HomePage_Banner
HomePage_Banner
HomePage_Banner
HomePage_Banner
HomePage_Banner
HomePage_Banner

ತಾ.ಪಂ ಸದಸ್ಯ ಶಿವರಂಜನ್ ಅವರ 3ನೇ ಜನೌಷಧಿ ಕೇಂದ್ರ ಉದ್ಘಾಟನೆ| ದರ್ಬೆ ಶಾಖೆಯನ್ನು ಉದ್ಘಾಟಿಸಿದ ಕಲ್ಲಡ್ಕ ಡಾ. ಪ್ರಭಾಕರ್ ಭಟ್

Puttur_Advt_NewsUnder_1
Puttur_Advt_NewsUnder_1
  • ನಮ್ಮ ಚಿಂತನೆ, ಕಲ್ಪಣೆಯಿಂದ ಜನೌಷಧಿ ಜನರ ಬಳಿ ತಲುಪುತ್ತಿದೆ ಡಾ. ಪ್ರಭಾಕರ್ ಭಟ್
  • ಯೋಜನೆಯ ಕುರಿತು ಪಾಸಿಟಿವ್ ತಿಂಗ್ ಮಾಡಿ – ಡಾ. ಅನೀಲ ದೀಪಕ್

ಪುತ್ತೂರು: ಪುತ್ತೂರು ವಿವೇಕಾನಂದ ವಿದ್ಯಾವರ್ಧಕ ಸಂಘ ಮತ್ತು ವಿವೇಕಾನಂದ ಪಾಲಿಟೆಕ್ನಿಕ್ ಕಾಲೇಜ್‌ನ ಸಹಯೋಗದೊಂದಿಗೆ ಈಗಾಗಲೇ ಪುತ್ತೂರು ಎಮ್.ಟಿ. ರಸ್ತೆ ಮತ್ತು ಬೆಳ್ಳಾರೆಯಲ್ಲಿ ಯಶಸ್ವಿಯಾಗಿ ಉತ್ತಮ ಸೇವಾ ಕಾರ್ಯ ನೀಡುತ್ತಿರುವ ಪ್ರಧಾನ ಮಂತ್ರಿ ಜನೌಷಧಿ ಕೇಂದ್ರದ ೩ನೇ ಶಾಖೆಯಾಗಿ ದರ್ಬೆ ಮಹಿಳಾ ವಿವಿಧೋದ್ದೇಶ ಸಹಕಾರ ಸಂಘದ ಕಟ್ಟಡದಲ್ಲಿ ಸೆ.26ರಂದು ಉದ್ಘಾಟನೆಗೊಂಡಿತ್ತು. ವಿವೇಕಾನಂದ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಡಾ.ಪ್ರಭಾಕರ್ ಭಟ್ ಕಲ್ಲಡ್ಕ ಅವರು ಜನೌಷಧಿ ಕೇಂದ್ರವನ್ನು ಉದ್ಘಾಟಿಸಿದರು.


ಜನೌಷಧಿ ಜನರ ಬಳಿ ತಲುಪುತ್ತಿದೆ:
ವಿವೇಕಾನಂದ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಡಾ.ಪ್ರಭಾಕರ್ ಭಟ್ ಕಲ್ಲಡ್ಕ ಅವರು ಮಾತನಾಡಿ ೧೯೪೭ರಲ್ಲಿ ಸ್ವಾತಂತ್ರ್ಯದ ಹಿನ್ನೆಲೆಯಂತೆ ನಮ್ಮತನ, ನಮ್ಮ ಚಿಂತನೆ, ನಮ್ಮ ಯೋಚನೆ, ಕಲ್ಪಣೆಗಳು ಇರಬೇಕು. ಆದರೆ ಸುಮಾರು ಆರುವರೆ ದಶಕಗಳ ಕಾಲ ನಮ್ಮತನ ಇರಲಿಲ್ಲ. ಎಲ್ಲದಕ್ಕೂ ವಿದೇಶಿಯನ್ನೇ ಅವಲಂಭಿತರಾಗಿದ್ದೆವು. ಪ್ರಧಾನಿ ನರೇಂದ್ರ ಮೋದಿ ಬಂದ ಮೇಲೆ ಅವರು ನಮ್ಮತನ ತರುವಂತಹ ಪ್ರಯತ್ನ ಮಾಡಿದ್ದಾರೆ. ಅದರಲ್ಲಿ ಒಂದು ಜನೌಷಧಿ. ಹಾಗಾಗಿ ಇವತ್ತು ನಮ್ಮ ಚಿಂತನೆ, ಕಲ್ಪಣೆಯಿಂದ ಜನೌಷಧಿ ಜನರ ಬಳಿ ತುಲುಪುತ್ತಿದೆ ಎಂದು ಹೇಳಿದರು. ಸರ್ವ ಸಾಮಾನ್ಯರಿಗೆ ಇವತ್ತು ಆರೋಗ್ಯ ಚೆನ್ನಾಗಿರಬೇಕೆಂದು ಜನಸಾಮಾನ್ಯರಿಗೆ ಔಷಧಿಗಳು ಮತ್ತು ವೈದ್ಯಕೀಯ ಸಲಕರಣೆಗಳು ಕೈಗೆಟಕುವ ದರದಲ್ಲಿ ಲಭ್ಯವಾಗಿದೆ. ಬ್ರಾಂಡೆಡ್ ಕಂಪೆನಿಗಳ ಮತ್ತು ಸ್ಥಾಪಿತ ಹಿತಾಸಕ್ತಿಗಳ ಅಪಪ್ರಚಾರದ ನಡುವೆಯೂ ದೇಶದಲ್ಲಿ ಜನರ ವಿಶ್ವಾಸ ಗಳಿಸುವಲ್ಲಿ ಜನೌಷಧಿ ಯಶಸ್ವಿಯಾಗಿದೆ ಎಂದರು.

