HomePage_Banner
HomePage_Banner
HomePage_Banner
HomePage_Banner
HomePage_Banner
HomePage_Banner

ರಾಜು ಹೊಸ್ಮಠರವರಿಂದ ಸಮಾಜ ಸೇವೆ ಬದಲು ಸಂಘಟನೆಯ ಹೆಸರಿನಲ್ಲಿ ಹಣ ಮಾಡುವ ದಂಧೆ| ಪತ್ರಿಕಾಗೋಷ್ಠಿಯಲ್ಲಿ ದಲಿತ್ ಸೇವಾ ಸಮಿತಿ ಜಿಲ್ಲಾಧ್ಯಕ್ಷ ಸೇಸಪ್ಪ ಬೆದ್ರಕಾಡು ಆರೋಪ

Puttur_Advt_NewsUnder_1
Puttur_Advt_NewsUnder_1

ಪುತ್ತೂರು: ದಲಿತ ಸೇವಾ ಸಮಿತಿಯ ಸದಸ್ಯರನ್ನು ಸೇರಿಸಿಕೊಂಡು ರಾಜು ಹೊಸ್ಮಠರವರು ಸಮಾಜ ಸೇವೆ ಬಿಟ್ಟು ಹಣ ಮಾಡುವ ದಂಧೆ ಮಾಡುತ್ತಿದ್ದಾರೆ.ದಲಿತ್ ಸೇವಾ ಸಮಿತಿಯ ಹೆಸರಿನಲ್ಲಿ ಹಣದ ವ್ಯವಹಾರ ಮಾಡುವುದನ್ನು ಆಕ್ಷೇಪಿಸಿದಕ್ಕೆ ಅವರು ನಮ್ಮ ಸಂಘಟನೆಯಿಂದ ಹೊರ ಹೋಗಿದ್ದಾರೆ ಎಂದು ದಲಿತ್ ಸೇವಾ ಸಮಿತಿ ಜಿಲ್ಲಾಧ್ಯಕ್ಷ ಸೇಸಪ್ಪ ಬೆದ್ರಕಾಡು ಪತ್ರಿಕಾಗೋಷ್ಠಿಯಲ್ಲಿ ಹೇಳಿದ್ದಾರೆ.


ಕರ್ನಾಟಕ ಕ್ರಾಂತಿಕಾರಿ ಸಂಘಟನೆಯ ರಾಜ್ಯಾಧ್ಯಕ್ಷ ಪರಮೇಶ್ವರರವರೊಂದಿಗೆ ಸೇರಿಕೊಂಡು ಹಣದ ವ್ಯವಹಾರ ಮಾಡುತ್ತಿದ್ದಾರೆ.ತಲಾ ರೂ.೧೫೦ರಂತೆ ಸಂಗ್ರಹಿಸಿ ೧೦ ಜನರ ಗುಂಪು ಮಾಡಿದಾಗ ಒಂದು ಗುಂಪಿಗೆ ರೂ.೧ ಲಕ್ಷ ಸಹಾಯಧನ ನೀಡುವುದಾಗಿ ಆಮಿಷ ಒಡ್ಡಿದ್ದಾರೆ.ಅವರ ಮಾತನ್ನು ನಂಬಿ ಹಲವು ಮಂದಿ ಗುಂಪಿಗೆ ಸೇರಿದ್ದಾರೆ.ನಾನು ಯಾವುದೇ ಗುಂಪು ರಚನೆ ಮಾಡಿಲ್ಲ.ವಿಟ್ಲದ ಸ್ನೇಹಿತರೊಂದಿಗೆ ನಾನು ಸೇರಿಕೊಂಡಿದ್ದೇನೆ.ಕರ್ನಾಟಕ ಕ್ರಾಂತಿಕಾರಿ ಸಂಘಟನೆಯ ರಾಜ್ಯಾಧ್ಯಕ್ಷ ಪರಮೇಶ್ವರ್‌ರವರೇ ಗುಂಪಿನ ಸದಸ್ಯರಿಗೆ ಕರೆಮಾಡಿ ಬ್ಯಾಂಕ್ ಖಾತೆಯ ಐಎಫ್‌ಎಸ್‌ಸಿ ಕೋಡ್ ಹಾಗೂ ಒಟಿಪಿ ನಂಬರ್‌ನ್ನು ಪಡೆದುಕೊಳ್ಳಲು ಮುಂದಾಗಿದ್ದರು.ಇದು ಜನರ ಖಾತೆಯಿಂದ ಹಣಕಬಳಿಸುವ ತಂತ್ರ ಎಂಬುದನ್ನು ಅರಿತ ನಾನು ಪುತ್ತೂರಿನಲ್ಲಿ ನಡೆದ ಸಭೆಯಲ್ಲಿ ಪರಮೇಶ್ವರರವರಲ್ಲಿ ಪ್ರಶ್ನಿಸಿರುವುದಲ್ಲದೆ ಜನರಿಂದ ಪಡೆದುಕೊಂಡ ದಾಖಲೆ ಹಾಗೂ ಹಣವನ್ನು ಹಿಂತಿರುಗಿಸುವಂತೆ ತಿಳಿಸಿದ್ದೇನೆ.ಕೇವಲ ರೂ.೧೦೦ ಮಾತ್ರ ನಾನು ಸಂಘಟನೆಗೆ ಪಡೆದುಕೊಂಡಿದ್ದೇನೆ.

