HomePage_Banner
HomePage_Banner
HomePage_Banner
HomePage_Banner
HomePage_Banner
HomePage_Banner

ವಿದೇಶಿ ಬಂಡವಾಳ ಹೂಡಿಕೆದಾರರ ಸಮಾವೇಶ

Puttur_Advt_NewsUnder_1
Puttur_Advt_NewsUnder_1



ಬೆಂಗಳೂರು: ಭಾರತೀಯ ಆರ್ಥಿಕ ಸಮಿತಿ ಆಶ್ರಯದಲ್ಲಿ ವಿದೇಶ ಬಂಡವಾಳ ಹೂಡಿಕೆದಾರರ ಸಮಿತಿ ನೇತೃತ್ವದಲ್ಲಿ ಕರ್ನಾಟಕ ಶಾಖೆಯ ಉದ್ಘಾಟನಾ ಸಮಾರಂಭ ಇತ್ತೀಚೆಗೆ ಬೆಂಗಳೂರಿನಲ್ಲಿ ನಡೆಯಿತು. ಕರ್ನಾಟಕದ ಮಾನ್ಯತೆಯನ್ನು ವಿಶ್ವ ಮಟ್ಟದಲ್ಲಿ ವಿಸ್ತರಿಸುವ ನಿಟ್ಟಿನಲ್ಲಿ ಕರ್ನಾಟಕ ಸರಕಾರಕ್ಕೆ ಸೂಕ್ತ ಸಲಹೆ ನೀಡುವುದು ಹಾಗೂ ಸ್ಥಳೀಯ ಮಟ್ಟದಲ್ಲಿ ಸಿಗುವ ಸೌಕರ್ಯಗಳನ್ನು ಬಳಸಿಕೊಂಡು ವಿದೇಶಿ ಬಂಡವಾಳ ಹೂಡಿಕೆಯ ಸಾಧ್ಯತೆಗಳನ್ನು ತೆರೆದಿಡುವುದು ಇದರ ಉದ್ದೇಶ. ಕೊರೋನೊತ್ತರ ಕಾಲಘಟ್ಟದಲ್ಲಿ ಹಮ್ಮಿಕೊಂಡ ಮೊದಲ ಕಾರ್ಯಕ್ರಮ ಇದಾಗಿದ್ದು, ವಿವಿಧ ರಾಷ್ಟ್ರಗಳ ಬಂಡವಾಳ ಹೂಡಿಕೆ ಹಾಗೂ ಸಹಕಾರವನ್ನು ಸಮರ್ಥವಾಗಿ ಬಳಸಿಕೊಳ್ಳುವ ಹಿನ್ನೆಲೆಯಲ್ಲಿ ಈ ಕಾರ್ಯಕ್ರಮ ಮೂಡಿಬಂದಿತು.



ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಕೈಗಾರಿಕಾ ಸಚಿವ ಜಗದೀಶ್ ಶೆಟ್ಟರ್, ಕೊರೋನಾ ಹಾವಳಿ ಇಲ್ಲದೇ ಇರುತ್ತಿದ್ದರೆ ಇಂದು 65,459 ನೇರ ಉದ್ಯೋಗಗಳ ಅವಕಾಶವನ್ನು ಸೃಷ್ಟಿಸುವ ಗುರಿಯನ್ನು ರಾಜ್ಯ ಸರಕಾರ ಹೊಂದಿತ್ತು. ಈ ಹಿನ್ನೆಲೆಯಲ್ಲಿ 31676.57 ಕೋಟಿ ರೂ.ಗಳ ವಿದೇಶಿ ಬಂಡವಾಳ ಆಕರ್ಷಿಸುವ ಯೋಜನೆಯನ್ನು ೫ ತಿಂಗಳ ಹಿಂದೆ ಹಮ್ಮಿಕೊಂಡಿತ್ತು ಎಂದರು. ಭಾರತೀಯ ಆರ್ಥಿಕ ವ್ಯವಹಾಗಳ ಸಂಘ (ಐಇಟಿಓ)ದ ಅಧ್ಯಕ್ಷ ಡಾ. ಆಸಿಫ್ ಇಕ್ಬಾಲ್ ಮಾತನಾಡಿ, ರಾಜ್ಯದ ವಿವಿಧ ಜಿಲ್ಲೆಗಳಿಂದ ಬಂಡವಾಳ ಹೂಡಿಕೆಯ ಸಾಧ್ಯತೆಗಳನ್ನು ಪರಿಶೀಲಿಸುತ್ತಿದ್ದೇವೆ. ಕೊರೋನಾದ ಈ ಸಂದರ್ಭದಲ್ಲಿ ಪ್ರತಿ ಕ್ಷೇತ್ರದ ತಜ್ಞರನ್ನು ಗುರುತಿಸಿ, ಕಾರ್ಯಯೋಜನೆಗಳನ್ನು ಹಮ್ಮಿಕೊಂಡು ಆರ್ಥಿಕ ಪರಿಸ್ಥಿತಿಯನ್ನು ಸುಧಾರಿಸುವ ನಿಟ್ಟಿನಲ್ಲಿ ಯೋಜನೆ ಹಮ್ಮಿಕೊಳ್ಳುತ್ತಿದ್ದೇವೆ. ರಫ್ತು ವಿಚಾರದಲ್ಲಿ ಭಾರತ ಸಂಪದ್ಭರಿತ ಮಾರುಕಟ್ಟೆಯನ್ನು ಹೊಂದಿದೆ ಎಂದರು. ಬೆಂಗಳೂರು ಏರ್‌ಪೋರ್ಟ್ ಸಿಟಿ ಲಿಮಿಟೆಡ್‌ನ ಮುಖ್ಯ ಕಾರ್ಯನಿರ್ವಹಣಾಧಿಕಾರಿ ರಾವ್ ಮುನುಕುಟ್ಲ, ನಿವೃತ್ತ ಐಎಎಸ್ ಅಧಿಕಾರಿ ಕೃಷ್ಣಕುಮಾರ, ಉದ್ಯಮಿ ಇಕ್ಬಾಲ್ ಆಸಿಫ್, ಜಪಾನ್, ಇಸ್ರೇಲ್ ಮೊದಲಾದ ದೇಶಗಳ ಕೈಗಾರಿಕೋದ್ಯಮಿಗಳು ಸೇರಿದಂತೆ ಮೊದಲಾದವರು ಉಪಸ್ಥಿತರಿದ್ದರು.



ನಿರ್ದೇಶಕರಾಗಿ ಆಯ್ಕೆ:

ಭಾರತ – ಮಾಲ್ಡೀವ್ಸ್ ಟ್ರೇಡ್ ಫೋರಂನ ಉಪಾಧ್ಯಕ್ಷ, ಪುತ್ತೂರು ಮೂಲದ ಹೇಮಂತ್ ರೈ ಮನವಳಿಕೆಗುತ್ತು ಅವರು ಫಾರಿನ್ ಇನ್ವೆಸ್ಟರ್‍ಸ್ ಕೌನ್ಸಿಲ್‌ನ ನಿರ್ದೇಶಕರಾಗಿ ಆಯ್ಕೆಯಾದರು. ಮಾಜಿ ಸಚಿವ ನಾಗಾರಾಜ್ ಶೆಟ್ಟಿ, ಸಂಸದ ಕರಡಿ ಸಂಗಣ್ಣನವರ ಪುತ್ರ ಅಮರೇಶ್ ಕರಡಿ ಅವರನ್ನು ನಿರ್ದೇಶಕರಾಗಿ ನೇಮಿಸಲಾಯಿತು.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.