HomePage_Banner
HomePage_Banner
HomePage_Banner
HomePage_Banner
HomePage_Banner
HomePage_Banner

ಎಡನೀರು ಕೇಶವಾನಂದ ಭಾರತೀ ಸ್ವಾಮೀಜಿ ಅಭಿಮಾನಿ ಬಳಗದಿಂದ ಸ್ಮರಣೆ

Puttur_Advt_NewsUnder_1
Puttur_Advt_NewsUnder_1
  • ಪುತ್ತೂರಿನ ನಿಕಟವರ್ತಿಗಳು – ಶಕುಂತಳಾ ಶೆಟ್ಟಿ
  • ಪ್ರೀತಿ, ವಿಶ್ವಾಸ, ಆಧರಾತಿಥ್ಯದ ಶ್ರೀಗಳು – ಕೆ.ಸೀತಾರಾಮ ರೈ
  • ಎಲ್ಲಾ ಧರ್ಮದವರನ್ನು ಸಮಾನವಾಗಿ ಕಂಡವರು – ವೇಮೂ| ಶ್ರೀವತ್ಸ ಕೆದಿಲಾಯ
  • ನಿಷ್ಠುರತೆ ಪ್ರೀತಿಯ ಸಂಕೇತವಾಗಿತ್ತು – ಕಾವು ಹೇಮನಾಥ ಶೆಟ್ಟಿ
  • ಎಲ್ಲಾ ಮಠಗಳ ಜಮೀನು ಉಳಿಸಿದ ಕೀರ್ತಿ – ಹರೀಶ್ ಪುತ್ತೂರಾಯ

ಪುತ್ತೂರು: ಇತ್ತೀಚೆಗೆ ಬ್ರಹ್ಮೈಕ್ಯರಾದ ಎಡನೀರು ಶ್ರೀ ಕೇಶವಾನಂದ ಭಾರತೀ ಸ್ವಾಮೀಜಿಯವರ ಅಭಿಮಾನಿ ಬಳಗದಿಂದ ಇಲ್ಲಿನ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಕಚೇರಿ ಸಭಾಂಗಣದಲ್ಲಿ ಸೆ.24ರಂದು ಸ್ಮರಣೆ ಕಾರ್ಯಕ್ರಮ ನಡೆಯಿತು. ಮಾಜಿ ಶಾಸಕಿ ಶಕುಂತಳಾ ಶೆಟ್ಟಿಯವರು ದೀಪ ಪ್ರಜ್ವಲಿಸಿ ನುಡಿನಮನ ಸಲ್ಲಿಸಿದರು. ಬಳಿಕ ಅಭಿಮಾನಿ ಬಳಗದವರು ಶ್ರೀಗಳ ಭಾವ ಚಿತ್ರಕ್ಕೆ ಪುಷ್ಪಾರ್ಚನೆ ಮಾಡಿದರು. ‌

ಶ್ರೀಗಳಿಗೂ ಪುತ್ತೂರಿಗೂ ಬಹಳ ಹತ್ತಿರದ ಸಂಪರ್ಕ:
ಮಾಜಿ ಶಾಸಕಿ ಶಂಕುತಳಾ ಶೆಟ್ಟಿಯವರು ಮಾತನಾಡಿ ಎಡನೀರು ಶ್ರೀಗಳು ಧಾರ್ಮಿಕ ವಿಚಾರದ ಜೊತೆಗೆ ಸಾಹಿತ್ಯಾತ್ಮಕವಾಗಿದ್ದರು. ಇದು ಮುಂದೆ ಪುತ್ತೂರಿನ ಸಂಬಂಧವನ್ನು ಗಟ್ಟಿ ಮಾಡಿಸಿತ್ತು. ಪುತ್ತೂರಿನಲ್ಲಿ ಯಕ್ಷಗಾನ ಸಪ್ತಾಹಕ್ಕೆ ಆರಂಭದಲ್ಲಿ ನಮ್ಮ ಮೂಲಕವೇ ಚಾಲನೆ ನೀಡಿದ್ದರು. ಹಾಗಾಗಿ ಪುತ್ತೂರಿನ ಸಂಪರ್ಕ ಅವರಿಗೆ ಬಹಳ ಹತ್ತಿರವಾಯಿತು ಎಂದರು.

