HomePage_Banner
HomePage_Banner
HomePage_Banner
HomePage_Banner
HomePage_Banner
HomePage_Banner

ಬೇಕಲ್ ಉಸ್ತಾದ್ ಮತ್ತು ಕಮ್ಮಾಡಿಯವರಿಗೆ ತಹ್‌ಲೀಲ್ ಸಮರ್ಪಣಾ ಕಾರ್ಯಕ್ರಮ

Puttur_Advt_NewsUnder_1
Puttur_Advt_NewsUnder_1
  • ಉಲಮಾ ಮತ್ತು ಉಮರಾಗಳು ಸಮುದಾಯದ ಆಧಾರ ಸ್ಥಂಬಗಳು: ಲುಕ್ಮಾನುಲ್ ಹಕೀಂ

ಪುತ್ತೂರು: ಸೆ. ೨೪ ರಂದು ನಿಧನರಾದ ಇಸ್ಲಾಂ ಕರ್ಮ ಶಾಸ್ತ್ರ ಪಂಡಿಥ ಬೇಕಲ್ ಇಬ್ರಾಹಿಂ ಮುಸ್ಲಿಯಾರ್ ಹಾಗೂ ಸೆ. ೨೩ ರಂದು ನಿಧನರಾದ ಪುತ್ತೂರು ತಾಲೂಕು ಮುಸ್ಲಿಂ ಸಂಯುಕ್ತ ಜಮಾತ್ ಅಧ್ಯಕ್ಷ ಕಮ್ಮಾಡಿ ಇಬ್ರಾಹಿಂ ಹಾಜಿಯವರಿಗೆ ತಹ್‌ಲೀಲ್ ಸಮರ್ಪಣೆ ಹಾಗೂ ಅನುಸ್ಮರಣಾ ಕಾರ್ಯಕ್ರಮ ಕುಂಬ್ರ ಬದ್ರಿಯಾ ಜುಮಾ ಮಸೀದಿಯಲ್ಲಿ ಸೆ. ೨೫ ರಂದು ನಡೆಯಿತು.

ಕಾರ್ಯಕ್ರಮದಲ್ಲಿ ಮಾತನಾಡಿದ ಜುಮಾ ಮಸೀದಿಯ ಖತೀಬ್ ಲುಕ್ಮಾನುಲ್ ಹಕೀಂ ಫೈಝಿ ಉಲಮಾ ಮತ್ತು ಉಮರಾಗಳು ಸಮುದಾಯದ ಆಧಾರ ಸ್ತಂಬವಿದ್ದಂತೆಯೇ ಉಲಮಾಗಳು ಧರ್ಮದ ಬಗ್ಗೆ ಅರಿವಿನ ಶಕ್ತಿ ನೀಡಿದರೆ ಉಲಮಾಗಳು ಸಮುದಾಯಕ್ಕೆ ಆರ್ಥಿಕ ಶಕ್ತಿ ನೀಡುವವರಾಗಿದ್ದಾರೆ. ಬೇಕಲ್ ಕರ್ನಾಟಕ ಹಾಗೂ ಕೇರಳದ ಪ್ರಸಿದ್ದ ಕರ್ಮ ಶಾಸ್ತ್ರ ಪಂಡಿತರಾಗಿದ್ದು ಅವರಷ್ಟು ಜ್ಞಾನ ಹೊಂದಿದ ಉಲಮಾಗಳು ಜಿಲ್ಲೆಯಲ್ಲಿ ಇನ್ನು ಇಲ್ಲ ಎಂದು ಹೇಳಿದರು. ಹಲವಾರು ಮಸೀದಿಗಳಿಗೆ ದಾನ ಧರ್ಮವನ್ನು ನೀಡುವ ಮೂಲ ಮಸೀದಿ , ಮದ್ರಸ ನಿರ್ಮಾಣಕ್ಕೆ ಕಾರಣಕರ್ತರಾಗಿದ್ದ ಕಮ್ಮಾಡಿ ಹಾಜಿಯವರು ಬಡವರ ಏಳಿಗೆಗೆ ಶ್ರಮಿಸಿದ ಧೀಮಂತ ವ್ಯಕ್ತಿಯಾಗಿದ್ದರು ಎಂದು ಹೇಳಿದರು. ಜಮಾತ್ ಕಮಿಟಿ ಅಧ್ಯಕ್ಷ ಅಬ್ದುಲ್ ಹಮೀದ್ ರಾಯಲ್ ಅಧ್ಯಕ್ಷತೆ ವಹಿಸಿದ್ದರು.

ಕಾರ್ಯಕ್ರಮದಲ್ಲಿ ಜಮಾತ್ ಕಮಟಿ ಕಾರ್ಯದರ್ಶಿ ಇಸ್ಮಾಯಿಲ್, ಮಾಜಿ ಅಧ್ಯಕ್ಷ ಅಬ್ದುಲ್ಲ ಕೋಳಿಗದ್ದೆ, ಮಾಜಿ ಕಾರ್ಯದರ್ಶಿಗಳಾದ ಕೆ ಬಿ ಮಹಮ್ಮದ್ , ಮಹಮ್ಮದ್ ಮಗಿರೆ, ಅರಬಿಕುಂಞಿ ಮಗಿರೆ , ಮದ್ರಸ ಮುಅಲ್ಲಿಂ ಜಾಬಿರ್ ಜೌಹರಿ ಮೊದಲಾದವರು ಉಪಸ್ಥಿತರಿದ್ದರು.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.