HomePage_Banner
HomePage_Banner
HomePage_Banner
HomePage_Banner
HomePage_Banner
HomePage_Banner

ಕೇಂದ್ರ, ರಾಜ್ಯ ಸರ್ಕಾರ ಜಾರಿಗೊಳಿಸಿರುವ ರೈತವಿರೋಧಿ ಭೂಮಸೂಧೆ ತಿದ್ದುಪಡಿ ಕಾಯ್ದೆ ವಿರುದ್ಧ ವಿಟ್ಲ ನಾಡಕಚೇರಿ ಮುಂಭಾಗದಲ್ಲಿ ಎಸ್.ಡಿ.ಪಿ.ಐ.ಯಿಂದ ಪ್ರತಿಭಟನೆ

Puttur_Advt_NewsUnder_1
Puttur_Advt_NewsUnder_1

ವಿಟ್ಲ: ಮೋದಿ ಸರ್ಕಾರ ದೇಶದ ಜನರಿಗೆ ನಿರಂತರವಾಗಿ ಹಿಂಸೆ ನೀಡುತ್ತಿದೆ. ರೈತರ ಉತ್ಪನ್ನ ವ್ಯವಸ್ಥೆಯನ್ನು ಬುಡಮೇಲುಗೊಳಿಸುವ ಕಾರ್ಯ ಸರಕಾರದಿಂದ ಆಗುತ್ತಿದೆ. ಸರಕಾರ ಕೂಡಲೇ ರೈತರ ಬೇಡಿಕೆಗೆ ಸ್ಪಂದಿಸಬೇಕು ಇಲ್ಲವಾದಲ್ಲಿ ಮುಂದಿನ ದಿನಗಳಲ್ಲಿ ಉಗ್ರಹೋರಾಟ ನಡೆಸಲಾಗುವುದು ಎಂದು ಎಸ್.ಡಿ.ಪಿ.ಐ ಪುತ್ತೂರು ವಿಧಾನ ಸಭಾಕ್ಷೇತ್ರ ಸಮಿತಿ ಸದಸ್ಯ ಶಾಕೀರ್ ಅಳಕೆಮಜಲು ಹೇಳಿದರು.

ಕೇಂದ್ರ ಹಾಗೂ ರಾಜ್ಯ ಸರ್ಕಾರ ಜಾರಿಗೊಳಿಸಿರುವ ರೈತವಿರೋಧಿ ಭೂಮಸೂಧೆ ತಿದ್ದುಪಡಿ ಕಾಯ್ದೆ ವಿರುದ್ಧ ಎಸ್.ಡಿ.ಪಿ.ಐ ವಿಟ್ಲ ವಲಯ ವತಿಯಿಂದ ಸೆ.೨೫ರಂದು ವಿಟ್ಲ ನಾಡಕಚೇರಿ ಮುಂಭಾಗದಲ್ಲಿ ನಡೆದ ಪ್ರತಿಭಟನೆಯಲ್ಲಿ ಅವರು ಹೇಳಿದರು.

ದೇಶದ ಆಸ್ತಿಯನ್ನು ಬಂಡವಾಳಶಾಹಿಗಳಿಗೆ ಮಾರಾಟ ಮಾಡುವ ವ್ಯವಸ್ಥೆ ಸದ್ದಿಲ್ಲದೆ ನಡೆಯುತ್ತಿದೆ. ಸರಕಾರ ಜಾರಿಗೊಳಿಸಿರುವ ಮಸೂದೆ ದೇಶ ವಿರೋಧಿ ಮಸೂದೆಯಾಗಿದೆ. ಇಂತಹ ಸರಕಾರದಿಂದ ಮುಂದಿನ ದಿನಗಳಲ್ಲಿ ಪ್ರಜಾಪ್ರಭುತ್ವಕ್ಕೆ ಭಾರೀ ತೊಂದರೆ ಇದೆ. ದೇಶದ ಸಂವಿದಾನ ಉಳಿಸಲು ಎಲ್ಲರೂ ಒಟ್ಟಾಗಿ ಹೋರಾಟ ನಡೆಸಬೇಕಾಗಿದೆ. ದೇಶಾದ್ಯಂತ ರೈತರು ಪ್ರತಿಭಟನೆ ನಡೆಸುತ್ತಿದ್ದರೂ ಸರಕಾರ ಗಮನ ಹರಿಸದೆ ತಮಗೆನೂ ಅರಿಯದಂತೆ ವರ್ತಿಸುತ್ತಿದೆ ಎಂದರು.

ಎಸ್.ಡಿ.ಪಿ.ಐ ಬಂಟ್ವಾಳ ವಿಧಾನಸಭಾ ಕ್ಷೇತ್ರ ಸಮಿತಿ ಕಾರ್ಯದಶಿ ಖಲಂದರ್ ಪರ್ತಿಪ್ಪಾಡಿ ಮಾತನಾಡಿ ದೇಶದ ಬೆನ್ನೆಲುಬಾಗಿರುವ ರೈತರಿಗೆ ಸರಕಾರ ಪ್ರಯೋಜನಕಾರಿ ಯೋಜನೆಗಳನ್ನು ನೀಡುವ ಬದಲು ಅವರ ಬದುಕನ್ನು ಕತ್ತಲೆ ಮಾಡುವ ಯೋಜನೆಗಳನ್ನು ಜಾರಿ ಮಾಡುತ್ತಿದೆ. ಎಸ್.ಡಿ.ಪಿ.ಐ. ನಿರಂತರವಾಗಿ ರೈತರ ಪರವಾಗಿ ಹೋರಾಟ ನಡೆಸಲಿದೆ ಎಂದರು. ಕ್ಯಾಂಪಸ್ ಫ್ರಂಟ್ ಆಫ್ ಇಂಡಿಯಾ ರಾಜ್ಯ ಸಮಿತಿ ಸದಸ್ಯ ರಿಯಾಝ್ ಕಡಂಬು, ವಲಯಾದ್ಯಕ್ಷ ರಹೀಂ ವಿಟ್ಲ, ವಲಯ ಕೋಶಾಧಿಕಾರಿ ಸಿದ್ದಿಕ್ ಉರಿಮಜಲು, ಸಮಿತಿ ಸದಸ್ಯರಾದ ಸುಲೈಮಾನ್ ಒಕ್ಕೆತ್ತೂರು ಮೊದಲಾದವರು ಉಪಸ್ಥಿತರಿದ್ದರು.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.