HomePage_Banner
HomePage_Banner
HomePage_Banner
HomePage_Banner
HomePage_Banner
HomePage_Banner

ಬೆದ್ರೋಡಿ: ಚರಂಡಿ ಮುಚ್ಚಿರುವುದರಿಂದ ರಸ್ತೆಯಲ್ಲಿಯೇ ಹರಿಯುತ್ತಿರುವ ನೀರು, ಸಂಚಾರಕ್ಕೆ ಅಡಚಣೆ; ಮಹಿಳೆಯಿಂದ ಗ್ರಾ.ಪಂ.ಗೆ ದೂರು

Puttur_Advt_NewsUnder_1
Puttur_Advt_NewsUnder_1

ನೆಲ್ಯಾಡಿ: ಅವೈಜ್ಞಾನಿಕವಾಗಿ ಮಣ್ಣು ಹಾಕಿರುವುದರಿಂದ ಚರಂಡಿ ಮುಚ್ಚಿ ಸಾರ್ವಜನಿಕ ರಸ್ತೆಯಲ್ಲಿಯೇ ನೀರು ಹರಿಯುತ್ತಿರುವುದರಿಂದ ಸಂಚಾರಕ್ಕೆ ತೊಂದರೆಯಾಗಿರುವ ಬಗ್ಗೆ ಬಜತ್ತೂರು ಗ್ರಾಮದ ರೆಂಜಾಳ ನಿವಾಸಿ ಮಹಿಳೆಯೋರ್ವರು ಬಜತ್ತೂರು ಗ್ರಾ.ಪಂ.ಗೆ ದೂರು ನೀಡಿದ್ದಾರೆ.

ಬಜತ್ತೂರು ಗ್ರಾಮದ ಬೆದ್ರೋಡಿ ವಿದ್ಯಾನಗರ ಎಂಬಲ್ಲಿ ಬೆದ್ರೋಡಿ-ರೆಂಜಾಳ ರಸ್ತೆಯ ಬಳಿ ಅಬ್ಬಾಸ್ ಎಂಬವರು ಮನೆ ನಿರ್ಮಾಣದ ಸಂದರ್ಭದಲ್ಲಿ ಅವೈಜ್ಞಾನಿಕವಾಗಿ ಮಣ್ಣು ಹಾಕಿ ಭೂಮಿಯನ್ನು ಎತ್ತರಿಸಿ ಮನೆ ನಿರ್ಮಿಸಿದ್ದಾರೆ. ಹಾಕಲಾದ ಮಣ್ಣು ಸವಕಳಿಯಾಗದಂತೆ ಯಾವುದೇ ಮುನ್ನೆಚ್ಚರಿಕೆ ವಹಿಸದ ಕಾರಣ ಮಳೆಗಾಲದಲ್ಲಿ ಮಣ್ಣೆಲ್ಲಾ ಕರಗಿ ರಸ್ತೆ ಬದಿಯ ಚರಂಡಿಗೆ ಬಂದು ಬಿದ್ದಿದೆ. ಇದರಿಂದಾಗಿ ಚರಂಡಿಯಲ್ಲಿ ನೀರು ಸರಾಗವಾಗಿ ಹರಿದು ಹೋಗದೇ ರಸ್ತೆಯಲ್ಲಿಯೇ ಚರಂಡಿ ನೀರು ಹರಿದು ಹೋಗುವಂತಾಗಿದೆ. ಇದರಿಂದಾಗಿ ರಸ್ತೆಯಲ್ಲಿ ನಡೆದು ಹೋಗಲೂ ಸಾಧ್ಯವಾಗದೆ ಸಮಸ್ಯೆಯಾಗಿದೆ. ಚರಂಡಿ ನೀರು ರಸ್ತೆಯಲ್ಲೇ ಹೋಗುವುದರಿಂದ ರಸ್ತೆಯಲ್ಲಿ ವಾಹನ ಸಂಚಾರಕ್ಕೂ ಅಸಾಧ್ಯ ಎನ್ನುವ ಸ್ಥಿತಿ ನಿರ್ಮಾಣವಾಗಿದೆ ಎಂದು ಬಜತ್ತೂರು ಗ್ರಾಮದ ರೆಂಜಾಳ ನಿವಾಸಿ ಪ್ರೇಮ ಎಂಬವರು ಬಜತ್ತೂರು ಗ್ರಾಮ ಪಂಚಾಯತ್‌ಗೆ ದೂರು ನೀಡಿದ್ದಾರೆ. ಮಾತ್ರವಲ್ಲದೆ ಅಬ್ಬಾಸ್‌ರವರ ಮನೆಯ ತ್ಯಾಜ್ಯದ ನೀರು ಹೋಗುವ ಪೈಪನ್ನು ಭೂಮಿಯಲ್ಲಿ ಹುದುಗಿ ಹಾಕಬೇಕೆಂದೂ ತಿಳಿಸಿದ್ದರೂ ಅದನ್ನು ಕಡೆಗಣಿಸಿ ಮಣ್ಣಿನ ಮೇಲೆಯೇ ಹಾಕಲಾಗಿದೆ. ಇದರಿಂದಲೂ ಯಾವುದೇ ಸಮಯದಲ್ಲಿ ಸಮಸ್ಯೆ ಉದ್ಬವವಾಗುವ ಸಾಧ್ಯತೆ ಉಂಟು ಮಾಡಲಾಗಿದೆ.

ಅಬ್ಬಾಸ್‌ರವರಿಂದ ಉಂಟಾದ ಸಾರ್ವಜನಿಕ ಸಮಸ್ಯೆಯನ್ನು ಬಗೆಹರಿಸಲು ಅಗತ್ಯ ಇಲಾಖಾತ್ಮಕ ಕ್ರಮವನ್ನು ಕೈಗೊಂಡು ರಸ್ತೆ ಹಾಗೂ ಚರಂಡಿಯನ್ನು ಸುಸ್ಥಿತಿಯಲ್ಲಿಡಬೇಕೆಂದು ಪ್ರೇಮಾರವರು ಬಜತ್ತೂರು ಗ್ರಾ.ಪಂ.ಗೆ ನೀಡಿರುವ ದೂರಿನಲ್ಲಿ ತಿಳಿಸಿದ್ದಾರೆ.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.