HomePage_Banner
HomePage_Banner
HomePage_Banner
HomePage_Banner
HomePage_Banner
HomePage_Banner

ಪ್ರೇಮಿಗಳ ವಿವಾಹಕ್ಕೆ ಆಪತ್ಬಾಂಧವರಾದ ಅಂಬೇಡ್ಕರ್ ಆಪತ್ಬಾಂಧವ ಟ್ರಸ್ಟ್

Puttur_Advt_NewsUnder_1
Puttur_Advt_NewsUnder_1
  • ಮನೆಯವರ ಆಕ್ಷೇಪ-ಅಂಬೇಡ್ಕರ್ ಆಪತ್ಬಾಂಧವ ಟ್ರಸ್ಟ್ ಮೊರೆ ಹೋದ ಹುಡುಗಿ
  • ಟ್ರಸ್ಟ್‌ನ ನೇತೃತ್ವದಲ್ಲಿ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಮದುವೆ

ಪುತ್ತೂರು:ಕಳೆದ ಐದು ವರ್ಷಗಳಿಂದ ಪರಸ್ಪರ ಪ್ರೀತಿಸುತ್ತಿದ್ದು ಪ್ರೇಮಿಗಳ ಮದುವೆಗೆ ಹುಡುಗಿಯ ಮನೆಯವರ ಆಕ್ಷೇಪದ ಹಿನ್ನೆಲೆಯಲ್ಲಿ ಪ್ರೇಮಿಗಳಿಗೆ ಅಂಬೇಡ್ಕರ್ ಆಪತ್ಬಾಂಧವ ಟ್ರಸ್ಟ್‌ನ ನೇತೃತ್ವದಲ್ಲಿ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ವಿವಾಹ ನಡೆಸಿದ ಘಟನೆ ಸೆ.25ರಂದು ನಡೆದಿದೆ.

ಕೆಯ್ಯೂರು ನಿವಾಸಿ ರಿಕ್ಷಾ ಚಾಲಕ ಚಿದಾನಂದ ನಾಯ್ಕ ಹಾಗೂ ಕುಂಬ್ರ ಸಾರೆಪುಣಿ ನಿವಾಸಿ ಶ್ಯಾಮಲಾ ಗೃಹಸ್ಥಾಶ್ರಮ ಪ್ರವೇಶಿಸಿದ ಪ್ರೇಮಿಗಳು. ರಿಕ್ಷಾ ಚಾಲಕನಾಗಿರುವ ಚಿದಾನಂದ ನಾಯ್ಕ ಹಾಗೂ ದರ್ಬೆ ಮೆಡಿಕಲ್‌ವೊಂದರಲ್ಲಿ ಉದ್ಯೋಗಿಯಾಗಿದ್ದ ಕುಂಬ್ರ ಸಾರೆಪುಣಿಯ ಶ್ಯಾಮಲರಾವರು ಕಳೆದ ಐದು ವರ್ಷಗಳಿಂದ ಪರಸ್ಪರ ಪ್ರೀತಿಸುತ್ತಿದ್ದರು. ಅವರಿಬ್ಬರೂ ಮದುವೆಯಾಗಲು ಸಿದ್ದತೆ ನಡೆಸಿದ್ದರು. ಆದರೆ ಪ್ರೇಮಿಗಳ ಮದುವೆ ಹುಡಗನ ಮನೆಯವರ ಒಪ್ಪಿಗೆ ಸೂಚಿಸಿದ್ದರೂ ಹುಡುಗಿಯ ಮನೆಯವರು ಮದುವೆಗೆ ಆಕ್ಷೇಪ ವ್ಯಕ್ತಪಡಿಸಿದ್ದರು.

