HomePage_Banner
HomePage_Banner
HomePage_Banner
HomePage_Banner
HomePage_Banner
HomePage_Banner

ರೈತ ವಿರೋಧಿ ಸುಗ್ರೀವಾಜ್ಞೆ ಹಿಂಪಡೆಯದೇ ಇದ್ದಲ್ಲಿ ಹೋರಾಟದಿಂದ ಹಿಂದೆ ಸರಿಯುವುದಿಲ್ಲ-ಸಿದ್ದೀಕ್ ಕೆ.ಎ

Puttur_Advt_NewsUnder_1
Puttur_Advt_NewsUnder_1
  • ನೂತನ ಭೂ ಸುಧಾರಣಾ ಕಾಯ್ದೆ ವಿರೋಧಿಸಿ ಕೇಂದ್ರ, ರಾಜ್ಯ ಸರಕಾರದ ವಿರುದ್ಧ ಆರ್ಯಾಪುವಿನಲ್ಲಿ ಎಸ್.ಡಿ.ಪಿ.ಐ ಪ್ರತಿಭಟನೆ

ಪುತ್ತೂರು: ರೈತ ವಿರೋಧಿ ಸುಗ್ರೀವಾಜ್ಞೆಗಳ ಮೂಲಕ ಕೇಂದ್ರ ಸರಕಾರ ಮತ್ತು ರಾಜ್ಯ ಸರಕಾರ ಜನತೆಯ ಜೀವದ ಜೊತೆ ಚೆಲ್ಲಾಟವಾಡಲು ಹೊರಡಿದೆ ಎಂದು ಎಂದು ಎಸ್.ಡಿ.ಪಿ.ಐ ಪುತ್ತೂರು ವಿಧಾನಸಭಾ ಕ್ಷೇತ್ರ ಸಮಿತಿ ಅಧ್ಯಕ್ಷ ಸಿದ್ದೀಕ್ ಕೆ.ಎ ಹೇಳಿದರು.

ಕೇಂದ್ರ ಮತ್ತು ರಾಜ್ಯ ಸರಕಾರ ಜಾರಿಗೊಳಿಸಿ ರೈತ ವಿರೋಧಿ ಸುಗ್ರೀವಾಜ್ಞೆಗಳನ್ನು ವಿರೋಧಿಸಿ ಎಸ್.ಡಿ.ಪಿ.ಐ ಆರ್ಯಾಪು ವಲಯ ಸಮಿತಿ ವತಿಯಿಂದ ಸೆ.25ರಂದು ಆರ್ಯಾಪು ಗ್ರಾ.ಪಂ ಬಳಿ ನಡೆದ ಪ್ರತಿಭಟನೆಯಲ್ಲಿ ಅವರು ಮಾತನಾಡಿದರು.

ಮೊದಲೇ ನೋಟು ಬ್ಯಾನ್, ಜಿಎಸ್‌ಟಿಯಿಂದ ಕಂಗಾಲಾಗಿ ಹೋಗಿರುವ ಜನರ ಮೇಲೆ ಗದಾಪ್ರಹಾರ ನಡೆಸಲು ಹೊರಟಿರುವ ಕೇಂದ್ರ ಸರಕಾರ ನೂತನ ರೈತ ವಿರೋಧಿ ಸುಗ್ರೀವಾಜ್ಞೆ ಮೂಲಕ ರೈತರನ್ನು ಬೀದಿಗೆ ತಳ್ಳಲು ಮುಂದಾಗಿದೆ, ಈ ಕಾಯ್ದೆ ರೈತ, ಕಾರ್ಮಿಕ ವರ್ಗಕ್ಕೆ ಮಾರಕವಾಗಲಿದ್ದು ರೈತರ ಆತ್ಮಹತ್ಯೆ ಪ್ರಕರಣಗಳು ಹೆಚ್ಚಲಿದೆ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು. ಕೇಂದ್ರ ಸರಕಾರ ಅಂಬಾನಿ, ಅದಾನಿ ಮೊದಲಾದವರಿಗೆ ಅನುಕೂಲ ಮಾಡಿಕೊಡುವ ಉದ್ದೇಶಕ್ಕೆ ಬಡಪಾಯಿ ಜನರನ್ನು ಗುಲಾಮ ಪದ್ದತಿಗೆ ದೂಡುವ ಹುನ್ನಾರ ನಡೆಸುತ್ತಿದೆ, ಜನರು ಮುಂದಕ್ಕೂ ಇದೇ ರೀತಿಯ ಮೌನ ವಹಿಸಿದಲ್ಲಿ ಮುಂದೊಂದು ದಿನ ತರಕಾರಿ ಖರೀದಿ ಮಾಡಲು ಅಂಬಾನಿಯ ಕಾಲ ಬುಡಕ್ಕೆ ಹೋಗಬೇಕಾದ ಪರಿಸ್ಥಿತಿ ಬರಬಹುದು ಎಂದು ಅವರು ಎಚ್ಚರಿಸಿದರು.

