HomePage_Banner
HomePage_Banner
HomePage_Banner
HomePage_Banner
HomePage_Banner
HomePage_Banner

ಕುಯ್ಯಾರು-ಗಟ್ಟಮನೆ ರಸ್ತೆ ಕಾಂಕ್ರಿಟೀಕರಣಕ್ಕೆ ಗುದ್ದಲಿ ಪೂಜೆ

Puttur_Advt_NewsUnder_1
Puttur_Advt_NewsUnder_1
  • ಜನಪ್ರತಿನಿಧಿಗಳು ಗ್ರಾಮೀಣ ರಸ್ತೆಯನ್ನು ಕಡೆಗಣಿಸಬಾರದು: ಬೋಳೋಡಿ

ಪುತ್ತೂರು: ಕೆದಂಬಾಡಿ ಗ್ರಾಪಂನ ೧೫ ನೇ ಹಣಕಾಸು ಯೋಜನೆಯಡಿ ಕೆದಂಬಾಡಿ ಗ್ರಾಮದ ಕುಯ್ಯಾರು- ಗಟ್ಟಮನೆ ರಸ್ತೆಗೆ ಕಾಂಕ್ರಿಟೀಕರಣ ಕಾಮಗಾರಿಗೆ ಜಿಪಂ ಸದಸ್ಯೆ ಅನಿತಾ ಹೇಮನಾಥ ಶೆಟ್ಟಿ ಸೆ. ೨೬ ರಂದು ಗುದ್ದಲಿಪೂಜೆ ನೆರವೇರಿಸಿದರು.

ಗ್ರಾಪಂ ೨.೬೫ ಲಕ್ಷ ರೂ ಅನುದಾನದಲ್ಲಿ ಕಾಮಗಾರಿ ನಡೆಯಲಿದೆ. ಕಾರ್ಯಕ್ರಮದಲ್ಲಿ ಮಾತನಾಡಿದ ಕೆದಂಬಾಡಿ ಗ್ರಾಪಂ ಸದಸ್ಯ ಚಂದ್ರಹಾಸ ರೈ ಬೋಳೋಡಿ ಜನಪ್ರತಿನಿಧಿಗಳು ಗ್ರಾಮೀಣ ರಸ್ತೆಯನ್ನು ಕಡೆಗಣಿಸಬಾರದು. ಬಹುತೇಕ ಗ್ರಾಮೀಣ ರಸ್ತೆಗಳು ಅಭಿವೃದ್ದಿಯನ್ನು ಕಂಡಿಲ್ಲ. ಕೆದಂಬಾಡಿ ಗ್ರಾಮದಲ್ಲಿ ಇನ್ನೂ ಹಲವು ಒಳರಸ್ತೆಗಳು ಕಾಂಕ್ರೀಟೀಕರಣವಾಗಬೇಕಿದೆ. ಜನರಿಗೆ ಮೂಲಭೂತ ಸೌಕರ್ಯವನ್ನು ಒದಗಿಸುವಲ್ಲಿ ಗ್ರಾಪಂ, ತಾಪಂ, ಜಿಪಂ , ಶಾಸಕರು, ಸಂಸದರು ಅನುದಾನವನ್ನು ನೀಡುತ್ತಲೇ ಇರಬೇಕು ಇದರಿಂದ ಗ್ರಾಮಗಳ ಅಭಿವೃದ್ದಿ ಸಾಧ್ಯವಾಗುತ್ತದೆ ಎಂದು ಹೇಳಿದರು.

ಜಿಪಂ ಸದಸ್ಯೆ ಅನಿತಾ ಹೇಮನಾಥ ಶೆಟ್ಟಿ ಮಾತನಾಡಿ ಮುಂದಿನ ಅವಧಿಯಲ್ಲಿ ಇಲ್ಲಿನ ರಸ್ತೆಗೆ ಜಿಪಂನಿಂದ ಅನುದಾನ ಒದಗಿಸುವಲ್ಲಿ ಪ್ರಯತ್ನ ಮಾಡುವುದಾಗಿ ಭರವಸೆ ನೀಡಿದರು.

ಕಾರ್ಯಕ್ರಮದಲ್ಲಿ ಕೆದಂಬಾಡಿ ಕಾಂಗ್ರೆಸ್ ಗ್ರಾಮಸಮಿತಿ ಅಧ್ಯಕ್ಷ ಮನೋಹರ್ ರೈ ಎಂಡೆಸಾಗು, ಅಬ್ದುಲ್ಲ ಗಟ್ಟಮನೆ, ಪುರಂದರ್ ರೈ ಕೋರಿಕ್ಕಾರ್, ಅಬ್ದುಲ್ ಹಮೀದ್ ಫ್ಯಾಮಿಲಿ ಮಾಡಾವು, ಹಬೀಬ್ ಕಣ್ಣೂರು, ಅಸ್ಮಾ ಇಬ್ರಾಹಿಂ ಕುಯ್ಯಾರು, ಇಬ್ರಾಹಿಂ ಕುಯ್ಯಾರು,ಪುಷ್ಪಾವತಿ, ನೀಲಮ್ಮ, ಸುಜಾತಾ , ಗುತ್ತಿಗೆದಾರ ಲೋಕೇಶ್ ರೈ ಅಮೈ ಉಪಸ್ಥಿತರಿದ್ದರು.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.