HomePage_Banner
HomePage_Banner
HomePage_Banner
HomePage_Banner
HomePage_Banner
HomePage_Banner

ಬಿಜೆಪಿ ಕಚೇರಿಯಲ್ಲಿ ಅಗಲಿದ ನಾಯಕರಿಗೆ ನುಡಿನಮನ, ದೀನ್‌ದಯಾಳ್ ಉಪಾಧ್ಯಾಯ ದಿನಾಚರಣೆ

Puttur_Advt_NewsUnder_1
Puttur_Advt_NewsUnder_1
  • ಸಂಘಟಕನಿಗೆ ಜಸ್ವಂತ್ ಸಿಂಗ್‌ರವರ ಮಾರ್ಗದರ್ಶನ ಮುಖ್ಯ – ಸಂಜೀವ ಮಠಂದೂರು
  • ಈಗಿನ ಆಡಳಿತ ವ್ಯವಸ್ಥೆಗೆ ದೀನ್ ದಯಾಳ್ ಅವರ ಕಲ್ಪಣೆ ಪ್ರಸ್ತುತ – ಗೋಪಾಲಕೃಷ್ಣ ಹೇರಳೆ
  • ದೀನ್‌ದಯಾಳ್ ಉಪಾಧ್ಯಾಯರ ಸಂದೇಶ ಭಗವದ್ಗೀತೆ ಇದ್ದಂತೆ – ಅಚ್ಚುತ ಮೂಡೆತ್ತಾಯ

ಪುತ್ತೂರು: ಕೇಂದ್ರದ ಮಾಜಿ ಸಚಿವ ಜಸ್ವಂತ್ ಸಿಂಗ್ ಮತ್ತು ತಾ.ಪಂ ಮಾಜಿ ಸದಸ್ಯ ಉದಯ ಕುಮಾರ್ ಬಿಳಿನೆಲೆ ಅವರ ನಿಧನದ ಹಿನ್ನೆಲೆಯಲ್ಲಿ ನುಡಿನಮನ ಮತ್ತು ಪಂಡಿತ್ ದೀನ್ ದಯಾಳ್ ಅವರ ದಿನಾಚರಣೆ ಸೆ.27ರಂದು ಪುತ್ತೂರು ಬಿಜೆಪಿ ಕಚೇರಿಯಲ್ಲಿ ನಡೆಯಿತು. ಈ ಸಂದರ್ಭದಲ್ಲಿ ಹಿರಿಯರಾದ ನನ್ಯ ಅಚ್ಚುತ ಮೂಡೆತ್ತಾಯ ಅವರನ್ನು ಗೌರವಿಸಲಾಯಿತು.

ಸಂಘಟಕನಿಗೆ ಜಸ್ವಂತ್ ಸಿಂಗ್‌ರವರ ಮಾರ್ಗದರ್ಶನ ಮುಖ್ಯ:
ಶಾಸಕ ಸಂಜೀವ ಮಠಂದೂರು ಅವರು ಮಾತನಾಡಿ ಸೈನ್ಯದಲ್ಲಿ ಸೈನಿಕನಾಗಿ ದೇಶ ಸೇವೆ ಯಾವ ರೀತಿ ಮಾಡಬೇಕೆಂದು ರಾಜಕೀಯ ಸೇವೆ ಬಂದು ತೋರಿಸಿಕೊಡುವ ಮೂಲಕ ನಾಡಿಗೆ ತನ್ನದೇ ಆದ ಕೊಡುಗೆಯನ್ನು ನೀಡಿದ ಕೇಂದ್ರದ ಮಾಜಿ ಸಚಿವ ಜಸ್ವಂತ್ ಸಿಂಗ್ ಅವರಿಂದ ಪಕ್ಷದದಲ್ಲಿ ಸಂಘಟಕರು ಕಲಿಯಬೇಕಾದದ್ದು ಬಹಳಷ್ಟಿದೆ ಎಂದರು. ಮನುಷ್ಯನ ಬದುಕು ಯಾವ ರೀತಿಯಲ್ಲಿದೆ ಇದೆ ಎಂದು ನಾವು ಕೂತಲ್ಲೆ ಯೋಚನೆ ಮಾಡುವ ಸ್ಥಿತಿಯಲ್ಲಿದ್ದೇವೆ. ಪಕ್ಷದ ಸಚಿವರು, ಉತ್ತಮ ಗಾಯಕರು, ಒಂದಷ್ಟು ಗಣ್ಯರು ಕೋವಿಡ್‌ನಿಂದ ದೇವರ ಪಾದ ಸೇರಿದ್ದಾರೆ. ಇದರ ಮದ್ಯದಲ್ಲಿ ಕೇಂದ್ರ ಸಚಿವ ಹೃದಯಘಾತದಿಂದ ನಿಧನರಾಗಿದ್ದಾರೆ. ಜಸ್ವಂತ್ ಸಿಂಗ್ ಅವರಿಂದ ನಾಡಿಗೆ ಅನೇಕ ಕೊಡುಗೆ ಇದೆ. ರಾಷ್ಟ್ರದ ಪ್ರಮುಖ ಖಾತೆಗಳಾದ ರಕ್ಷಣಾ ಖಾತೆ, ವಿತ್ತಖಾತೆ, ವಿದೇಶಾಂಗ ಖಾತೆ ನಿರ್ವಹಿಸಿದ್ದ ಅವರು ದೇಶಕ್ಕಾಗಿ ಬದುಕಿದರು. ೫ ಬಾರಿ ರಾಜ್ಯ ಸಭಾ ಸದಸ್ಯರಾಗಿ, ೪ ಬಾರಿ ಲೋಕಸಭಾ ಸದಸ್ಯರಾಗಿ ತಮ್ಮದೇ ಆದ ಕೊಡುಗೆ ನೀಡಿದ್ದಾರೆ. ಇವತ್ತಿನ ಪೀಳಿಗೆಗೆ ನಮ್ಮೆಲ್ಲಾ ವಾಜಪೇಯಿ, ಅಡ್ವಾಣಿ, ಜಸ್ವಂತ್ ಸಿಂಗ್ ಸೇರಿದಂತೆ ಇನ್ನೂ ಅನೇಕರು ಇವತ್ತು ದಂತ ಕಥೆಯಾಗಿದೆ ಎಂದರು.

