HomePage_Banner
HomePage_Banner
HomePage_Banner
HomePage_Banner
HomePage_Banner
HomePage_Banner

ಕೇಂದ್ರ ಸರ್ಕಾರದ ರೈತ ವಿರೋಧಿ ಕಾಯ್ದೆ ವಿರುದ್ಧದ ಪ್ರತಿಭಟನೆಗೆ ಸಮಾನ ಮನಸ್ಕ ಒಕ್ಕೂಟಗಳು ಬೆಂಬಲ ಘೋಷಣೆ ಮಾಡಿದೆ-ರೂಪೇಶ್ ರೈ

Puttur_Advt_NewsUnder_1
Puttur_Advt_NewsUnder_1

ಉಪ್ಪಿನಂಗಡಿ: ಕೇಂದ್ರ ಸರ್ಕಾರದ ರೈತ ವಿರೋಧಿ ಭೂ ಸುಧಾರಣಾ ಕಾಯ್ದೆ ತಿದ್ದುಪಡಿ, ಎ.ಪಿ.ಎಂ.ಸಿ. ಕಾಯ್ದೆ ತಿದ್ದುಪಡಿ ವಿರುದ್ಧ ರೈತ ಸಂಘದ ವತಿಯಿಂದ ಸೆ.28ರಂದು ಪುತ್ತೂರುನಲ್ಲಿ ನಡೆಯುವ ಪ್ರತಿಭಟನೆಗೆ ಸಮಾನ ಮನಸ್ಕ ಒಕ್ಕೂಟಗಳು ಸಂಪೂರ್ಣ ಬೆಂಬಲ ಘೋಷಣೆ ಮಾಡಿದೆ ಎಂದು ಕರ್ನಾಟಕ ರಾಜ್ಯ ರೈತ ಸಂಘ ಹಸಿರು ಸೇನೆ ಇದರ ದ.ಕ. ಜಿಲ್ಲಾ ಸಂಚಾಲಕ ರೂಪೇಶ್ ರೈ ಅಲಿಮಾರ್ ತಿಳಿಸಿದರು.

ಅವರು ಸೆ. 25ರಂದು ಉಪ್ಪಿನಂಗಡಿಯಲ್ಲಿ ಕರೆಯಲಾದ ಪತ್ರಿಕಾಗೋಷ್ಠಿಯಲ್ಲಿ ಈ ವಿಚಾರ ತಿಳಿಸಿದರು. ನೂತನ ಕೃಷಿ ನೀತಿಯಿಂದಾಗಿ ರೈತರು ಕಾರ್ಪೋರೇಟರ್ ಕಂಪೆನಿಗಳ ಕೈಗೊಂಬೆಯಾಗಲಿದ್ದು, ಕೃಷಿ ಉತ್ಪನ್ನಗಳ ಮಾರಾಟಗಾರರನ್ನೂ ಒಳಗೊಂಡಂತೆ ಹಲವರನ್ನು ಬೀದಿ ಪಾಲು ಮಾಡಲಿದೆ, ಇಂತಹ ಕರಾಳ ಕಾಯ್ದೆಯನ್ನು ರದ್ದು ಪಡಿಸುವ ತನಕ ರೈತ ಸಂಘದ ಹೋರಾಟ ಮುಂದುವರೆಯಲಿದೆ ಎಂದರು.

ಕೃಷಿಕರಿಗೆ ಸಂಬಂಧಿಸಿ ಕಾಯಿದೆ ರೂಪಿಸುವ ಮುನ್ನ ಕೃಷಿಕರ ಜೊತೆ ಸಮಾಲೋಚನೆ ಮಾಡದೆ, ಏಕಾಏಕಿ ಕಾರ್ಪೋರೇಟರ್ ಕಂಪೆನಿಗಳ ಹಿತಕ್ಕಾಗಿ ಕಾನೂನನ್ನು ಸುಗ್ರಿವಾಜ್ಞೆಗಳ ಮೂಲಕ ಜಾರಿಗೊಳಿಸಿರುವುದು ಅಕ್ಷಮ್ಯವಾಗಿದೆ. ಕೇಂದ್ರ ಸರ್ಕಾರದ ನೀತಿಯಿಂದಾಗಿ ಜಮೀನ್ದಾರಿ ಪದ್ದತಿ ಮತ್ತೆ ಜಾರಿಯಾಗುವ ಅಪಾಯವಿದೆ ಎಂದು ಅವರು ಕಳವಳ ವ್ಯಕ್ತಪಡಿಸಿದರು.