ಪ್ರೀತಿ, ವಿಶ್ವಾಸ, ಆಧರಾತಿಥ್ಯದ ಶ್ರೀಗಳು:
ಸವಣೂರು ವಿದ್ಯಾರಶ್ಮಿ ಸಮೂಹ ಸಂಸ್ಥೆಗಳ ಸಂಚಾಲಕ ಕೆ.ಸೀತಾರಾಮ ರೈ ಸವಣೂರು ಅವರು ಮಾತನಾಡಿ ನನ್ನ ಎಲ್ಲಾ ಸಂಸ್ಥೆಗಳು ಎಡನೀರು ಶ್ರೀಗಳೇ ಉದ್ಘಾಟಿಸಿದ್ದರು. ಅವರ ಕೈಗುಣದಿಂದ ಎಲ್ಲವೂ ಅಭಿವೃದ್ಧಿಯಲ್ಲಿ ಸಾಗುತ್ತದೆ. ಪ್ರೀತಿ, ವಿಶ್ವಾಸ ಆಧರಾತಿಥ್ಯಗಳು ಎಡನೀರು ಶ್ರೀಗಳಲ್ಲಿತ್ತು ಎಂದು ಹೇಳಿದರು.

ಎಲ್ಲಾ ಧರ್ಮದವರನ್ನು ಸಮಾನವಾಗಿ ಕಂಡವರು:
ವೇ.ಮೂ| ಶ್ರೀವತ್ಸ ಕೆದಿಲಾಯ ಅವರು ಮಾತನಾಡಿ ಹಲವಾರು ವಿಚಾರವನ್ನು ಅಧ್ಯಯನ ಮಾಡಿ ಎಲ್ಲದರಲ್ಲೂ ಉತ್ತಮ ಪ್ರಭುತ್ವವನ್ನು ಪಡೆದ ಶ್ರೀಗಳು ಯಕ್ಷಗಾನ, ಸಾಹಿತ್ಯ, ಸಂಗೀತ, ಯಜ್ಞವಿಚಾರದಲ್ಲಿ ಆಸಕ್ತಿ ಹೊಂದಿದ್ದರು. ವಸುದೈವಕುಟುಂಬಕಂ ಎಂಬಂತೆ ಎಲ್ಲಾ ಧರ್ಮದವರನ್ನು ಸಮಾನವಾಗಿ ಕಾಣುತ್ತಿದ್ದರು ಎಂದರು.

ನಿಷ್ಠುರತೆ ಪ್ರೀತಿಯ ಸಂಕೇತವಾಗಿತ್ತು:
ಶ್ರೀ ರಾಮಕೃಷ್ಣ ಪ್ರೌಢಶಾಲೆಯ ಸಂಚಾಲಕ ಕಾವು ಹೇಮನಾಥ ಶೆಟ್ಟಿಯವರು ಮಾತನಾಡಿ ಶ್ರೀಗಳನ್ನು ಅಪರೂಪಕ್ಕೆ ಭೇಟಿ ಮಾಡಿದರೆ ಅವರಿಗೆ ನಮ್ಮ ಮೇಲೆ ಕೋಪವು ಬರುತ್ತಿತ್ತು. ಅದು ಪ್ರೀತಿಯ ಕೋಪ, ನಿಷ್ಠುರತೆ ಆಗಿತ್ತು. ಪುತ್ತೂರಿನಲ್ಲಿ ಎಲ್ಲೇ ಬ್ರಹ್ಮಕಲಶೋತ್ಸವ ಆಗಲಿ ಅಲ್ಲಿ ಮೊದಲು ಹೆಸರು ಬರುವುದು ಎಡನೀರು ಶ್ರೀಗಳದ್ದು ಎಂದು ಹೇಳಿದರು.