ಯೋಜನೆಯ ಕುರಿತು ಪಾಸಿಟಿವ್ ತಿಂಕ್ ಮಾಡಿ:
ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಪ್ರಧಾನ ಮಂತ್ರಿ ಭಾರತೀಯ ಜನೌಷಧಿ ಪರಿ ಯೋಜನೆಯ ಹಿರಯ ಮಾರುಕಟ್ಟೆ ಅಧಿಕಾರಿ ಡಾ. ಅನಿಲದೀಪಕ್ ಅವರು ಮಾತನಾಡಿ ೨೦೧೮ ಮತ್ತು ೧೯ರ ತನಕ ಜನೌಷಧಿಯಲ್ಲಿ ಔಷಧಿಯ ಸಪ್ಲಾಯ್‌ಗೆ ತೊಂದರೆ ಆಗಿತ್ತು. ಆದರೆ ಇತ್ತೀಚೆಗ ಪ್ರಸ್ತುತ ದಿನಗಳಲ್ಲಿ ಜನೌಷಧಿ ಪರಿಯೋಜನೆಯೊಳಗೆ ಶೇ.೯೦ ಸಪ್ಲಾಯಿ ಇದೆ. ಹಾಗಾಗಿ ಜನೌಷಧಿಯ ಕುರಿತು ನೆಗೆಟಿವ್ ತಿಂಕ್ ಬೇಡ. ಪಾಸಿಟಿವ್ ತಿಂಕ್ ಇರಲಿ. ಜನೌಷಧಿಯಲ್ಲೇ ೯೦೦ ತರದ ಔಷಧಿಗಳು ಮತ್ತು ೧೫೦ ತರದ ಸರ್ಜಿಕಲ್ಸ್ ಗಳು ದೊರೆಯುತ್ತದೆ. ದಕ್ಷಿಣ ಕನ್ನಡ ಜಿಲ್ಲೆಯ ಹೆಚ್ಚಿನ ಜನರು ಪ್ರಧಾನಮಂತ್ರಿ ಜನೌಷದಿಂದಲೆ ಜೌಷಧಿ ಪಡೆಯುತ್ತಿದ್ದಾರೆ. ಹಾಗಾಗಿ ದ.ಕ.ಜಿಲ್ಲೆ ಎರಡನೇ ಸ್ಥಾನದಲ್ಲಿದೆ. ಮುಂದಿನ ತಿಂಗಳು ೧೫ ಮಳಿಗೆಗಳು ಜಿಲ್ಲೆಯಲ್ಲಿ ಆರಂಭಗೊಳ್ಳಲಿದೆ. ಜನೌಷಧಿ ವ್ಯವಸ್ಥೆಯ ಕುರಿತು ಜನರಲ್ಲಿ ಅರಿವು ಮೂಡಿಸಲು ಕೇಂದ್ರ ಸರಕಾರ ರೂ. ೯೦೦ ಕೋಟಿ ವೆಚ್ಚದಲ್ಲಿ ವಿಶೇಷ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಿದೆ ಎಂದರು. ಮುಖ್ಯ ಅತಿಥಿಗಳಾಗಿ ಪುತ್ತೂರು ವಿವೇಕಾನಂದ ಪಾಲಿಟೆಕ್ನಿಕ್ ಕಾಲೇಜ್‌ನ ಆಡಳಿತ ಮಂಡಳಿ ಅಧ್ಯಕ್ಷ ಪ್ರಸನ್ನ ಎನ್. ಭಟ್, ಸಂಚಾಲಕ ಸಿ. ಮಹಾದೇವ ಶಾಸ್ತ್ರಿ, ಕಾಲೇಜ್‌ನ ಪ್ರಾಂಶುಪಾಲ ಗೋಪಿನಾಥ ಶೆಟ್ಟಿ ಎಂ., ಕ್ಯಾಂಪ್ಕೋ ಚಾಕಲೇಟ್ ಕಾರ್ಖಾನೆಯ ಕಾರ್ಯನಿರ್ವಾಹಕ ನಿದೇರ್ಶಕ ಕೃಷ್ಣಕುಮಾರ್, ಮಹಿಳಾ ವಿವಿಧೋದ್ದೇಶ ಸಹಕಾರ ಸಂಘದ ಅಧ್ಯಕ್ಷೆ ಗೌರಿ ಬನ್ನೂರು ಶುಭ ಹಾರೈಸಿದರು.


