HomePage_Banner
HomePage_Banner
HomePage_Banner
HomePage_Banner
HomePage_Banner
HomePage_Banner

ರೈತರು ಯಾವುದೇ ಪ್ರಚೋದನೆಗಳಿಗೆ ಒಳಗಾಗಬೇಡಿ – ಶಾಸಕ ಸಂಜೀವ ಮಠಂದೂರು ವಿನಂತಿ

Puttur_Advt_NewsUnder_1
Puttur_Advt_NewsUnder_1

ಪುತ್ತೂರು: ರೈತರ ಹಿತವನ್ನು ಕಾಪಾಡುವ ನಿಟ್ಟಿನಲ್ಲಿ ಕೃಷಿ ಮಸೂದೆ ತರುವ ಕೆಲಸ ಕೇಂದ್ರ ಮತ್ತು ರಾಜ್ಯ ಸರಕಾರ ಮಾಡಿದೆ. ರೈತರು ಸ್ವಾಭಿಮಾನಿಯಾಗಿ ಬೆಳೆಯಬೇಕು ಎಂಬುದೇ ಇದರ ಉದ್ದೇಶ. ಆದರೆ ಒಂದಷ್ಟು ಸಂಘ ಸಂಸ್ಥೆಗಳು ಮತ್ತು ರಾಜಕೀಯ ಪಕ್ಷಗಳು ರೈತರ ತಲೆಯಲ್ಲಿ ಭಯ ಹುಟ್ಟಿಸುವ ಕೆಲಸ ಮಾಡಿದ್ದಾರೆ. ಇಂತಹ ಯಾವುದೇ ಪ್ರಚೋದನೆಗಳಿಗೆ ರೈತರು ಒಳಗಾಗಬಾರದು ಎಂದು ಶಾಸಕ ಸಂಜೀವ ಮಠಂದೂರು ತಿಳಿಸಿದ್ದಾರೆ.

ಅವರು ಪತ್ರಕರ್ತರೊಂದಿಗೆ ಮಾತನಾಡಿ ದೇಶ ವ್ಯಾಪಿಯಾಗಿ ರೈತರು ಒಂದಷ್ಟು ತಪ್ಪು ಮನೋಭಾವನೆ ಹೊಂದಿದ್ದಾರೆ. ಬಹುಶಃ ರೈತರು ಬಹುರಾಷ್ಟ್ರೀಯ ಕಂಪೆನಿಗಳು ಬಂದು ಇಲ್ಲಿ ನೂರಾರು ಎಕ್ರೆ ಕೃಷಿ ಮಾಡಿ ಅಲ್ಲಿ ವಸ್ತುಗಳನ್ನು ಯಾವುದೋ ದೊಡ್ಡ ದೊಡ ಮಾಲುಗಳಲ್ಲಿ ಮಾರಾಟ ಮಾಡುವ ಮೂಲಕ ಸಣ್ಣಹಿಡುವಳಿ ದಾರರಿಗೆ ಬದುಕಲು ಕಷ್ಟ ಆಗಬಹುದು. ಎನ್ನುವಂತಹ ಒಂದು ಭಯವನ್ನು ಒಂದಷ್ಟು ಸಂಘ ಸಂಸ್ಥೆಗಳು, ರಾಜಕೀಯ ಪಕ್ಷಗಳು ರೈತರ ತಲೆಯಲ್ಲಿ ತುಂಬಿ ರೈತರನ್ನು ಇವತ್ತು ಬೀದಿಗೆ ಇಳಿದು ಹೋರಾಟ ಮಾಡಲು ಪ್ರಚೋದನೆ ಮಾಡುವ ಸಂಗತಿ ಮಾಡಿದ್ದಾರೆ. ಆದರೆ ರೈತರ ಹಿತವನ್ನು ಕಾಯುವ ಸಂಗತಿ ದೇಶದ ಪ್ರಧಾನಿಯವರು ಆತ್ಮನಿರ್ಭರ ಭಾರತದ ಮೂಲಕ ಮಾಡಿದ್ದಾರೆ. ಆದೇ ರೀತಿ ಕಿಸಾನ್ ಸಮ್ಮಾನ್, ಫಝಲ್ ಬಿಮಾ, ಅನುಷ್ಠಾನ ತರುವ ಮೂಲಕ ರೈತರ ಪರವಾಗಿ ನಾವಿದ್ದೇವೆ ಎಂದು ತೋರಿಸಿಕೊಟ್ಟಿದ್ದಾರೆ.

ಈ ನಿಟ್ಟಿನಲ್ಲಿ ರೈತರು ಯಾವುದೇ ಪ್ರಚೋದನೆಗಳಿಗೆ ಒಳಗಾಗದೆ ಭಯವಿಲ್ಲದೆ ಕೇಂದ್ರ ಸರಕಾರ, ರಾಜ್ಯ ಮಸೂದೆಯನ್ನು ಒಪ್ಪಬಹುದು. ಬಿಜೆಪಿ ಮತ್ತು ಎನ್‌ಡಿಎ ಈ ದೇಶದ ರೈತರಿಗೆ ಸದಾ ಬೆಂಬಲ ನೀಡುತ್ತದೆ. ರೈತರ ಹೆಸರಿನಲ್ಲಿ ಹಾದಿ ತಪ್ಪಿಸುವ ಯಾವುದೇ ಪ್ರತಿಭಟನೆಗಳಿಗೆ ಬೆಂಬಲ ನೀಡುವುದಿಲ್ಲ. ಬಿ.ಎಸ್. ಯಡಿಯೂರಪ್ಪ ನೇತೃತ್ವದ ರಾಜ್ಯ ಬಿಜೆಪಿ ಸರ್ಕಾರ ಕೂಡಾ ರೈತ ಪರ ಮಸೂದೆಯನ್ನು ಅಂಗೀಕಾರ ಮಾಡಿದೆ. ಕೃಷಿಕರು ಅಪಪ್ರಚಾರಗಳಿಗೆ ಬಲಿ ಬೀಳುವ ಅಗತ್ಯವಿಲ್ಲ. ಪ್ರತಿಭಟನೆ ನಡೆಸುವವರಿಗೆ ಕೂಡಾ ವಾಸ್ತವ ಅಂಶ ಅರಿವಾಗಲಿದೆ ಎಂದು ತಿಳಿಸಿದ್ದಾರೆ.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.