HomePage_Banner
HomePage_Banner
HomePage_Banner
HomePage_Banner
HomePage_Banner
HomePage_Banner

ಫೇಸ್‌ಬುಕ್ ಕಪಲ್ ಚಾಲೆಂಜ್…? ಫೋಟೋ,ವಿಡಿಯೋ ಅಪ್‌ಲೋಡ್ ಮಾಡುವ ಮುನ್ನ ಎಚ್ಚರ!

Puttur_Advt_NewsUnder_1
Puttur_Advt_NewsUnder_1

@ ಸಿಶೇ ಕಜೆಮಾರ್

ಪುತ್ತೂರು: ಯುವ ಜನಾಂಗದಿಂದ ಹಿಡಿದು ವೃದ್ಧರ ತನಕ ಕ್ರೇಜ್ ಹುಟ್ಟು ಹಾಕುವ ಫೇಸ್‌ಬುಕ್ ಒಂದಲ್ಲ ಒಂದು ವಿಭಿನ್ನ ಪ್ರಯತ್ನಗಳನ್ನು ಮಾಡುತ್ತಲೆ ಇರುತ್ತದೆ. ಇದೀಗ ಹೊಸದಾಗಿ ಫೇಸ್‌ಬುಕ್‌ನಲ್ಲಿ ಕ್ರಿಯೇಟ್ ಆಗಿರುವ ಕಪಲ್ ಚಾಲೆಂಜ್, ಸಿಂಗಲ್ ಚಾಲೆಂಜ್, ಫ್ಯಾಮಿಲಿ ಚಾಲೆಂಜ್, ಸ್ಮೈಲ್ ಚಾಲೆಂಜ್ ಇತ್ಯಾದಿ ಚಾಲೆಂಜಿಂಗ್ ಫೋಟೋ ಅಪ್‌ಲೋಡ್ ಮಾಡುವ ಕ್ರೇಜ್ ದಿನದಿಂದ ದಿನಕ್ಕೆ ಹೆಚ್ಚುತ್ತಲೆ ಇದೆ. ಹೊಸತಾಗಿ ಮದುವೆಯಾದವರಿಂದ ಹಿಡಿದು ಎಲ್ಲರೂ ವಿವಿಧ ಫೋಸ್‌ಗಳ ಫೋಟೋ, ವೀಡಿಯೋಗಳನ್ನು ಅಪ್‌ಲೋಡ್ ಮಾಡುತ್ತಿದ್ದಾರೆ. ಈ ಬಗ್ಗೆ ಎಚ್ಚೆತ್ತುಕೊಂಡ ಸೈಬರ್ ಎಕ್ಸ್‌ಫರ್ಟ್ ಸಾರ್ವಜನಿಕರಿಗೆ ಎಚ್ಚರಿಕೆಯನ್ನು ಕೊಟ್ಟಿದೆ. ನಿಮ್ಮ ಕುಟುಂಬದ ಜೊತೆಗಿನ ಅಥವಾ ದಂಪತಿಯ ಫೋಟೋ, ವಿಡಿಯೋ ಅಪ್‌ಲೋಡ್ ಮಾಡುವ ಮುನ್ನ ಯೋಚಿಸಬೇಕು ಇದರಿಂದ ಅಪಾಯ ಸಂಭವಿಸುವ ಸಾಧ್ಯತೆ ಇದೆ ಎಂದು ತಿಳಿಸಿದೆ.

ಏನಿದು ಕಪಲ್ ಚಾಲೆಂಜ್..?
ಫೇಸ್‌ಬುಕ್‌ನಲ್ಲಿ ಹೊಸತಾಗಿ ಕ್ರಿಯೇಟ್ ಮಾಡಿದ ಕ್ರೇಜೀ ಚಾಲೆಂಜ್. ಈ ಚಾಲೆಂಜ್‌ನಲ್ಲಿ ನೀವು ನಿಮ್ಮ ಹೆಂಡ್ತಿಯ ಜೊತೆ ತೆಗೆಸಿಕೊಂಡ ವಿಭಿನ್ನ ಶೈಲಿಗಳ ಫೋಟೋಗಳನ್ನು ಅಪ್‌ಲೋಡ್ ಮಾಡಬೇಕು. ಈ ಫೋಟೋಗೆ ಲೈಕ್, ಕಮೆಂಟ್‌ಗಳು ಬರುತ್ತದೆ. ಇದೇ ರೀತಿ ಪ್ಯಾಮಿಲಿಯ ಜೊತೆ ಅಂದರೆ ಹೆಂಡ್ತಿ ಮಕ್ಕಳ ಜೊತೆ ತೆಗೆಸಿಕೊಂಡ ಫೋಟೋಗಳನ್ನು ಕೂಡ ಅಪ್‌ಲೋಡ್ ಮಾಡುತ್ತಿದ್ದಾರೆ. ಇದಕ್ಕೆ ಸರಿಸಾಟಿಯಾಗಿ ಮದುವೆಯಾಗದೇ ಇರುವವರು ಸಿಂಗಲ್ ಚಾಲೆಂಜ್ ಅಂತ ಹೊಸ ಹೊಸ ನಮೂನೆಯ ಫೋಟೋಗಳನ್ನು ಅಪ್‌ಲೋಡ್ ಮಾಡುತ್ತಿದ್ದಾರೆ. ಕೆಲವರು ತಮ್ಮ ಪ್ರಿಯತಮೆಯ ಜೊತೆ ತೆಗೆಸಿಕೊಂಡು ಫೋಟೋಗಳನ್ನು ಕೂಡ ಫೇಸ್‌ಬುಕ್‌ ಗೆ ಹಾಕುತ್ತಿದ್ದಾರೆ. 

