HomePage_Banner
HomePage_Banner
HomePage_Banner
HomePage_Banner
HomePage_Banner
HomePage_Banner

ಕೋಡಿಂಬಾಡಿ ಗ್ರಾ.ಪಂ.ನಲ್ಲಿ ನಾಯಕತ್ವ ಶಿಬಿರ

Puttur_Advt_NewsUnder_1
Puttur_Advt_NewsUnder_1

ಪುತ್ತೂರು : ಜನಶಿಕ್ಷಣ ಟ್ರಸ್ಟ್, ದಿ ಹಂಗರ್ ಪ್ರೊಜೆಕ್ಡ್, ಪಂಚಾಯತ್‌ರಾಜ್ ಸುಗ್ರಾಮಗಳ ಒಕ್ಕೂಟ, ಮಾದರಿ ಗ್ರಾಮ ವಿಕಾಸ ಕೇಂದ್ರ ಇದರ ವತಿಯಿಂದ ಮಹಿಳೆಯರಿಗೆ ಕೋಡಿಂಬಾಡಿ ಗ್ರಾಮ ಪಂಚಾಯತ್‌ನಲ್ಲಿ ನಾಯಕತ್ವ ಶಿಬಿರ ನಡೆಯಿತು. ಕೋಡಿಂಬಾಡಿ ಗ್ರಾಮ ಪಂಚಾಯತ್ ಆಡಳಿತಾಧಿಕಾರಿ, ಕ್ಷೇತ್ರ ಶಿಕ್ಷಣಾಧಿಕಾರಿ ಲೋಕೇಶ್ ಮಾತನಾಡಿ ಮಹಿಳೆಯರು ಜೀವನಪೂರ್ತಿ ಎಲ್ಲಾ ಕ್ಷೇತ್ರದಲ್ಲಿ ಜಾಗೃತರಾಗಿರಬೇಕು ಹಾಗೂ ಕ್ರಿಯಾಶೀಲರಾಗಿರಬೇಕು. ಎಂದರು. ದ.ಕ.ಜಿಲ್ಲಾ ಸ್ವಚ್ಚತಾ ರಾಯಭಾರಿ ಹಾಗೂ ಮಾಜಿ ಒಂಬುಡ್ಸನ್ ಶೀನ ಶೆಟ್ಟಿ ಹಾಗೂ ಜನಶಿಕ್ಷಣ ಟ್ರಸ್ಟ್‌ನ ನಿರ್ದೇಶಕ ಕೃಷ್ಣಮೂಲ್ಯ ರವರು ಮಾತನಾಡಿ ಮಹಾತ್ಮಗಾಂಧಿ, ಉದ್ಯೋಗಖಾತರಿ, ಜಲಸಾಕ್ಷರತೆ, ವಿಶ್ವಸಾಕ್ಷರತಾ ದಿನಾಚರಣೆ, ಕೊರೊನಾ ತಡೆ, ಗ್ರಾಮಸಭೆ ಬಗ್ಗೆ ಮಾಹಿತಿ ನೀಡಿದರು. ಜನಶಿಕ್ಷಣ ಟ್ರಸ್ಟ್‌ನ ಸಂಯೋಜಕ ಚೇತನ್ ಮಾತನಾಡಿ ಶಿಬಿರದ ಉದ್ಧೇಶ, ಮಹಿಳಾ ನಾಯಕತ್ವದ ಬಗ್ಗೆ ತರಬೇತಿ ನೀಡಿದರು. ಕೋಡಿಂಬಾಡಿ ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷೆ ಸಂಧ್ಯಾರಾಮಚಂದ್ರ, ಬನ್ನೂರು ಗ್ರಾಮ ಪಂಚಾಯತ್ ಮಾಜಿ ಸದಸ್ಯೆ ಹಾಗೂ ಸುಗ್ರಾಮ ಒಕ್ಕೂಟದ ಅಧ್ಯಕ್ಷೆ ಜಯಏಕ, ಮಾಜಿ ಸದಸ್ಯ ರತ್ನಾಕರ ಪ್ರಭು ಮಾತನಾಡಿ ಅನುಭವ ಹಂಚಿಕೊಂಡರು.

ಕೋಡಿಂಬಾಡಿ ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಚಿತ್ರಾವತಿ, ಕಾರ್ಯದರ್ಶಿ ರಮೇಶ್, ಅಂಗನವಾಡಿ ಕಾರ್ಯಕರ್ತೆ ಸುಮಲತಾ, ಕೋಡಿಂಬಾಡಿ, ಬನ್ನೂರು ಗ್ರಾಮ ಪಂಚಾಯತ್ ಸುಗ್ರಾಮ ಸದಸ್ಯರು, ಮಹಿಳಾ ಜಾಗೃತಿ ವೇದಿಕೆ ಸದಸ್ಯರು ಉಪಸ್ಥಿತರಿದ್ದರು. ಜನಶಿಕ್ಷಣ ಟ್ರಸ್ಟ್ ಸದಸ್ಯೆ ಅರುಣಾ ಡಿ. ಸ್ವಾಗತಿಸಿ ವಂದಿಸಿದರು. ಪಂಚಾಯತ್ ಸಿಬ್ಬಂದಿ ಸುರೇಶ್ ಸಹಕರಿಸಿದರು.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.