ಕೈಕಟ್ಟಿ ಕುಳಿತರೆ ನಮ್ಮ ಭೂಮಿ ಕಾರ್ಪೋರೇಟ್ ಕೈಗೆ ಹೋಗಲಿದೆ:
ಸರಕಾರದ ರೈತ ವಿರೋಧಿ ಸುಗ್ರೀವಾಜ್ಞೆ ವಿರುದ್ಧ ಬೀದಿಗಿಳಿದು ಹೋರಾಟ ನಡೆಸದೇ ಕೈಕಟ್ಟಿ ಕುಳಿತರ ಮುಂದೊಂದು ದಿನ ನಮ್ಮ ಭೂಮಿ ಕಾರ್ಪೋರೇಟ್‌ಗಳ ಕೈಗೆ ಹೋಗುವುದರಲ್ಲಿ ಅನುಮಾನವಿಲ್ಲ ಹಾಗಾಗಿ ಸುಗ್ರೀವಾಜ್ಞೆ ವಾಪಸ್ ಪಡೆಯುವವರೆಗೂ ನಾವೂ ಹೋರಾಟದಿಂದ ಹಿಂದೆ ಸರಿಯಬಾರದು, ಈ ಬಗ್ಗೆ ಮುಂದಕ್ಕೆ ನಡೆಯುವ ರೈತರ ಹೋರಾಟಗಳಿಗೆ ಎಸ್.ಡಿ.ಪಿ.ಐ ಸಂಪೂರ್ಣ ಬೆಂಬಲ ನೀಡಲಿದೆ ಎಂದು ಸಿದ್ದೀಕ್ ಕೆ.ಎ ಹೇಳಿದರು.