ಎಲ್ಲಾ ಮಠಗಳ ಜಮೀನು ಉಳಿಸಿದ ಕೀರ್ತಿ:
ಶಿವಳ್ಳಿ ಸಂಪದದ ತಾಲೂಕು ಅಧ್ಯಕ್ಷ ಹರೀಶ್ ಪುತ್ತೂರಾಯ ಅವರು ಮಾತನಾಡಿ ಎಲ್ಲಾ ಆಯಾಮದಲ್ಲೂ ಜನರಲ್ಲಿ ಜಾಗೃತಿ ಮೂಡಿಸಿದ ಏಕೈಕ ಸ್ವಾಮೀಜಿ ಎಡನೀರು ಶ್ರೀಗಳು. ಧರ್ಮದ ಜಾಗೃತಿಯ ಜೊತೆಗೆ ಎಲ್ಲಾ ಮಠಗಳ ಜಮೀನನ್ನು ಉಳಿಸಿದ ಕೀರ್ತಿ ಎಡನೀರು ಶ್ರೀಗಳಿಗೆ ಸಲ್ಲುತ್ತದೆ ಎಂದರು.

ಸ್ವರ್ಣೋದ್ಯಮಿ ಜಿ.ಎಲ್ ಆಚಾರ್ಯ ಜ್ಯುವೆಲ್ಲರ್ಸ್ ನ ಜಿ.ಎಲ್.ಬಲರಾಮ ಆಚಾರ್ಯ, ಶಿವಳ್ಳಿ ಸಂಪದ ತಾಲೂಕು ಕಾರ್ಯದರ್ಶಿ ಕೃಷ್ಣಪ್ರಸಾದ್ ಕೆದಿಲಾಯ, ಕೃಷ್ಣಪ್ರಸಾದ್ ಆಳ್ವ, ಕೆಮ್ಮಾಯಿ ಶ್ರೀ ಮಹಾವಿಷ್ಣುಮೂರ್ತಿ ದೇವಸ್ಥಾನದ ಶ್ರೀಧರ್, ವಿವೇಕಾನಂದ ಕಾಲೇಜಿನ ನಿವೃತ್ತ ಪ್ರಾಂಶುಪಾಲ ಎ.ವಿ.ನಾರಾಯಣ್, ಶಿವಳ್ಳಿ ಸಂಪದದ ವತ್ಸಲರಾಜ್ಞಿ, ಪ್ರೊ.ವೇದವ್ಯಾಸ ರಾಮಕುಂಜ, ಸತೀಶ್ ಕೆದಿಲಾಯ, ಸುದೀಂದ್ರ ಕುದ್ದಣ್ಣಾಯ, ಪುತ್ತೂರು ಸಿಟಿ ಆಸ್ಪತ್ರೆಯ ಆಡಳಿತ ವೈದ್ಯಾಧಿಕಾರಿ ಡಾ. ಭಾಸ್ಕರ್ ಎಸ್, ಮಂಜುಳ ಸುಬ್ರಹಣ್ಯ, ಅನ್ನಪೂರ್ಣ, ವೆಂಕಟೇಶ್‌ಮೂರ್ತಿ, ಸುದರ್ಶನ್ ತೋಳ್ಪಾಡಿ, ಶರತ್ ಕುಮಾರ್, ಪದ್ಯಾಣ ಶಂಕರನಾರಾಯಣ ಭಟ್, ರವಿಪ್ರಸಾದ್ ಶೆಟ್ಟಿ, ಜಯಲಕ್ಷ್ಮೀ ಸೇರಿದಂತೆ ಹಲವಾರು ಮಂದಿ ಸಂಸ್ಮರಣಾ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ಬೊಳ್ವಾರು ಆಂಜನೇಯ ಯಕ್ಷಗಾನ ಕಲಾಸಂಘದ ಅಧ್ಯಕ್ಷ ಭಾಸ್ಕರ ಬಾರ್ಯ ರವರು ಕಾರ್ಯಕ್ರಮ ನಿರ್ವಹಿಸಿದರು.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.