ಯುವಕರಿಗೆ ಸ್ಪೂರ್ತಿಯ ಚಿಲುಮೆ:
ತಾ.ಪಂ ಮಾಜಿ ಸದಸ್ಯ ಉದಯ ಕುಮಾರ್ ಬಿಳೆನೆಲೆ ಅವರು ಯುವ ಸಂಘ, ಹಳೆ ವಿದ್ಯಾರ್ಥಿ ಸಂಘ ಸೇರಿದಂತೆ ಹಲವಾರು ಸಂಘ ಸಂಸ್ಥೆಗಳಲ್ಲಿ ಸಕ್ರಿಯರಾಗಿ ಸದಾ ಚಟುವಟಿಕೆಯಲ್ಲಿ ತೊಡಗಿಕೊಂಡ ವ್ಯಕ್ತಿ. ಅವರು ಯುವಕರಿಗೆ ಸ್ಪೂರ್ತಿಯ ಚಿಲುಮೆ ಎಂದು ಶಾಸಕ ಸಂಜೀವ ಮಠಂದೂರು ಹೇಳಿದರು.

ಈಗಿನ ಆಡಳಿತ ವ್ಯವಸ್ಥೆಗೆ ದೀನ್ ದಯಾಳ್ ಅವರ ಕಲ್ಪಣೆ ಪ್ರಸ್ತುತ:
ಬಿಜೆಪಿ ದ.ಕ.ಜಿಲ್ಲಾ ವಿಭಾಗ ಸಹ ಪ್ರಭಾರಿ ಗೋಪಾಲಕೃಷ್ಣ ಹೇರಳೆ ಅವರು ಪಂಡಿತ್ ದೀನ್ ದಯಾಳ್ ಉಪಾಧ್ಯಾಯರ ಕುರಿತು ದಿಕ್ಸೂಚಿ ಭಾಷಣ ಮಾಡಿದರು. ಜಗತಿನ ವಿಶ್ವ ಕಲ್ಯಾಣ ಆಗಬೇಕೆಂಬುದು ದೀನ್ ದಯಾಳ್ ಅವರ ಚಿಂತನೆ. ಈಗಿನ ಆಡಳಿತ ವ್ಯವಸ್ಥೆ ಮತ್ತು ಕೋವಿಡ್ ಬಳಿಕ ಆತ್ಮನಿರ್ಭರ ಭಾರತ ಬಂದಿರುವುದು ದೀನ್ ದಯಾಳ್ ಉಪಾಧ್ಯಾಯರ ಕಲ್ಪಣೆಯ ಆಧಾರದಲ್ಲಿ. ಇದನ್ನು ಪ್ರಧಾನಿ ನರೇಂದ್ರ ಮೋದಿಯವರು ಇವತ್ತಿನ ಆಡಳಿತದಲ್ಲಿ ಪ್ರಸ್ತು ಪಡಿಸಿದ್ದಾರೆ ಎಂದು ಹೇಳಿದರು.

