HomePage_Banner
HomePage_Banner
HomePage_Banner
HomePage_Banner
HomePage_Banner
HomePage_Banner

ಸೆ.28: ಪುರಭವನದಲ್ಲಿ ‘ಬಾಟಲಿ ಭೂತ’ ಶೈಕ್ಷಣಿಕ ನಾಟಕ ಪ್ರದರ್ಶನ | ಕೊರೋನಾ ಬಳಿಕ ಮತ್ತೆ ಚಿಗುರಿದ ರಂಗ ಚಟುವಟಿಕೆ

Puttur_Advt_NewsUnder_1
Puttur_Advt_NewsUnder_1

ಪುತ್ತೂರು: ಶಿಕ್ಷಣ ಸಂಪನ್ಮೂಲ ಕೇಂದ್ರಗಙಳ ಒಕ್ಕೂಟ, ಶಿಕ್ಷಣ ಸಂಪನ್ಮೂಲ ಕೇಂದ್ರ ಪುತೂರು ತಾಲೂಕು ಘಟಕ ಸಹಯೋಗದಲ್ಲಿ ಪಡಿ ಮಂಗಳೂರು ಮತ್ತು ಶ್ರೀ ಮಹಾಲಿಂಗೇಶ್ವರ ದೇವಸ್ಥಾನ ಪುತ್ತೂರು ಇದರ ಸಹಕಾರದೊಂದಿಗೆ ಸುಸ್ಥಿರ ಸಮಾಜದಲ್ಲಿ ಮಕ್ಕಳು – ತಿಮಿರದಾಚೆಗೆ ಬಾ ಎಂಬ ಪರಿಕಲ್ಪನೆಯೊಂದಿಗೆ ‘ಬಾಟಲಿ ಭೂತ’ ಶೈಕ್ಷಣಿಕ ನಾಟಕ ಪ್ರದರ್ಶನ ಹಾಗೂ ಕಲಾ ಜಾಥಾ ಉದ್ಘಾಟನ ಸಮಾರಂಭವು ಸೆ.28ರಂದು ಮಧ್ಯಾಹ್ನ ಗಂಟೆ 2ಕ್ಕೆ ಪುತ್ತೂರು ಪುರಭವನದಲ್ಲಿ ಜರುಗಲಿದ್ದು ಕೊರೋನಾ ಬಳಿಕ ಮತ್ತೆ ರಂಗ ಚಟುವಟಿಕೆ ಚಿಗುರಿದಂತಾಗಿದೆ.

‘ಬಾಟಲಿ ಭೂತ’ ಎಂಬ ನಾಟಕವೊಂದರ ತರಬೇತಿ ಕಾರ್ಯವು ಕಳೆದ 8 ದಿನಗಳಿಂದ ರಂಗನಿರ್ದೇಶಕ ಕೃಷ್ಣಪ್ಪ ಬಂಬಿಲ ಅವರ ಮುಖ್ಯ ನಿರ್ದೇಶನದಲ್ಲಿ ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ನಟರಾಜ ವೇದಿಕೆಯ ಆವರಣದಲ್ಲಿ ನಡೆಯುತ್ತಿತ್ತು. 15 ದಿನಗಳ ತರಬೇತಿ ಕಾರ್ಯದಲ್ಲಿ 12 ಮಂದಿ ವಿದ್ಯಾರ್ಥಿ ಕಲಾವಿದರು ನಾಟಕದಲ್ಲಿ ತಮ್ಮ ಪ್ರದರ್ಶನ ನೀಡಲಿದ್ದಾರೆ.

ಶಾಸಕ ಸಂಜೀವ ಮಠಂದೂರು ಅವರು ಕಾರ್ಯಕ್ರಮ ಉದ್ಘಾಟಿಸಲಿದ್ದು, ಶಿಕ್ಷಣ ಸಂಪನ್ಮೂಲ ಕೇಂದ್ರಗಳ ಒಕ್ಕೂಟ ಇದರ ಅಧ್ಯಕ್ಷ ಜಾಕೀರ್ ಹುಸೇನ್ ಅಧ್ಯಕ್ಷತೆ ವಹಿಸಲಿದ್ದಾರೆ. ಉದ್ಯಮಿ ಕರುಣಾಕರ ರೈ ಮತ್ತು ಲಯನ್ಸ್‌ಕ್ಲಬ್ ಕಾವು ಇದರ ವಲಯ ಅಧ್ಯಕ್ಷ ಕಾವು ಹೇಮನಾಥ ಶೆಟ್ಟಿ ಕಲಾ ಜಾಥವನ್ನು ಉದ್ಘಾಟಿಸಲಿದ್ದಾರೆ. ಸಹಾಯಕ ಆಯುಕ್ತ ಡಾ. ಯತೀಶ್ ಉಳ್ಳಾಲ್, ತಾ.ಪಂ ಅಧ್ಯಕ್ಷ ರಾಧಾಕೃಷ್ಣ ಬೋರ್ಕರ್, ತಾ.ಪಂ ಕಾರ್ಯನಿರ್ವಹಾಕ ಅಧಿಕಾರಿ ನವೀನ್ ಭಂಡಾರಿ, ಪೌರಾಯುಕ್ತೆ ರೂಪಾ ಶೆಟ್ಟಿ, ಕ್ಷೇತ್ರ ಶಿಕ್ಷಣಾಧಿಕಾರಿ ಸಿ.ಲೋಕೇಶ್, ಪಡಿ ಮಂಗಳೂರಿನ ನಿರ್ದೇಶಕ ರೆನ್ನಿ ಡಿಸೋಜ ಅತಿಥಿಗಳಾಗಿ ಭಾಗವಹಿಸಲಿದ್ದಾರೆ ಎಂದು ಶಿಕ್ಷಣ ಸಂಪನ್ಮೂಲ ಕೇಂದ್ರಗಳ ಒಕ್ಕೂಟದ ಪ್ರಧಾನ ಕಾರ್ಯದರ್ಶಿ ವತ್ಸಲಾ ನಾಯಕ್ ಮತ್ತು ಪುತ್ತೂರು ಘಟಕದ ಅಧ್ಯಕ್ಷೆ ನಯನಾ ರೈ ತಿಳಿಸಿದ್ದಾರೆ.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.