ಅಲ್ಲದೆ ಹುಡುಗಿಯ ಮನೆಯವರು ಹುಡುಗಿಗೆ ಏನೆಕಲ್‌ನ ಬೇರೊಬ್ಬ ಹುಡುಗನೊಂದಿಗೆ ಅ.೨೮ರಂದು ಮದುವೆ ಮಾಡಿಸಲು ಸಿದ್ದತೆ ನಡೆಸಿದ್ದರು. ಇದನ್ನರಿತ ಹುಡುಗಿಯು ಸೆ.೨೩ರಂದು ಅಂಬೇಡ್ಕರ್ ಆಪತ್ಬಾಂಧವ ಟ್ರಸ್ಟ್‌ನ ಕಚೇರಿ ಬಂದು ದೂರು ನೀಡಿ ಪರಸ್ಪರ ಪ್ರೀತಿಸುತ್ತಿರುವ ನಮಗೆ ಮದುವೆ ಮಾಡಿಸುವಂತೆ ವಿನಂತಿಸಿದ್ದಳು. ಹುಡುಗಿಯ ದೂರಿನ ಹಿನ್ನೆಲೆಯಲ್ಲಿ ಟ್ರಸ್ಟ್‌ನ ಪದಾಧಿಕಾರಿಗಳ ಸಭೆ ನಡೆಸಿ, ಪ್ರೇಮಿಗಳನ್ನು ಟ್ರಸ್ಟ್‌ನ ಕಚೇರಿಗೆ ಕರೆಯಿಸಿ ಚರ್ಚಿಸಿದ ಬಳಿಕ ಸಂಪ್ಯ ಪೊಲೀಸರಿಗೆ ದೂರು ನೀಡಿದ್ದರು.

ಸೆ.೨೫ರಂದು ಪ್ರೇಮಿಗಳಿಬ್ಬರನ್ನು ಮಹಾಲಿಂಗೇಶ್ವರ ದೇವಸ್ಥಾನಕ್ಕೆ ಕರೆತಂದು ಟ್ರಸ್ಟ್‌ನ ನೇತೃತ್ವದಲ್ಲಿ ವಿವಾಹ ನೆರವೇರಿಸಿಕೊಟ್ಟಿದ್ದಾರೆ. ಪ್ರೇಮಿಗಳ ಮದುವೆಯಲ್ಲಿ ಹುಡುಗ ತಾಯಿ ಹಾಗೂ ಸಹೋದರರು ಹಾಗೂ ಟ್ರಸ್ಟ್‌ನ ಪದಾಧಿಕಾರಿಗಳು ಹಾಗೂ ಸದಸ್ಯರು ಭಾಗವಹಿಸಿದ್ದರು.

ಚಿದಾನಂದ ನಾಯ್ಕ ಹಾಗೂ ಶ್ಯಾಮಲರಾವರು ಕಳೆದ 5 ವರ್ಷಗಳಿಂದ ಪ್ರೀತಿಸುತ್ತಿದ್ದರು. ಅವರಿಬ್ಬರೂ ಅಂತರ್‌ಜಾತಿಯವರು. ಆದರೆ ಅವರ ಮದುವೆಗೆ ಹುಡುಗಿ ಮನೆಯವರ ಆಕ್ಷೇಪ ವ್ಯಕ್ತವಾಗಿತ್ತು. ಹುಡಗಿಗೆ ಮನೆಯವರು ಬೇರೊಬ್ಬ ಯುವಕನೊಂದಿಗೆ ಮದುವೆ ನಡೆಸಲು ಸಿದ್ದತೆ ನಡೆಸಿದ್ದರು. ಹೀಗಾಗಿ ಹುಡುಗಿ ನಮ್ಮ ಕಚೇರಿಗೆ ಬಂದು ನಮಗೆ ಮಡುವೆ ಮಾಡಿಸುವಂತೆ ಮನವಿ ಮಾಡಿದ್ದಳು. ಈ ಹಿನ್ನೆಲೆಯಲ್ಲಿ ಅಂಬೇಡ್ಕರ್ ಆಪತ್ಬಾಂಧವ ಟ್ರಸ್ಟ್‌ನ ವತಿಯಿಂದ ಮದುವೆ ನಡೆಸಿಕೊಡಲಾಗಿದೆ ರಾಜು ಹೊಸ್ಮಠ, ಅಧ್ಯಕ್ಷ ಆಪತ್ಬಾಂಧವ ಟ್ರಸ್ಟ್

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.