ಉಳಿದ ರೂ.೫೦ನ್ನು ರಾಜು ಹೊಸ್ಮಠರವರು ಪಡೆದುಕೊಂಡಿರುವುದಾಗಿ ಪರಮೇಶ್ವರರು ತಿಳಿಸಿದಾಗ ಸಭೆಯಲ್ಲಿದ್ದ ಜನರು ಗಲಾಟೆ ಮಾಡಿ ರಾಜು ಹೊಸ್ಮಠರವರಿಗೆ ಹಲ್ಲೆ ನಡೆಸಲು ಮುಂದಾಗಿದ್ದರು.ಸಂಘಟನೆಯ ಗೌರವ ಉಳಿಸುವ ನಿಟ್ಟಿನಲ್ಲಿ ಜನರಿಂದ ಪಡೆದುಕೊಂಡ ದಾಖಲೆ ಹಾಗೂ ಹಣವನ್ನು ಹಿಂತಿರುಗಿಸುವಂತೆ ಪರಮೇಶ್ವರ್‌ರವಲ್ಲಿ ನಾನು ತಿಳಿಸಿದ್ದೇನೆ ಎಂದು ಹೇಳಿದ ಸೇಸಪ್ಪ ಬೆದ್ರಕಾಡು,ಡಾ| ಪರಮೇಶ್ವರ್‌ರವರ ಹೇಳಿಕೆಯಿಂದ ಅವಮಾನಿತರಾದ ರಾಜು ಹೊಸ್ಮಠರವರು ಬೇರೆ ಬೇರೆ ಸಂಘಟನೆಯ ನಾಯಕನ್ನು ಪರಿಚಯಿಸಿಕೊಂಡು ಹೊಸ ಸಂಘಟನೆ ಮಾಡಲು ಮುಂದಾಗಿದ್ದಾರೆ.ಈ ಸಂದರ್ಭದಲ್ಲಿ ನೀವು ಬೇರೆ ಸಂಘಟನೆ ಮಾಡುವುದಾದರೆ ನಮ್ಮ ಆಕ್ಷೇಪವಿಲ್ಲ.ಆದರೆ ಜನರಿಂದ ಪಡೆದುಕೊಂಡ ಹಣ ಹಾಗೂ ದಾಖಲೆಯನ್ನು ಹಿಂತಿರುಗಿಸಬೇಕು ಎಂದು ನಾನು ರಾಜು ಹೊಸ್ಮಠರವರಿಗೆ ತಿಳಿಸಿರುವುದಕ್ಕೆ ಅವರು ಅವಾಚ್ಯ ಶಬ್ದಗಳಿಂದ ನಿಂದಿಸಿರುವುದಲ್ಲದೆ ಗಿರಿಧರ್ ನಾಯ್ಕ್‌ರವರೊಂದಿಗೆ ಸೇರಿದರೆ ನಾನು ಸುಮ್ಮನಿರುವುದಿಲ್ಲ ಎಂದು ಸೇಸಪ್ಪ ಬೆದ್ರಕಾಡು ಹೇಳಿರುವುದಾಗಿ ನನ್ನ ಮೇಲೆ ಆಪಾದನೆ ಮಾಡಿರುತ್ತಾರೆ.ಇದರ ವಿರುದ್ದ ವಿಟ್ಲ ಠಾಣೆ ಹಾಗೂ ಪುತ್ತೂರು ಠಾಣೆಗೆ ದೂರು ನೀಡಲಾಗಿದೆ ಎಂದು ತಿಳಿಸಿದರು.

