HomePage_Banner
HomePage_Banner
HomePage_Banner
HomePage_Banner
HomePage_Banner
HomePage_Banner

ಒಳಮೊಗ್ರು ಗ್ರಾಮದ ಮೈದಾನಿಮೂಲೆಯಲ್ಲಿ ಏರ್‌ಟೆಲ್ ಟವರ್ ಲೋಕಾರ್ಪಣೆ: ಬಹುಕಾಲದ ಬೇಡಿಕೆ ಈಡೇರಿದ ಖುಷಿಯಲ್ಲಿ ಗ್ರಾಮಸ್ಥರು

Puttur_Advt_NewsUnder_1
Puttur_Advt_NewsUnder_1

ಪುತ್ತೂರು: ಒಳಮೊಗ್ರು ಗ್ರಾಮದ ಮೈದಾನಿಮೂಲೆ, ಕುಟಿನೋಪಿನಡ್ಕ, ಪರ್ಪುಂಜ ನಿವಾಸಿಗಳ ಹಲವು ವರ್ಷಗಳ ಬೇಡಿಕೆ ಈಡೇರಿದ್ದು ಮೈದಾನಿಮೂಲೆ ಕುಟ್ಟಿನೋಪಿನಡ್ಕದಲ್ಲಿ ನೂತನವಾಗಿ ಏರ್‌ಟೆಲ್ ಟವರ್ ಸೆ.24ರಂದು ಲೋಕಾರ್ಪಣೆಗೊಂಡಿದೆ.

ಕುಂಬ್ರದಲ್ಲಿ ಏರ್‌ಟೆಲ್ ಟವರ್ ಇದ್ದರೂ ಮೈದಾನಿಮೂಲೆ ಕುಟಿನೋಪಿನಡ್ಕ ನಿವಾಸಿಗಳಿಗೆ ಹಾಗೂ ವಿದ್ಯಾರ್ಥಿಗಳಿಗೆ ತೀವ್ರ ನೆಟ್‌ವರ್ಕ್ ಸಮಸ್ಯೆ ಉಂಟಾಗಿತ್ತು. ಈ ಪ್ರದೇಶದಲ್ಲಿ ಟವರ್ ನಿರ್ಮಾಣ ಮಾಡುವಂತೆ ಹಲವು ಬಾರಿ ವಿವಿಧ ಜನಪ್ರತಿನಿಧಿಗಳಿಗೆ, ಇಲಾಖೆಗೆ ಗ್ರಾಮಸ್ಥರು ಮನವಿ ಮಾಡಿದ್ದರು. ಈ ಪ್ರದೇಶದಲ್ಲಿ ಹೆಚ್ಚು ಗ್ರಾಹಕರನ್ನು ಹೊಂದಿರುವ ಕಾರಣಕ್ಕೆ ಕೊನೆಗೂ ಏರ್‌ಟೆಲ್ ಟವರ್ ನಿರ್ಮಾಣವಾಗಿದ್ದು ಆ ಮೂಲಕ ಗ್ರಾಮಸ್ಥರ ಬಹುಕಾಲದ ಬೇಡಿಕೆ ಈಡೇರಿದಂತಾಗಿದೆ. ಸ್ಥಳೀಯ ನಿವಾಸಿ ಅಬೂಬಕ್ಕರ್ ಕೆ ಅವರ ಖಾಸಗೀ ಜಮೀನಿನಲ್ಲಿ ಟವರ್ ನಿರ್ಮಾಣಗೊಂಡಿದೆ. ಹೊಸ ಟವರ್ ನಿರ್ಮಾಣ ಮಾಡಿರುವುದಕ್ಕೆ ಗ್ರಾಮಸ್ಥರು ಹರ್ಷ ವ್ಯಕ್ತಪಡಿಸಿದ್ದಾರೆ.

ನಾವು ವಾಸಿಸುವ ಪ್ರದೇಶದಲ್ಲಿ ಹಲವಾರು ವರ್ಷಗಳಿಂದ ನೆಟ್‌ವರ್ಕ್ ಸಮಸ್ಯೆ ಇದ್ದ ಕಾರಣದಿಂದ ಬಹಳಷ್ಟು ಸಮಸ್ಯೆ ಎದುರಿಸುತ್ತಿದ್ದೆವು. ಮೊಬೈಲ್‌ಗೆ ನೆಟ್‌ವರ್ಕ್ ಸಿಗದ ಕಾರಣದಿಂದ ವಿದ್ಯಾರ್ಥಿಗಳಿಗೂ ತೊಂದರೆಯಾಗಿತ್ತು. ಟವರ್ ನಿರ್ಮಾಣಕ್ಕೆ ಅನೇಕ ಬಾರಿ ಮನವಿ ಕೂಡಾ ನೀಡಿದ್ದೆವು. ಇದೀಗ ಟವರ್ ನಿರ್ಮಾಣವಾಗಿದ್ದು ಗ್ರಾಮಸ್ಥರಾದ ನಮಗೆ ಬಹಳ ಖುಷಿ ನೀಡಿದೆ –ಸಹದ್ ಅಡ್ಕ, ಮೊಬೈಲ್ ಬಳಕೆದಾರ
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.