HomePage_Banner
HomePage_Banner
HomePage_Banner
HomePage_Banner
HomePage_Banner
HomePage_Banner

ಕೇರಳಕ್ಕೆ ಅಕ್ರಮವಾಗಿ ರಕ್ತಚಂದನ ಸಾಗಾಟ ಮಾಡುತ್ತಿದ್ದ ವ್ಯಕ್ತಿಯ ಬಂಧನ| ವಿಟ್ಲ ಠಾಣಾ ಎಸ್.ಐ ವಿನೋದ್ ರೆಡ್ಡಿಯವರ ನೇತೃತ್ವದ ಪೊಲೀಸರ ತಂಡದ ಕಾರ್ಯಾಚರಣೆ

Puttur_Advt_NewsUnder_1
Puttur_Advt_NewsUnder_1

ವಿಟ್ಲ: ಕೇರಳಕ್ಕೆ ಅಕ್ರಮವಾಗಿ ರಕ್ತ ಚಂದನ ಸಾಗಾಟ ಮಾಡುತ್ತಿದ್ದ ವ್ಯಕ್ತಿಯೋರ್ವರನ್ನು ವಿಟ್ಲ ಠಾಣಾ ಎಸ್.ಐ ವಿನೋದ್ ರೆಡ್ಡಿಯವರ ನೇತೃತ್ವದ ಪೊಲೀಸರ ತಂಡ ಸೆ.26ರಂದು ಬಂಧಿಸಿದೆ.


ಪುತ್ತೂರು ತಾಲೂಕು ಸವಣೂರು ಗ್ರಾಮದ ಇಬ್ರಾಹಿಂರವರ ಪುತ್ರ ಅಬ್ಬು ಚಾಪಳ್ಳ ಅಲಿಯಾಸ್ ಉಮ್ಮರ್ ಫಾರೂಕ್ (32 ವ.)ರವರು ಬಂಧಿತ ಆರೋಪಿಯಾಗಿದ್ದಾರೆ.
ಸೆ.26ರಂದು ವಿಟ್ಲ ಠಾಣಾ ಎಸ್.ಐ ವಿನೋದ್ ರೆಡ್ಡಿಯವರ ನೇತೃತ್ವದ ಪೊಲೀಸರ ತಂಡ ಗಸ್ತು ತಿರುಗುತ್ತಿದ್ದ ವೇಳೆ ವಿಟ್ಲ ಸರಕಾರಿ ಬಸ್ಸು ನಿಲ್ದಾಣದ ಬಳಿ ವ್ಯಕ್ತಿಯೋರ್ವ ಪ್ಲಾಸ್ಟಿಕ್ ಚೀಲವೊಂದನ್ನು ಹಿಡಿದು ಅನುಮಾನಾಸ್ಪದವಾಗಿ ತಿರುಗಾಡುತ್ತಿರುವುದು ಕಂಡು ಬಂದಿತ್ತು. ಆತನನ್ನು ಕರೆದು ವಿಚಾರಣೆ ನಡೆಸಿದಾಗ ಆತ ತದ್ವಿರುದ್ಧ ಉತ್ತರ ನೀಡಿದ ಹಿನ್ನೆಲೆಯಲ್ಲಿ ಆತನನ್ನು‌ ವಶಕ್ಕೆ ಪಡೆದು ಠಾಣೆಗೆ ಕರೆತಂದು ಇನ್ನಷ್ಟು ವಿಚಾರಣೆ ನಡೆಸಿದಾಗ ಆತ ಬೆಂಗಳೂರಿನಿಂದ ಕೇರಳಕ್ಕೆ ರಕ್ತ ಚಂದನ ಸಾಗಾಟ ಮಾಡುತ್ತಿರುವುದಾಗಿ ತಿಳಿದುಬಂದಿತ್ತು. ಬಳಿಕ  ಆತನ‌ ಬಳಿ ಇದ್ದ ಪ್ಲಾಸ್ಟಿಕ್ ಚೀಲವನ್ನು ತೆರೆದು ನೋಡಿದಾಗ 24,200 ರೂಪಾಯಿ ಮೌಲ್ಯದ 12 ಕಿಲೋ ಗ್ರಾಂ ತೂಕದ ರಕ್ತ ಚಂದನದ ತುಂಡು ಪತ್ತೆಯಾಗಿದೆ.  ಸಾಗಟ  ಮಾಡಲು ಯಾವುದೇ ಪರವಾನಗಿ ಹೊಂದಿರದ ಹಿನ್ನೆಲೆಯಲ್ಲಿ ಆತನ ವಿರುದ್ದ ವಿಟ್ಲ ಠಾಣಾ ಪೊಲೀಸರು  ಪ್ರಕರಣ ದಾಖಲಿಸಿಕೊಂಡಿದ್ದಾರೆ. ಬೆಂಗಳೂರು ಮೂಲದ ವ್ಯಕ್ತಿಯೋರ್ವನಿಂದ ತಾನು ರಕ್ತಚಂದನವನ್ನು ಪಡೆದುಕೊಂಡಿರುವುದಾಗಿ ಆತ ವಿಚಾರಣೆ ವೇಳೆ ಬಾಯ್ಬಿಟ್ಟಿರುವುದಾಗಿ ಪೊಲೀಸರು ತಿಳಿಸಿದ್ದಾರೆ. ವಿಟ್ಲ ಠಾಣಾ ಎಸ್.ಐ ವಿನೋದ್ ರೆಡ್ಡಿಯವರ ನೇತೃತ್ವದಲ್ಲಿ  ಸಿಬಂದಿಗಳಾದ ಪ್ರಸನ್ನ, ಜಯರಾಮ, ಲೊಕೇಶ್, ವಿನಾಯಕ,  ಪ್ರತಾಪ್ ರೆಡ್ಡಿ ಮೊದಲಾದವರು ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದಾರೆ.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.