ನನ್ನ ಮೇಲೆ ಎಲ್ಲಿಯೂ ಕೇಸು ದಾಖಲಾಗಿಲ್ಲ:
ಕಳೆದ ೧೪ ವರ್ಷಗಳಿಂದ ಸಂಘಟನೆಯಲ್ಲಿ ತೊಡಗಿಸಿಕೊಂಡು ಜಿಲ್ಲಾ ಮಟ್ಟದಲ್ಲಿ ಹಲವು ಸಮಾಜ ಸೇವೆ ಮಾಡುತ್ತಿದ್ದೇನೆ. ಆದರೆ ಇಷ್ಟು ವರ್ಷಗಳಲ್ಲಿ ನನ್ನ ವಿರುದ್ದ ಯಾರೂ ಈ ತನಕ ದೂರು ನೀಡಿಲ್ಲ.ಎಲ್ಲಿಯೂ ನನ್ನ ವಿರುದ್ದ ಪ್ರಕರಣ ದಾಖಲಾಗಿಲ್ಲ ಎಂದು ಸೇಸಪ್ಪ ಬೆದ್ರುಕಾಡು ತಿಳಿಸಿದರು.ನನ್ನ ಸಂಘಟನೆಯನ್ನು ನಿಷೇಧಿಸುವಂತೆ ಜಗದೀಶ್ ಕಜೆ, ರಾಜು ಹೊಸ್ಮಠ ಹಾಗೂ ಗಿರಿಧರ್ ನಾಯ್ಕ್ ಹೇಳಿಕೆ ಕೊಟ್ಟಿದ್ದಾರೆ.ಆದರೆ ನಮ್ಮ ಸಂಘಟನೆಯನ್ನು ನಿಷೇಧಿಸಲು ಅವರಿಂದ ಸಾಧ್ಯವಿಲ್ಲ ಎಂದು ಬೆದ್ರಕಾಡು ಹೇಳಿದರು.
ನನ್ನ ಜೀವಕ್ಕೆ ಅಪಾಯ:
ನಮ್ಮ ಸಂಘಟನೆಯಿಂದ ಹೊರ ಹೋದ ರಾಜು ಹೊಸ್ಮಠ, ಜಗದೀಶ್ ಕಜೆ ಹಾಗೂ ಗಿರಿಧರ್ ನಾಯ್ಕ್‌ರವರಿಂದ ನನ್ನ ಜೀವಕ್ಕೆ ಅಪಾಯವಾಗುವ ಸಾಧ್ಯತೆಗಳಿವೆ ಎಂದು ಹೇಳಿದ ಬೆದ್ರಕಾಡು, ಈ ಕುರಿತು ಸಂಬಂಧಪಟ್ಟ ಇಲಾಖೆಗಳಿಗೆ ದೂರು ನೀಡಲಾಗುವುದು ಎಂದರಲ್ಲದೆ ನಮ್ಮ ಸಂಘಟನೆಯ ಬಂಟ್ವಾಳ ತಾಲೂಕು ಕಾರ್ಯದರ್ಶಿಯಾಗಿರುವ ಪ್ರಸಾದ್ ಅನಂತಾಡಿಯವರಿಗೆ ಪುತ್ತೂರಿನ ಪತ್ರಕರ್ತನೆಂದು ಹೇಳಿಕೊಂಡು ಮನೋಜ್ ಎಂಬವರು ಕರೆಮಾಡಿ ಕೆಲವು ಮಾಹಿತಿಗಳನ್ನು ಕೇಳಿ ತಿಳಿದುಕೊಳ್ಳುವ ಹುನ್ನಾರ ನಡೆದಿರುವುದಾಗಿ ತಿಳಿಸಿದರು.

ನಾನು ೨೦ ಗುಂಪು ಮಾಡಿಲ್ಲ:
ಅಣ್ಣಪ್ಪ ಕಾರೆಕ್ಕಾಡು ಮಾತನಾಡಿ, ನಾನು ೨೦ ಗುಂಪು ಮಾಡಿರುವುದಾಗಿ ನನ್ನ ಮೇಲೆ ಆರೋಪ ಮಾಡಿದ್ದಾರೆ.ಆದರೆ ನಾನು ೨೦ ಜನರ ಎರಡು ಗುಂಪು ಮಾತ್ರ ಮಾಡಿದ್ದೇನೆ.೨೦ ಗುಂಪು ಮಾಡಿಲ್ಲ.ಹಣ ಹಾಗೂ ದಾಖಲೆಗಳೆಲ್ಲವನ್ನೂ ರಾಜು ಹೊಸ್ಮಠರವರು ಪಡೆದುಕೊಂಡಿರುತ್ತಾರೆ.ಹಣ ಪಡೆದಿರುವುದಕ್ಕೆ ಯಾವುದೇ ರೀತಿಯ ರಶೀದಿ ನೀಡಿಲ್ಲ ಎಂದು ಆರೋಪಿಸಿದರು. ಮಹಿಳಾ ಘಟಕದ ಅಧ್ಯಕ್ಷೆ ಸುನಂದ, ಉಪಾಧ್ಯಕ್ಷ ಮನೋಹರ್ ಕೋಡಿಜಾಲ್, ಮಾಜಿ ಉಪಾಧ್ಯಕ್ಷ ಲೋಕೇಶ್ ತೆಂಕಿಲ ಹಾಗೂ ಜಿಲ್ಲಾ ಕಾರ್ಯದರ್ಶಿ ಚಂದ್ರಶೇಖರ್ ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.