ದೀನ್‌ದಯಾಳ್ ಉಪಾಧ್ಯಾಯರ ಸಂದೇಶ ಭಗವದ್ಗೀತೆ ಇದ್ದಂತೆ:
ಬಿಜೆಪಿ ಮಂಡಲದ ಮಾಜಿ ಅಧ್ಯಕ್ಷ ನನ್ಯ ಅಚ್ಚುತ ಮೂಡೆತ್ತಾಯ ಅವರು ಮಾತನಾಡಿ ದೀನ್‌ದಯಾಳ್ ಅವರು ಅಪ್ಪಟ್ಟ ದೇಶಿ ವ್ಯಕ್ತಿ. ಅವರ ಏಕಾತ್ಮ ಮಾನವತ ವಾದ ಇಂದಿಗೂ ಪ್ರಸ್ತುತ. ಹಾಗಾಗಿ ಅವರ ಒಂದೊಂದು ಸಂದೇಶವೂ ಪಕ್ಷದಲ್ಲಿ ಭಗದ್ಗೀತೆಯಿದ್ದಂತೆ ಎಂದರು. ಇದೇ ಸಂದರ್ಭದಲ್ಲಿ ಪಂಡಿತ್ ದೀನ್ ದಯಾಳ್ ಅವರ ಭಾವ ಚಿತ್ರಕ್ಕೆ ಪುಷ್ಪಾರ್ಚನೆ ಸಮರ್ಪಣೆ ಮಾಡಲಾಯಿತು.

ಬಿಜೆಪಿ ಗ್ರಾಮಾಂತರ ಮಂಡಲದ ಅಧ್ಯಕ್ಷ ಸಾಜ ರಾಧಾಕೃಷ್ಣ ಆಳ್ವ ಸ್ವಾಗತಿಸಿ, ಪ್ರಧಾನ ಕಾರ್ಯದರ್ಶಿ ಪುರುಷೋತ್ತಮ ಮುಂಗ್ಲಿಮನೆ ವಂದಿಸಿದರು. ಬಿಜೆಪಿ ನಿಕಟಪೂರ್ವ ಅಧ್ಯಕ್ಷರಾದ ಚನಿಲ ತಿಮ್ಮಪ್ಪ ಶೆಟ್ಟಿ, ಅಪ್ಪಯ್ಯ ಮಣಿಯಾಣಿ, ಬಿಜೆಪಿ ನಗರ ಮಂಡಲದ ಅಧ್ಯಕ್ಷ ಪಿ.ಜಿ.ಜಗನ್ನಿವಾಸ ರಾವ್, ಪ್ರಧಾನ ಕಾರ್ಯದರ್ಶಿಗಳಾದ ನಿತೀಶ್ ಕುಮಾರ್ ಶಾಂತಿವನ, ಜಯಶ್ರೀ ಎಸ್ ಶೆಟ್ಟಿ, ಯುವರಾಜ್ ಪೆರಿಯತ್ತೋಡಿ, ಜಿ.ಪಂ ಅಧ್ಯಕ್ಷೆ ಮೀನಾಕ್ಷಿ ಶಾಂತಿಗೋಡು, ಜಿಲ್ಲಾ ಉಪಾಧ್ಯಕ್ಷ ಬೂಡಿಯಾರ್ ರಾಧಾಕೃಷ್ಣ ರೈ, ಕಾರ್ಯದರ್ಶಿ ಜಯಂತಿ ನಾಯಕ್, ತಾ.ಪಂ ಅಧ್ಯಕ್ಷ ರಾಧಾಕೃಷ್ಣ ಬೋರ್ಕರ್, ಸದಸ್ಯರಾದ ಭವಾನಿ ಚಿದಾನಂದ್, ಮೀನಾಕ್ಷಿ ಮಂಜುನಾಥ್, ಹರೀಶ್ ಬಿಜತ್ರೆ, ವನಜಾಕ್ಷಿ ಭಟ್, ನಗರಸಭಾ ಸದಸ್ಯೆ ಗೌರಿ ಬನ್ನೂರು, ಬಿಜೆಪಿ ಗ್ರಾಮಾಂತರ ಮಂಡಲದ ಉಪಾಧ್ಯಕ್ಷರಾದ ಹರಿಪ್ರಸಾದ್ ಯಾದವ್, ಉಷಾಚಂದ್ರ ಮುಳಿಯ, ಗ್ರಾಮಾಂತರ ಮಂಡಲದ ಶಂಕರ್ ಭಟ್, ರಾಜೇಸ್, ಸಂಕಪ್ಪ, ಜಯರಮ ಪೂಜಾರಿ, ಗಂಗಾಧರ್ ರೈ, ಪಿ.ಶ್ರೀಧರ ಗೌಡ, ನಾರಾಯಣ ರೈ, ಮಹೇಶ್ ರೈ ಕೇರಿ, ಬಿಜೆಪಿ ಕಚೇರಿ ಕಾರ್ಯದರ್ಶಿ ರುಕ್ಮಯ್ಯ ಇದ್ಪಾಡಿ ಸೇರಿದಂತೆ ಹಲವಾರು ಮಂದಿ ಉಪಸ್ಥಿತರಿದ್ದರು.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.