HomePage_Banner
HomePage_Banner
HomePage_Banner
HomePage_Banner
HomePage_Banner
HomePage_Banner

ನೂಜಿಬಾಳ್ತಿಲ ಕ್ಲಸ್ಟರ್: ಶಿಕ್ಷಕರಿಗೆ ತರಬೇತಿ ಕಾರ್ಯಾಗಾರ

Puttur_Advt_NewsUnder_1
Puttur_Advt_NewsUnder_1

ಕಡಬ: ನೂಜಿಬಾಳ್ತಿಲ ಕ್ಲಸ್ಟರ್ ಮಟ್ಟದ ಶಾಲಾ ಮುಖ್ಯ ಶಿಕ್ಷಕರು ಹಾಗೂ ಸಹಶಿಕ್ಷಕರುಗೆ ಸೆ.21ರಿಂದ 10 ದಿನಗಳ ಪಠ್ಯಪುಸ್ತಕ ಪುನಶ್ಚೇತನ ತರಬೇತಿ ಕಾರ್ಯಾಗಾರಕ್ಕೆ ರೆಂಜಿಲಾಡಿ ಶಾಲೆಯಲ್ಲಿ ಚಾಲನೆ ನೀಡಲಾಯಿತು. ನೂಜಿಬಾಳ್ತಿಲ ಕ್ಲಸ್ಟರ್ ಸಿ.ಆರ್‌.ಪಿ. ಗೋವಿಂದ ನಾಯಕ್ ಕಾರ್ಯಕ್ರಮ ಉದ್ಘಾಟಿಸಿ, ತರಬೇತಿಯ ಅಗತ್ಯತೆ, ಶಿಕ್ಷಕರು ಬದಲಾದ ಶೈಕ್ಷಣಿಕ ವಿಚಾರಗಳಿಗೆ ಪುನಶ್ಚೇತನಗೊಳಿಸುವ ಅಗತ್ಯತೆ ಹಾಗೂ ಮನನ ಮಾಡಿಕೊಳ್ಳುವುದು ಪ್ರತಿಯೊಬ್ಬ ಶಿಕ್ಷಕರ ಕರ್ತವ್ಯವಾಗಿದೆ ಎಂದರು.

ಸಂಪನ್ಮೂಲ ವ್ಯಕ್ತಿಯಾಗಿ ನೇರ್ಲ ಶಾಲಾ ಶಿಕ್ಷಕ ಗಿರೀಶ್ ಕನ್ನಡ ಭಾಷೆಯ ಬೆಳವಣಿಗೆ ಹಾಗೂ ಕನ್ನಡ ಭಾಷಾ ಕೌಶಲ್ಯಗಳ ಬಗ್ಗೆ ಚಟುವಟಿಕೆ ಆಧಾರಿತವಾಗಿ ತರಬೇತಿ ನೀಡಿದರು.

ರೆಂಜಿಲಾಡಿ ಶಾಲಾ ಮುಖ್ಯ ಶಿಕ್ಷಕ ಮೇದಪ್ಪ ಗೌಡ ಅಧ್ಯಕ್ಷತೆ ವಹಿಸಿ ಮಾತನಾಡಿ, ಶಿಕ್ಷಣ ವ್ಯವಸ್ಥೆಯಲ್ಲಿ ಶಿಕ್ಷಕರ ಪಾತ್ರ ಮಹತ್ವದ್ದಾಗಿದ್ದು, ತಮ್ಮ ಬೋಧನಾ ವೃತ್ತಿಯಲ್ಲಿ ಕ್ರಿಯಾಶೀಲತೆ ಪಡೆಯಲು ತರಭೇತಿ ಅವಶ್ಯಕ ಎಂದರು. ರೆಂಜಿಲಾಡಿ ಶಾಲಾ ಶಿಕ್ಷಕಿ ವಸಂತಿ ಸ್ವಾಗತಿಸಿ, ರೆಂಜಿಲಾಡಿ ಶಾಲಾ ಸಹಶಿಕ್ಷಕಿ ಸುವರ್ಣ ಲತಾ ವಂದಿಸಿದರು. ಕೊರಮೇರು ಶಾಲಾ ಶಿಕ್ಷಕ ಪ್ರಕಾಶ್ ಕಾರ್ಯಕ್ರಮ ನಿರೂಪಿಸಿದರು.  ನೂಜಿಬಾಳ್ತಿಲ ಕ್ಲಸ್ಟರ್ ವ್ಯಾಪ್ತಿಯ 22 ಶಿಕ್ಷಕರು ತರಬೇತಿಯಲ್ಲಿ ಭಾಗವಹಿಸಿದ್ದರು.

ಸೆ.22ರಂದು ಎರಡನೇ ದಿನದ ತರಭೇತಿಯಲ್ಲಿ ಇಂಗ್ಲಿಷ್ ಭಾಷಾ ಬೋಧನೆ ಬಗ್ಗೆ ಅಡೆಂಜ ಶಾಲಾ ಮುಖ್ಯ ಶಿಕ್ಷಕಿ ಎಲಿಯಮ್ಮ ಅವರು ತರಬೇತಿ ನಡೆಸಿದರು. ನೇರ್ಲ, ನೂಜಿಬಾಳ್ತಿಲ, ರೆಂಜಿಲಾಡಿ, ಅಡೆಂಜ, ನೂಜಿ ರೆಂಜಿಲಾಡಿ, ಕೊರಮ್ಮೇರು, ಮೀನಾಡಿ ಶಾಲಾ ಶಿಕ್ಷಕರು ಭಾಗವಹಿಸಿದ್ದರು.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.