HomePage_Banner
HomePage_Banner
HomePage_Banner
HomePage_Banner
HomePage_Banner
HomePage_Banner

ಸಮುದಾಯದ ಮೌಲ್ಯಯುತ ಸೊತ್ತುಗಳನ್ನು ನಾವು ಕಳೆದುಕೊಂಡಿದ್ದೇವೆ-ಹುಸೈನ್ ದಾರಿಮಿ

Puttur_Advt_NewsUnder_1
Puttur_Advt_NewsUnder_1
  • ರೆಂಜಲಾಡಿ ಮಸೀದಿಯಲ್ಲಿ ಕಮ್ಮಾಡಿ ಹಾಜಿ, ಬೇಕಲ್ ಉಸ್ತಾದ್ ಅನುಸ್ಮರಣಾ ಕಾರ್ಯಕ್ರಮ

ಪುತ್ತೂರು: ಇತ್ತೀಚೆಗೆ ನಿಧನರಾದ ಪುತ್ತೂರು ತಾಲೂಕು ಮುಸ್ಲಿಂ ಸಂಯುಕ್ತ ಜಮಾಅತ್ ಅಧ್ಯಕ್ಷ ಹಾಜಿ ಎಸ್ ಇಬ್ರಾಹಿಂ ಕಮ್ಮಾಡಿ ಹಾಗೂ ತಾಜುಲ್ ಫುಕಹಾಹ್ ಬೇಕಲ್ ಇಬ್ರಾಹಿಂ ಮುಸ್ಲಿಯಾರ್ ಹಾಗೂ ಅಬ್ಬು ಹಾಜಿ ರೆಂಜಲಾಡಿರವರ ಅನುಸ್ಮರಣಾ ಕಾರ್ಯಕ್ರಮ ರೆಂಜಲಾಡಿ ಬದ್ರಿಯಾ ಜುಮಾ ಮಸೀದಿಯಲ್ಲಿ ಸೆ.೨೫ರಂದು ನಡೆಯಿತು.

ರೆಂಜಲಾಡಿ ಮಸೀದಿ ಅಧ್ಯಕ್ಷ ಕೆ.ಆರ್ ಹುಸೈನ್ ದಾರಿಮಿ ರೆಂಜಲಾಡಿ ಮಾತನಾಡಿ ಸಮುದಾಯದ ಸೊತ್ತುಗಳನ್ನು, ಶಕ್ತಿಗಳನ್ನು ನಾವು ಕಳೆದುಕೊಂಡಿದ್ದೇವೆ ಎಂದು ಹೇಳಿದರು. ಕಮ್ಮಾಡಿ ಇಬ್ರಾಹಿಂ ಹಾಜಿಯವರು ಅಸಂಖ್ಯಾತ ಜನರಿಗೆ, ಮಸೀದಿ, ಮದ್ರಸ, ಧಾರ್ಮಿಕ ಕೇಂದ್ರಗಳಿಗೆ ನೆರವು ನೀಡುತ್ತಿದ್ದ ಓರ್ವ ಅಪ್ರತಿಮ ವ್ಯಕ್ತಿಯಾಗಿದ್ದರು. ಎಲ್ಲ ಸಮುದಾಯದವರಿಂದಲೂ ಗೌರವಿಸಲ್ಪಡುತ್ತಿದ್ದ ಅವರು ಸಮುದಾಯದ ಅಭ್ಯುದಯಕ್ಕಾಗಿ ಬಹಳಷ್ಟು ಪರಿಶ್ರಮಪಟ್ಟಿದ್ದರು ಎಂದು ಹೇಳಿದರು. ರೆಂಜಲಾಡಿ ಮಸೀದಿ ಮತ್ತು ಮದ್ರಸಕ್ಕೆ ಅವರ ಕೊಡುಗೆಯನ್ನು ಸ್ಮರಿಸಿದ ದಾರಿಮಿಯವರು ಅಲ್ಲಾಹನ ಭವನವಾದ ಮಸೀದಿ ನಿರ್ಮಾಣ ಕಾರ್ಯಕ್ಕೆ ಕಮ್ಮಾಡಿ ಹಾಜಿಯವರ ಕೊಡುಗೆ ಅನನ್ಯ, ಜಿಲ್ಲೆ ಕಂಡ ಪ್ರಮುಖ ಉಮರಾ ನಾಯಕರಾಗಿದ್ದ ಅವರ ಅಗಲಿಕೆ ಸಮುದಾಯಕ್ಕೂ, ಸಮಾಜಕ್ಕೂ ತುಂಬಲಾರದ ನಷ್ಟ ಎಂದು ಹೇಳಿದರು.