ಇದರಿಂದ ಸಮಸ್ಯೆ ಆಗುತ್ತದಾ?
ಕೇವಲ ಫೋಟೋಗಳನ್ನು ಮಾತ್ರವಲ್ಲ ತಮ್ಮ ಪ್ಯಾಮಿಲಿಯ ಬಯೋಡಾಟವನ್ನು ಕೂಡ ಕೆಲವು ಮಂದಿ ಅಪ್‌ಲೋಡ್ ಮಾಡುತ್ತಿದ್ದಾರೆ. ಇದರಿಂದ ಸಮಸ್ಯೆ ಉಂಟಾಗುವ ಸಾಧ್ಯತೆ ಇದೆ ಎಂದು ಸೈಬರ್ ಪೊಲೀಸರು ಎಚ್ಚರಿಕೆ ನೀಡಿದ್ದಾರೆ. ಹ್ಯಾಕರ್‌ಗಳು ಪೋಟೋಗಳನ್ನು ಕದ್ದಾಲಿಕೆ ಮಾಡಿ ಬ್ಲ್ಯಾಕ್‌ಮೇಲ್ ಮಾಡುವ ಸಾಧ್ಯತೆಯೂ ಇದೆ. ಅಲ್ಲದೆ ಪೇಸ್‌ಬುಕ್ ಅಕೌಂಟ್ ಹ್ಯಾಕ್ ಮಾಡಿ ದುರುಪಯೋಗಪಡಿಸಿಕೊಳ್ಳುವ ಚಾನ್ಸ್ ಇದೆ. ಅಲ್ಲದೆ ನಿಮ್ಮ ಮನೆಯ ಮಾಹಿತಿಯನ್ನು ಸಂಗ್ರಹಿಸಿ ದರೋಡೆ ಇತ್ಯಾದಿ ಹೇಯಕೃತ್ಯಗಳನ್ನು ಮಾಡಲು ಸಾಧ್ಯವಿದೆ ಎನ್ನುತ್ತಾರೆ ಪೊಲೀಸರು. ಇನ್ನೂ ಹುಡುಗಿಯರು, ಲವರ್ಸ್ ಗಳು ಫೋಟೋ ಅಪ್‌ಲೋಡ್ ಮಾಡುವುದರಿಂದ ಈ ಫೋಟೋಗಳನ್ನು ಬಳಸಿಕೊಂಡು ಹೀನ ಕೃತ್ಯಗಳನ್ನು ಮಾಡುವ ಖದೀಮರ ತಂಡವೂ ಇದೆ ಎಂದು ಸೈಬರ್ ಕ್ರೈಂ ಬ್ಯೂರೋ ಎಚ್ಚರಿಕೆ ನೀಡಿದೆ.

ಸಾಮಾಜಿಕ ಜಾಲತಾಣಗಳಲ್ಲಿ ಫೋಟೋ, ವಿಡಿಯೋ ಮತ್ತು ಮಾಹಿತಿಗಳನ್ನು ಹಂಚಿಕೊಳ್ಳುವ ಮುನ್ನ ಯೋಚಿಸುವುದು ಒಳಿತು. ನಿಮ್ಮ ಪ್ಯಾಮಿಲಿಯ ಬಗ್ಗೆಯಾಗಲಿ ಅಥವಾ ನಿಮ್ಮ ಬಗ್ಗೆ ಇರುವ ಸೂಕ್ಷ್ಮ ವಿಷಯಗಳನ್ನು ಹಂಚಿಕೊಳ್ಳಬೇಡಿ. ಇದರಿಂದ ಅಪಾಯ ಸಾಧ್ಯತೆ ಇದೆ – ತಿಮ್ಮಪ್ಪ ನಾಯ್ಕ ಇನ್ಸ್ಪೆಕ್ಟರ್, ಸೈಬರ್ ಇನ್ಸ್‌ಪೆಕ್ಟರ್ ಮಂಗಳೂರು

ಕಳೆದ ಕೆಲವು ದಿನಗಳಿಂದ ಇಂತದೊಂದು ಚಾಲೆಂಜ್ ಫೇಸ್‌ಬುಕ್‌ ನಲ್ಲಿ ಹರಿದಾಡುತ್ತಿದೆ. ಇದು ಸ್ಪರ್ಧೆಯೋ ಅಥವಾ ಬೇರೆ ಏನೋ ಯಾವುದು ಅರ್ಥವಾಗುತ್ತಿಲ್ಲ. ಗಂಡ ಹೆಂಡ್ತಿ ಫೋಟೋ ಅಪ್‌ಲೋಡ್ ಮಾಡಿ ಮುಂದೊಂದು ದಿನ ನಮಗೆ ನಾವೇ ಅಪಾಯ ತಂದುಕೊಳ್ಳುವ ಮುನ್ನ ಎಚ್ಚೆತ್ತುಕೊಳ್ಳುವುದು ಒಳಿತು. ಸಾಮಾಜಿಕ ಜಾಲತಾಣಗಳಲ್ಲಿ ಫೋಟೋ,ವಿಡಿಯೋ, ಮಾಹಿತಿ ಅಪ್‌ಲೋಡ್ ಮಾಡುವ ಮುನ್ನ ಯೋಚಿಸುವುದು ಸೂಕ್ತ – ಸುಂದರ್ ರೈ ಮಂದಾರ, ನಟ, ನಿರ್ದೇಶಕ

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.