ಹಸಿರು ಸೇನೆಯ ಜಿಲ್ಲಾ ಪ್ರಧಾನ ಕಾರ್ಯದರ್ಶಿ ವಿನೋದ್ ಪಾದೆಕಲ್ಲು ಮಾತನಾಡಿ ಇದು ಬಲಾತ್ಕಾರದ ಬಂದ್ ಅಲ್ಲ, ರೈತರ ಸ್ವಯಂ ಪ್ರೇರಿತ ಬಂದ್, ರೈತರಿಗೆ ಆಗುವ  ಅನ್ಯಾಯದ ವಿರುದ್ಧ ನಡೆಯುವ ಪ್ರತಿಭಟನೆಗೆ ಪ್ರತಿಯೋರ್ವ ರೈತನೂ ಭಾಗವಹಿಸಿ ರೈತರ ಧ್ವನಿಗೆ ಬಲ ನೀಡಬೇಕೆಂದೂ ವಿನಂತಿಸಿದರು. ಉಪ್ಪಿನಂಗಡಿ-ವಿಟ್ಲ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮುರಳೀಧರ ರೈ ಮಠಂತಬೆಟ್ಟು, ಡಾ| ರಾಜಾರಾಮ್, ಜಾತ್ಯಾತೀತ ಜನತಾದಳ ಪುತ್ತೂರು ತಾಲ್ಲೂಕು ಕಾರ್‍ಯಾಧ್ಯಕ್ಷ ಅಬ್ದುಲ್ ರಹಿಮಾನ್ ಯುನಿಕ್, ಎ.ಪಿ.ಎಂ.ಸಿ. ಸದಸ್ಯ ಶಕೂರ್ ಹಾಜಿ, ಯುವ ಕಾಂಗ್ರೆಸ್‌ನ ಅಭಿಷೇಕ್ ಬೆಳ್ಳಿಪ್ಪಾಡಿ, ಉಪ್ಪಿನಂಗಡಿ ಅಟೋ ರಿಕ್ಷಾ ಚಾಲಕ ಮಾಲಕ ಸಂಘದ ಅಧ್ಯಕ್ಷ ಅಬ್ದುಲ್ ಲತೀಫ್ ಕರಾಯ ಮಾತನಾಡಿ ಕೇಂದ್ರ ಸರ್ಕಾರದ ರೈತ ವಿರೋಧಿ ಕಾಯ್ದೆ ವಿರುದ್ಧ ರೈತ ಸಂಘ ಹಮ್ಮಿಕೊಂಡಿರುವ ಪ್ರತಿಭಟನೆಗೆ ನಮ್ಮ ಸಂಪೂರ್ಣ ಬೆಂಬಲ ಇರುವುದಾಗಿ ಘೋಷಣೆ ಮಾಡಿದರು.

ಪತ್ರಿಕಾಗೋಷ್ಠಿಯಲ್ಲಿ ಪುತ್ತೂರು ಯುವ ಕಾಂಗ್ರೆಸ್ ಅಧ್ಯಕ್ಷ ಯು.ಟಿ. ತೌಶೀಫ್, ರೈತ ಸಂಘದ ಪುತ್ತೂರು ತಾಲ್ಲೂಕು ಘಟಕದ ಅಧ್ಯಕ್ಷ ಜಿ. ಬಾಲಸುಬ್ರಹ್ಮಣ್ಯ ಹೊಳ್ಳ,  ಹರ್ಷ ಕುಮಾರ್ ಹೆಗ್ಡೆ ಉಪಸ್ಥಿತರಿದ್ದರು.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.