HomePage_Banner
HomePage_Banner
HomePage_Banner
HomePage_Banner
HomePage_Banner
HomePage_Banner

ಅಭಿವೃದ್ಧಿ ಕಾಣದ ಪೆರ್ಲಂಪಾಡಿ-ಐವರ್ನಾಡು ಸಂಪರ್ಕ ರಸ್ತೆ…!- ದುರಸ್ತಿಗೊಳಿಸುವಂತೆ ಆಗ್ರಹಿಸಿ ಗ್ರಾಮಸ್ಥರಿಂದ ಅಧಿಕಾರಿಗಳಿಗೆ ಮನವಿ

Puttur_Advt_NewsUnder_1
Puttur_Advt_NewsUnder_1

ಪುತ್ತೂರು: ಪುತ್ತೂರು ಹಾಗೂ ಸುಳ್ಯ ತಾಲೂಕುಗಳನ್ನು ಸಂಪರ್ಕಿಸುವ ಪರ್ಲಿಕಜೆ-ನಿಡುಬೆ-ಕೊಚ್ಚಿ ದುಗ್ಗಳ-ಕಲ್ಲರ್ಪೆ, ಮಾವಿನಕಟ್ಟೆ ಅಂತರ್ ತಾಲೂಕು ರಸ್ತೆಯನ್ನು ಅಭಿವೃದ್ಧಿಗೊಳಿಸಿ ಕಾಂಕ್ರೀಟಿಕರಣಗೊಳಿಸುವಂತೆ ಸ್ಥಳೀಯ ಗ್ರಾಮಸ್ಥರು ಆಗ್ರಹಿಸಿದ್ದು ಈ ಬಗ್ಗೆ ಅಧಿಕಾರಿಗಳಿಗೆ ಮತ್ತು ವಿವಿಧ ಇಲಾಖೆಗಳಿಗೆ ಮನವಿಯನ್ನು ಸಲ್ಲಿಸಿದ್ದಾರೆ.

ಸುಳ್ಯ ತಾಲೂಕಿನ ಪರ್ಲಿಕಜೆ, ನಿಡುಬೆ, ಜಬಳೆ ಕೊಚ್ಚಿ ದುಗ್ಗಳ-ಕಲ್ಲರ್ಪೆ ಮಾವಿನಕಟ್ಟೆ ರಸ್ತೆಯು ಸುಮಾರು ೪ ಕಿ.ಮೀ.ಆಗಿದ್ದು, ಅದರಲ್ಲಿ ೧ ಕಿ.ಮೀ ಗ್ರಾಮ ಸಡಕ್ ಯೋಜನೆಯಡಿಯಲ್ಲಿ ೧೭ ವರ್ಷಗಳ ಹಿಂದೆ ಡಾಮರೀಕರಣಗೊಂಡಿದೆ. ಸುಳ್ಯ ತಾಲೂಕಿನ ೪ ಕಿ.ಮೀ ಉದ್ದದ ಭಾಗವು ಡಾಮರ್ ಮೇಲ್ಮೈಯನ್ನು ಹೊಂದಿದ್ದು, ಹಲವಾರು ವರ್ಷಗಳಿಂದ ನವೀಕರಣ ಮಾಡದೇ ತೀರಾ ನಾದುರಸ್ತಿಯಲ್ಲಿದೆ. ಕೊಚ್ಚಿ ರಸ್ತೆಯು ಇನ್ನೂ ಕಚ್ಚಾ ರಸ್ತೆಯಾಗಿಯೇ ಉಳಿದಿದೆ. ಈ ರಸ್ತೆಯು ಸುಳ್ಯ ತಾಲೂಕಿನ ಪರ್ಲಿಕಜೆ-ನಿಡುಬೆ-ಕೊಚ್ಚಿ ಪ್ರದೇಶಗಳಿಗೆ ಪುತ್ತೂರು ತಾಲೂಕಿನ ದುಗ್ಗಲ ಮಾವಿನಕಟ್ಟೆ ಕಲ್ಲರ್ಪೆ ಪ್ರದೇಶಗಳಿಗೂ ಸಂಪರ್ಕ ಕಲ್ಪಿಸುತ್ತದೆ. ಈ ರಸ್ತೆಯು ಸುಳ್ಯ ತಾಲೂಕಿನಿಂದ ಪುತ್ತೂರು ತಾಲೂಕಿಗೆ ಸಂಪರ್ಕ ಕಲ್ಪಿಸುವ ಪರ್ಯಾಯ ರಸ್ತೆಯಾಗಿರುತ್ತದೆ. ಈ ಭಾಗದಲ್ಲಿ ಸಿ.ಆರ್.ಸಿ. ಕಾಲೋನಿ, ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಹಾಗೂ ಹಿಂದುಳಿದ ವರ್ಗಗಳ ಸುಮಾರು ೩೦೦ಕ್ಕಿಂತ ಹೆಚ್ಚು ಮನೆಗಳಿರುವ, ೨೦೦೦ಕ್ಕಿಂತ ಹೆಚ್ಚು ನಿವಾಸಿಗಳಿರುವ ಈ ಗ್ರಾಮದಲ್ಲಿರುವ ನಾವು ಮೂಲಭೂತ ಸೌಲಭ್ಯಗಳಿಂದ ವಂಚಿತರಾಗಿರುತ್ತೇವೆ.

ಈ ರಸ್ತೆಯು ಅಭಿವೃದ್ಧಿ ಹೊಂದಿದರೆ ಎರಡು ತಾಲೂಕಿನ ಭಾಗದ ಜನರಿಗೆ ತುಂಬಾ ಉಪಯುಕ್ತವಾದ ರಸ್ತೆಯಾಗಿ ಪರಿವರ್ತನೆ ಕಾಣಲಿದೆ, ಹಾಗಾಗಿ ಈ ಸಂಪರ್ಕ ರಸ್ತೆಯನ್ನು ಸಂಬಂಧಪಟ್ಟವರು ಅಭಿವೃದ್ಧಿಪಡಿಸುವಂತೆ ಆಗ್ರಹಿಸಿರುವ ಮನವಿಯನ್ನು ದ.ಕ ಜಿಲ್ಲಾ ಮುಖ್ಯ ಕಾರ್ಯನಿರ್ವಹಣಾಧಿಕಾರಿಯವರಿಗೆ ಹಾಗೂ ಪುತ್ತೂರು ಸಹಾಯಕ ಆಯುಕ್ತರಿಗೆ ಮನವಿ ಸಲ್ಲಿಸಿದ್ದಾರೆ. ಗ್ರಾಮಸ್ಥರಾದ ಸಾತ್ವಿಕ್ ಕುದುಂಗು, ನಿತಿನ್ ಕೊಚ್ಚಿ, ಗಣೇಶ್ ಕೊಚ್ಚಿ, ಶರತ್ ಜಬಳೆ ಮನವಿ ನೀಡುವ ನಿಯೋಗದಲ್ಲಿದ್ದರು.


100 ಜನರ ಸಹಿ ಇರುವ ಮನವಿಪತ್ರ:

ರಸ್ತೆ ಅಭಿವೃದ್ಧಿಗೆ ಆಗ್ರಹಿಸಿರುವ ಮನವಿಗೆ ಸಂಪರ್ಕ ರಸ್ತೆ ಪ್ರದೇಶದ ಸುಮಾರು ನೂರು ಮಂದಿ ಸಹಿ ಹಾಕಿದ್ದಾರೆ.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.