ಬಿಜೆಪಿ ವಿರುದ್ಧ ಗ್ರಾಮ ಮಟ್ಟದಲ್ಲೇ ಪ್ರತಿಭಟನೆ ಅನಿವಾರ್ಯ-ರಿಯಾಝ್ ಬಳಕ್ಕ
ಎಸ್.ಡಿ.ಟಿ.ಯು ಪುತ್ತೂರು ತಾಲೂಕು ಕಾರ್ಯದರ್ಶಿ ರಿಯಾಝ್ ಬಳಕ್ಕ ಮಾತನಾಡಿ ಕೇಂದ್ರ ಬಿಜೆಪಿ ಮತ್ತು ರಾಜ್ಯ ಸರಕಾರ ಜನ ಸಾಮಾನ್ಯರ ನೆಮ್ಮದಿ ಕೆಡಿಸುತ್ತಿದೆ, ಹೊಸ ಹೊಸ ಕಾನೂನು, ಕಾಯೆ, ನಿಯಮಾವಳಿಗಳನ್ನು ರೂಪಿಸಿಕೊಂಡು ಜನರ ಬದುಕನ್ನು ದುಸ್ತರಗೊಳಿಸುತ್ತಿದೆ, ಇದನ್ನು ಪ್ರತಿಭಟಿಸಿದ ಹೋರಾಟಗಾರರು, ಬುದ್ದಿಜೀವಿಗಳನ್ನು, ರೈತರನ್ನು ಹತ್ತಿಕ್ಕುವ ಕಾರ್ಯ ನಡೆಯುತ್ತಿದೆ ಎಂದು ಅವರು ಹೇಳಿದರು. ರೈತ ವಿರೋಧಿ ಸುಗ್ರೀವಾಜ್ಞೆ, ಎಪಿಎಂಸಿ ತಿದ್ದುಪಡಿ ಮೂಲಕ ರೈತರನ್ನು ಗುಲಾಮ ಪದ್ದತಿಗೆ ದೂಡುವ ಷಡ್ಯಂತ್ರ ನಡೆಸುತ್ತಿದೆ, ದೇಶದ ಬೆನ್ನೆಲುಬಾಗಿರುವ ರೈತರಿಗೆ ಅನ್ಯಾಯವಾದಾಗ ಪ್ರತಿಯೋರ್ವರೂ ಎಚ್ಚೆತ್ತುಕೊಂಡು ಅದರ ವಿರುದ್ಧ ಹೋರಾಟ ನಡೆಸಬೇಕು ಎಂದು ಹೇಳಿದರು. ಬಿಜೆಪಿಯ ಇಂತಹ ಜನವಿರೋಧಿ ನೀತಿಗಳ ವಿರುದ್ಧ ಗ್ರಾಮ ಮಟ್ಟದಲ್ಲೇ ಪ್ರತಿಭಟಿಸಬೇಕು ಎಂದ ಅವರು ಜನವಿರೋಧಿ, ಸಂವಿಧಾನ ವಿರೋಧಿ ಬಿಜೆಪಿ ಪಕ್ಷ ರೈತರ ಅಸ್ತಿತ್ವದ ಮೇಲೆ ಕೈಹಾಕುವ ಮೂಲಕ ನಾಚಿಕೆಗೇಡಿನ ರಾಜಕೀಯ ಮಾಡುತ್ತಿದೆ ಎಂದು ದೂರಿದರು.

ಎಸ್.ಡಿ.ಪಿ.ಐ ಆರ್ಯಾಪು ವಲಯ ಅಧ್ಯಕ್ಷ ಬಶೀರ್ ವಾಗ್ಲೆ ಪ್ರತಿಭಟನೆಯ ಅಧ್ಯಕ್ಷತೆ ವಹಿಸಿದ್ದರು. ಎಸ್.ಡಿ.ಪಿ.ಐ ಪುತ್ತೂರು ವಿಧಾನಸಭಾ ಸಮಿತಿ ಕಾರ್ಯದರ್ಶಿ ಅಶ್ರಫ್ ಬಾವು, ಆರ್ಯಾಪು ಕೃಷಿ ಪತ್ತಿನ ಸಹಕಾರಿ ಸಂಘದ ನಿರ್ದೇಶಕ ಶಂಸುದ್ದೀನ್ ಕಲ್ಲರ್ಪೆ, ವಿಧಾನಸಭಾ ಸಮಿತಿ ಸದಸ್ಯರಾದ ನಾಗೇಶ್ ಕುರಿಯ, ಪಿಎಫ್‌ಐ ಸಂಪ್ಯ ವಲಯ ಅಧ್ಯಕ್ಷ ಅಶ್ರಫ್ ಸಂಟ್ಯಾರ್ ಮತ್ತಿತರ ಹಲವಾರು ಮಂದಿ ಉಪಸ್ಥಿತರಿದ್ದರು. ಎಸ್.ಡಿ.ಪಿ.ಐ ಸಂಪ್ಯ ವಲಯ ಕಾರ್ಯದರ್ಶಿ ಝಕರಿಯಾ ಸಂಟ್ಯಾರ್ ಸ್ವಾಗತಿಸಿ ವಂದಿಸಿದರು.

ಮನವಿ ಸಲ್ಲಿಕೆ:
ಪ್ರತಿಭಟನೆ ಬಳಿಕ ಎಸ್.ಡಿ.ಪಿ.ಐ ಆರ್ಯಾಪು ವಲಯ ಸಮಿತಿ ವತಿಯಿಂದ ಆರ್ಯಾಪು ಗ್ರಾ.ಪಂ ಪಿಡಿಒ ಮೂಲಕ ರಾಷ್ಟ್ರಪತಿಯವರಿಗೆ ಮನವಿ ಸಲ್ಲಿಸಲಾಯಿತು.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.