ನು ಗಂಭೀರವಾಗಿ ಪರಿಗಣಿಸಿ ಗೋ ಹಂತಕರಿಗೆ ಗರಿಷ್ಠ ೧೦ ವರ್ಷ ಜೈಲು ಶಿಕ್ಷೆ ರೂ.೫ ಲಕ್ಷದವರೆಗೆ ದಂಡ ವಿಧಿಸುವ, ಅಕ್ರಮ ಗೋಸಾಗಾಟ ಗಾರರಿಗೆ, ಗೋ ಹಂತಕರಿಗೆ ೭ ವರ್ಷ ಜೈಲು ಶಿಕ್ಷೆ ಕೊಡುವಂತಹ ಹಾಗೂ ವಾಹನಗಳನ್ನು ಶಾಶ್ವತವಾಗಿ ಮುಟ್ಟುಗೋಲು ಹಾಕುವ ಹಾಗೂ ಅಪರಾಧಿ ಡ್ರೈವರ್ ಲೈಸೆನ್ಸ್ ಶಾಶ್ವತವಾಗಿ ರದ್ದುಗೊಳಿಸುವ ಸಹಿತ ಕಠಿಣ ಶಿಕ್ಷೆ ಕೊಡುವಂತಹ ಪ್ರಬಲ ಕಾಯ್ದೆ ಯನ್ನು ರೈತ ನಾಯಕ, ಗೋ ಪ್ರೇಮಿ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಅವರು ಇದೇ ಸೆಪ್ಟೆಂಬರ್ ಅಧಿವೇಶನದಲ್ಲಿ ಮಂಡಿಸಿ ಜಾರಿ ಗೊಳಿಸಬೇಕೆಂದು ಅವರು ಆಗ್ರಹಿಸಿದರು.

ಗೋ ಸೇವಾ ಆಯೋಗ ಆರಂಭಿಸಿ:
ಅನಾಥ ಗೋವುಗಳನ್ನು ಮತ್ತು ಅಕ್ರಮ ಗೋ ಸಾಗಾಟದ ವೇಳೆ ಸಂಘಟನೆಯಿಂದ ರಕ್ಷಣೆಗೆ ಒಳಗಾದ ಗೋವುಗಳನ್ನು ಗೋ ಆಶ್ರಮಕ್ಕೆ ಸೇರಿಸಲಾಗುತ್ತದೆ. ಆದರೆ ಇದೀಗ ಗೋ ಆಶ್ರಮದಲ್ಲಿರುವ ಗೋವುಗಳು ತುಂಬಿವೆ. ಇಂತಹ ಸಂದರ್ಭದಲ್ಲಿ ಸರಕಾರದಿಂದ ಗೋ ಸೇವಾ ಆಯೋಗ ಆರಂಭಗೊಳ್ಳಬೇಕು. ಸಂಘಟನೆಯೂ ಈಗಾಗಲೇ ಗೋವಿಗಾಗಿ ಮೇವು ಎಂಬ ಅಭಿಯಾನ ಆರಂಭಿಸಿದೆ ಎಂದು ಅಶೋಕ್ ಶೆಟ್ಟಿ ತಿಳಿಸಿದರು. ಪತ್ರಿಕಾಗೋಷ್ಠಿಯಲ್ಲಿ ವಿಶ್ವಹಿಂದೂ ಪರಿಷತ್ ಜಿಲ್ಲಾಧ್ಯಕ್ಷ ಡಾ.ಕೃಷ್ಣಪ್ರಸನ್ನ, ಪ್ರಧಾನ ಕಾರ್ಯದರ್ಶಿ ಸತೀಶ್ ಬಿ.ಎಸ್, ಬಜರಂಗದಳ ದಕ್ಷಿಣ ಪ್ರಾಂತ ಸಹ ಸಂಯೋಜಕ ಮುರಳಿಕೃಷ್ಣ ಹಸಂತಡ್ಕ, ಸಾಪ್ತಾಹಿಕ ಪ್ರಮುಖ್ ವಿಶಾಖ್ ರೈ ಉಪಸ್ಥಿತರಿದ್ದರು.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.