ಬೇಕಲ್ ಇಬ್ರಾಹಿಂ ಮುಸ್ಲಿಯಾರ್ ಅವರು ಅಗಾಧ ಪಾಂಡಿತ್ಯವನ್ನು ಹೊಂದಿದ್ದ ಪಂಡಿತರಾಗಿದ್ದು ಕರ್ಮಶಾಸ್ತ್ರ ತಜ್ಞರಾಗಿದ್ದರು. ತನ್ನ ಜೀವನ, ಪ್ರಯಾಣ, ಊಟೋಪಚಾರ ಹೀಗೆ ಎಲ್ಲರದಲ್ಲೂ ಸೂಕ್ಷ್ಮತೆ ಪಾಲಿಸುತ್ತಿದ್ದ ಅವರು ಪರಿಶುದ್ಧ ಜೀವನ ನಡೆಸಿದ್ದರು. ಯಾವುದೇ ಜಟಿಲ ಸಂಶಯಗಳಿಗೂ ಉತ್ತರ ಕಂಡುಕೊಳ್ಳುತ್ತಿದ್ದ ಅವರಲ್ಲಿ ಆಗಾಧ ಪಾಂಡಿತ್ಯವಿತ್ತು ಎಂದು ಹುಸೈನ್ ದಾರಿಮಿ ಹೇಳಿದರು. ಉಲಮಾಗಳ ಮರಣ ಲೋಕದ ಮರಣವಾಗಿದೆ ಎಂದ ಅವರು ಪಂಡಿತ ಮಹಾನುಭಾವರ ಮರಣ ಅಂತ್ಯದಿನದ ಲಕ್ಷಣವೂ ಆಗಿದೆ ಎಂದು ಅವರು ಹೇಳಿದರು.

ಇತ್ತೀಚೆಗೆ ನಿಧನರಾದ ಅಬ್ಬು ಹಾಜಿಯವರ ಕುರಿತು ಮಾತನಾಡಿದ ದಾರಿಮಿಯವರು ರೆಂಜಲಾಡಿ ಮಸೀದಿ ನಿರ್ಮಾಣ ಕಾರ್ಯದಲ್ಲಿ ಉತ್ತಮ ಸಹಕಾರ ನೀಡಿದ್ದ ಅಬ್ಬು ಹಾಜಿಯವರು ಸರಳ, ಸಜ್ಜನಿಕೆಯ ಜೀವನ ನಡೆಸಿ ನಮ್ಮಿಂದ ಮರೆಯಾಗಿದ್ದಾರೆ ಎಂದು ಹೇಳಿದರು.

ರೆಂಜಲಾಡಿ ಮಸೀದಿಯ ಖತೀಬ್ ರಫೀಕ್ ಫೈಝಿ ಮಾಡನ್ನೂರು, ಸದರ್ ಅಬೂಬಕ್ಕರ್ ಮುಸ್ಲಿಯಾರ್, ಇಬ್ರಾಹಿಂ ಸಖಾಫಿ ಕಲ್ಪಣೆ, ಮಸೀದಿ ಪ್ರಧಾನ ಕಾರ್ಯದರ್ಶಿ ಝೈನುದ್ದೀನ್ ಹಾಜಿ ಜೆ.ಎಸ್, ಕಾರ್ಯದರ್ಶಿ ಅಝೀಝ್ ರೆಂಜಲಾಡಿ, ಮಾಜಿ ಕಾರ್ಯದರ್ಶಿಗಳಾದ ಕೆ.ಎಂ ಹನೀಫ್ ರೆಂಜಲಾಡಿ, ರಹೀಂ ರೆಂಜಲಾಡಿ, ಗಲ್ಫ್ ಉದ್ಯಮಿ ಉಮ್ಮರ್ ಸುಲ್ತಾನ್, ಯಂಗ್‌ಮೆನ್ಸ್ ಅಧ್ಯಕ್ಷ ಝೈನುಲ್ ಆಬೀದ್,   ಕಾರ್ಯದರ್ಶಿ ಬಾತಿಷ ಪರಾಡ್, ಮಾಜಿ ಅಧ್ಯಕ್ಷ ಇಸಾಕ್ ಬಿ.ಜಿ ಹಾಗೂ ಜಮಾಅತರು ಉಪಸ್ಥಿತರಿದ್ದರು.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.