ಜನೌಷಧಿ ಕೇಂದ್ರದ ಮಾಲಕ ಹಾಗೂ ತಾಲೂಕು ಪಂಚಾಯತ್ ಸದಸ್ಯ ಶಿವರಂಜನ್ ಎಂ. ಸ್ವಾಗತಿಸಿ, ಪುತ್ತೂರು ಕೋ-ಆಪರೇಟಿವ್ ಟೌನ್‌ಬ್ಯಾಂಕ್ ನಿರ್ದೇಶಕ ಚಂದ್ರಶೇಖರ್ ರಾವ್ ಬಪ್ಪಳಿಗೆ ವಂದಿಸಿದರು. ಎಪಿಎಂಸಿ ಸದಸ್ಯರಾದ ಬೂಡಿಯಾರ್ ರಾಧಾಕೃಷ್ಣ ರೈ, ತ್ರಿವೇಣಿ ಪೆರ್‍ವೋಡಿ, ತಾ.ಪಂ ಸ್ಥಾಯಿ ಸಮಿತಿ ಅಧ್ಯಕ್ಷ ಸಾಜ ರಾಧಾಕೃಷ್ಣ ಆಳ್ವ, ಸದಸ್ಯ ಹರೀಶ್ ಬಿಜತ್ರೆ, ಮುಕುಂದ ಕಡಬ ತಾಲೂಕು ಪಂಚಾಯತ್ ಅಧ್ಯಕ್ಷೆ ಜಯಂತಿ, ಉಪಾಧ್ಯಕ್ಷೆ ರಾಜೇಶ್ವರಿ, ಸದಸ್ಯೆ ತೇಜಸ್ವಿನಿ ಕಟ್ಟಪುಣಿ, ಮಹಿಳಾ ವಿವಿಧೋದ್ದೇಶ ಸಹಕಾರಿ ಸಂಘದ ನಿರ್ದೇಶಕರಾದ ಮೋಹಿನಿ ದಿವಾಕರ್, ಇಂದಿರಾ ಆಚಾರ್ಯ, ಪ್ರೇಮಲತಾ ರಾವ್ ಜಯಶ್ರೀ ಶೆಟ್ಟಿ, ಪ್ರಭಾರ ಕಾರ್ಯನಿರ್ವಹಣಾಧಿಕಾರಿ ವಿದ್ಯಾ, ತಾ.ಪಂ ಕಾರ್ಯನಿರ್ವಹಾಕ ಅಧಿಕಾರಿ ನವೀನ್ ಭಂಡಾರಿ, ಮುಳಿಯ ಜ್ಯುವೆಲ್ಸ್‌ನ ಮುಳಿಯ ಕೃಷ್ಣನಾರಾಯಣ, ಪದ್ಮಶ್ರೀ ಸೋಲಾರ್ ಸಿಸ್ಟಮ್ಸ್‌ನ ಉದ್ಯಮಿ ಸೀತಾರಾಮ ರೈ, ಮಾಜಿ ಪುರಸಭಾಧ್ಯಕ್ಷ ರಾಜೇಶ್ ಬನ್ನೂರು, ಉದ್ಯಮಿ ವಾಮನ್ ಪೈ, ಭಾಮಿ ಜಗದೀಶ್ ಶೆಣೈ, ಅನೀಶ್ ಬಡೆಕ್ಕಿಲ, ವೇಣು ಶರ್ಮ, ಬಿಎಮ್‌ಎಸ್ ಆಟೋ ರಿಕ್ಷಾ ಚಾಲಕ ಮಾಲಕರ ಸಂಘದ ಮಾಜಿ ಅಧ್ಯಕ್ಷ ದೇವಪ್ಪ ಗೌಡ ಸೇರಿದಂತೆ ಹಲವಾರು ಮಂದಿ ಉಪಸ್ಥಿತರಿದ್ದರು.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.