HomePage_Banner
HomePage_Banner
HomePage_Banner
HomePage_Banner
HomePage_Banner
HomePage_Banner

ವಿವೇಕಾನಂದ ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿಗಳು ಮತ್ತು ಉಪನ್ಯಾಸಕರಿಂದ ವಿನೂತನ ಪ್ರಯತ್ನ| ಯಕ್ಷಗಾನ ತಾಳಮದ್ದಳೆ ನರಕಾಸುರ ಮೋಕ್ಷ ಕಾರ್ಯಕ್ರಮ

Puttur_Advt_NewsUnder_1
Puttur_Advt_NewsUnder_1
  • ಸೆ.27ರಂದು ಯುಟ್ಯೂಬ್‌ನಲ್ಲಿ ಪ್ರಸಾರ

ಪುತ್ತೂರು: ಕೊರೋನಾ ವನ್ನು ತಡೆಗಟ್ಟುವ ನಿಟ್ಟಿನಲ್ಲಿ ಶಾಲಾ , ಕಾಲೇಜುಗಳು ಆರಂಭಗೊಳ್ಳದೆ ಶಿಕ್ಷಣವನ್ನು ಆನ್‌ಲೈನ್ ಮೂಲಕ ಕಲಿಯುವ ಅರ್ನಿವಾಯತೆ ತಲೆದೋರಿದರೂ ಸಾಂಸ್ಕೃತಿಕ ರಸದೌತಣವನ್ನು ನೀಡಲು ವಿವೇಕಾನಂದ ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿಗಳಿಂದ ಮತ್ತು ಉಪನ್ಯಾಸಕರ ಸಹಕಾರದಿಂದ ನರಕಾಸುರ ಮೋಕ್ಷ ಎಂಬ ಯಕ್ಷಗಾನ ತಾಳಮದ್ದಳೆ ಕಾರ್ಯಕ್ರಮವು ಯುಟ್ಯೂಬ್‌ನಲ್ಲಿ ಬಿತ್ತರಗೊಳ್ಳಲಿದೆ. ಈ ಕಾರ್ಯಕ್ರಮವು ಸೆಪ್ಟೆಂಬರ್ 27ನೇ ತಾರೀಕಿನಂದು ಸಂಜೆ ಆರು ಗಂಟೆಗೆ ಪ್ರಸಾರವಾಗಲಿದೆ.

ಮುಮ್ಮೇಳದಲ್ಲಿ ದೇವೆಂದ್ರನಾಗಿ ವಿದ್ಯಾರ್ಥಿನಿ ಕೃತಿ ಕೆ.ಎಂ, ನಾರದನಾಗಿ ಶ್ರೀ ವಿದ್ಯಾ ಬಿ.ಆರ್, ಶ್ರೀಕೃಷ್ಣನಾಗಿ ಗಹನಶ್ರೀ, ಸತ್ಯಭಾಮೆಯಾಗಿ ಭಾಗವಹಿಸಿದ ಶ್ರೇಯಾ, ನರಕಾಸುರನಾಗಿ ಅನೀಶ್ ಕೃಷ್ಣ, ಮುರಾಸುರನಾಗಿ ಅನ್ವಿತ್ ಗೊಪ, ದೇವದೂತನಾಗಿ ಭಗತ್ ಎಚ್ ಎನ್ ಭಾಗವಹಿಸಿರುತ್ತಾರೆ. ಅದೇ ರೀತಿ ಹಿಮ್ಮೇಳದಲ್ಲಿ ಭಾಗವತಿಕೆಗೆ ಹೇಮಸ್ವಾತಿ ಕುರಿಯಾಜೆ, ಚೆಂಡೆಯಲ್ಲಿ ಅಂಬಾತನಯ ಅರ್ನಾಡಿ, ಮದ್ದಳೆಯಲ್ಲಿ ಭೀಮ ಭಾರದ್ವಾಜ್, ಚಕ್ರತಾಳದಲ್ಲಿ ನವೀನಕೃಷ್ಣ ಮತ್ತು ಸಾತ್ವಿಕ್ ವಿ ನಾಯಕ್ ಮತ್ತು ನಿರೂಪಕಿಯಗಿ ದೇವಿಕಾ ಕುರಿಯಾಜೆ ತಮ್ಮ ಸಹಕಾರವನ್ನು ನೀಡಿರುತ್ತಾರೆ. ಈ ಕಾರ್ಯಕ್ರಮದ ಸಾಹಿತ್ಯ ಮತ್ತು ನಿರ್ದೇಶನವನ್ನು ಕಾಲೇಜಿನ ವಾಣಿಜ್ಯ ವಿಭಾಗದ ಉಪನ್ಯಾಸಕ ಶ್ರೀಧರ ವಿ ಶೆಟ್ಟಿಗಾರ್ ,ಸಮನ್ವಯ ಮತ್ತು ಸಂಕಲನಕಾರರಾಗಿ ಗಣಕ ವಿಜ್ಞಾನ ವಿಭಾಗದ ಉಪನ್ಯಾಸಕ ಅಜಯಶಾಸ್ತ್ರಿ ನಿರ್ವಹಿಸಿರುತ್ತಾರೆ. ಇದರ ಜೊತೆಗೆ ವಿವೇಕಾನಂದ ಪದವಿ ಕಾಲೇಜಿನ ವಿಕಸನ ಸ್ಟುಡಿಯೋ ಈ ಕಾರ್ಯಕ್ರಮಕ್ಕೆ ಸಂಪುರ್ಣ ಸಹಕಾರವನ್ನು ನೀಡಿದೆ.

ನಿಗದಿಪಡಿಸಲಾದ ಸಮಯದಲ್ಲಿ http://youtu.be/lr7i3SKQCBo ಲಿಂಕ್ ಓಪನ್ ಮಾಡುವ ಮೂಲಕ ಈ ಕಾರ್ಯಕ್ರಮವನ್ನು ವೀಕ್ಷಿಸಲು ಅವಕಾಶವಿದೆ. ಅದೇ ರೀತಿ ಯುಟ್ಯೂಬ್‌ನಲ್ಲಿ Vpuc Puttur ಎಂದು ಸರ್ಚ್ ಮಾಡಿದರೂ ಆಯ್ಕೆ ಲಭ್ಯವಿರುತ್ತದೆ.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.