HomePage_Banner
HomePage_Banner
HomePage_Banner
HomePage_Banner
HomePage_Banner
HomePage_Banner

ಪತ್ರಿಕೋದ್ಯಮ ವಿದ್ಯಾರ್ಥಿಗಳ ಸ್ನೇಹ-ಸಂಗಮ ಉದ್ಘಾಟನೆ | ಉಪನ್ಯಾಸಕ ವೃತ್ತಿಯಿಂದ ಸ್ವಯಂ ನಿವೃತ್ತಿ ಪಡೆದ ರಾಕೇಶ್ ಕಮ್ಮಾಜೆಗೆ ಸನ್ಮಾನ

Puttur_Advt_NewsUnder_1
Puttur_Advt_NewsUnder_1

ಪುತ್ತೂರು: ಗೆಲ್ಲಬೇಕು ಎಂದು ಹೊರಟ ಮೇಲೆ ಯಾವುದೇ ಕಾರಣಗಳು ಮುಂದೆ ಬರುವುದಿಲ್ಲ. ಹೀಗೆ ಗೆಲ್ಲಬೇಕೆಂದು ಒಂದು ವ್ಯವಸ್ಥೆ ಹೊರಟಾಗ ಅದರ ತಂಡ ಮುಖ್ಯವಾಗುತ್ತದೆ. ತಂಡದವರ ಮನಸ್ಸನ್ನು ಕಟ್ಟುವ ಕಾರ್ಯ ಮಹತ್ವವನ್ನು ಪಡೆಯುತ್ತದೆ. ತಂಡವನ್ನು ಕಟ್ಟುವ ಕಾಯಕದಲ್ಲಿ ಯಶಸ್ವಿಯಾದರೆ, ಆ ವ್ಯವಸ್ಥೆಯ ಯಶಸ್ಸನ್ನು ತಡೆಯಲು ಸಾಧ್ಯವಿಲ್ಲ ಎಂದು ಪುತ್ತೂರಿನ ವಿವೇಕಾನಂದ ಕಾಲೇಜಿನ ಪತ್ರಿಕೋದ್ಯಮ ವಿಭಾಗದ ನಿವೃತ್ತ ಮುಖ್ಯಸ್ಥ ರಾಕೇಶ್ ಕುಮಾರ್ ಕಮ್ಮಜೆ ಹೇಳಿದರು.

ಅವರು ತೆಂಕಿಲದ ಚಂಚಶ್ರೀ ಸಭಾಭವನದಲ್ಲಿ ನಡೆದ, ಕಾಲೇಜಿನ ಪತ್ರಿಕೋದ್ಯಮ ವಿಭಾಗದ ಹಿರಿಯ ವಿದ್ಯಾರ್ಥಿಗಳು ಆಯೋಜಿಸಿದ “ಸ್ನೇಹ ಸಂಗಮ – ಪತ್ರಿಕೋದ್ಯಮ ವಿದ್ಯಾರ್ಥಿಗಳ ಪ್ರೀತಿಯ ಬೆಸುಗೆ” ಕಾರ್ಯಕ್ರಮದಲ್ಲಿ ಭಾಗವಹಿಸಿ ಶನಿವಾರ ಮಾತನಾಡಿದರು.

ಒಂದು ವಿಭಾಗ ಬೆಳೆದಾಗ ಅದರ ಮುಖ್ಯಸ್ಥ ಗುರುತಿಸಿಕೊಳ್ಳೋದು ಸಹಜ. ಆದರೆ ವಿಭಾಗದ ಉಪನ್ಯಾಸಕರ ಮತ್ತು ಅಲ್ಲಿನ ವಿದ್ಯಾರ್ಥಿಗಳ ಶ್ರಮವನ್ನು ಮರೆಯುವ ಹಾಗಿಲ್ಲ. ನಮ್ಮ ಪತ್ರಿಕೋದ್ಯಮ ವಿಭಾಗ ಬೆಳೆಯಲು ಅನೇಕ ಪ್ರಾಚಾರ್ಯರುಗಳು, ಆಡಳಿತ ಮಂಡಳಿ, ವಿವಿಧ ವಿಭಾಗಗಳ ಮುಖ್ಯಸ್ಥರು ಮತ್ತು ಉಪನ್ಯಾಸಕರು, ವಿದ್ಯಾರ್ಥಿಗಳು ಮತ್ತವರ ಹೆತ್ತವರು, ಪತ್ರಕರ್ತರು, ಸಂಪನ್ಮೂಲ ವ್ಯಕ್ತಿಗಳು ಸಹಕಾರಿಯಾಗಿದ್ದಾರೆ. ಅವರೆಲ್ಲರೂ ಆಸರೆಯಾಗಿ ನಿಂತ ಪರಿಣಾಮ ವಿಭಾಗ ಬೆಳೆಯಿತು ಎಂದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ವಿವೇಕಾನಂದ ಪದವಿ ಕಾಲೇಜಿನ ನಿವೃತ್ತ ಸಂಚಾಲಕ ಎಂ. ಟಿ. ಜಯರಾಮ್ ಭಟ್ ಪತ್ರಿಕೋದ್ಯಮ ವಿಭಾಗಕ್ಕೆ ಮತ್ತು ಸ್ವಯಂ ನಿವೃತಿಯನ್ನು ಪಡೆದ ರಾಕೇಶ ಕುಮಾರ್ ಕಮ್ಮಜೆ ಅವರ ಮುಂದಿನ ಜೀವನಕ್ಕೆ ಶುಭ ಹಾರೈಸಿದರು.

 

ಕಾರ್ಯಕ್ರಮದಲ್ಲಿ ಕಾಲೇಜಿನ ಪತ್ರಿಕೋದ್ಯಮ ವಿಭಾಗದ ಮುಖ್ಯಸ್ಥರಾಗಿ ಇತ್ತೀಚಿಗೆ ಸ್ವಯಂ ನಿವೃತ್ತರಾದ ರಾಕೇಶ್ ಕುಮಾರ್ ಕಮ್ಮಜೆಯವರನ್ನು ಮತ್ತು ಪತ್ರಿಕೋದ್ಯಮ ವಿಭಾಗ ಬೆಳವಣಿಗೆಗೆ ಕಾರಣೀಭೂತರಾದ ಅನೇಕರನ್ನು ಗೌರವಿಸಲಾಯಿತು.

ಕಾರ್ಯಕ್ರಮದಲ್ಲಿ ಅನೇಕ ಉಪನ್ಯಾಸಕರು ಮತ್ತು ವಿದ್ಯಾರ್ಥಿಗಳು ತಮ್ಮ ಅನಿಸಿಕೆಯನ್ನು ಹಂಚಿಕೊಂಡರು. ಕಾರ್ಯಕ್ರಮದಲ್ಲಿ ಕಾಲೇಜಿನ ಪತ್ರಿಕೋದ್ಯಮ ವಿಭಾಗದಲ್ಲಿ ಕಲಿತು ಪ್ರಸ್ತುತ ಉನ್ನತ ಹುದ್ದೆಗಳಲ್ಲಿರುವ ಅನೇಕ ಹಿರಿಯ ವಿದ್ಯಾರ್ಥಿಗಳು ಮತ್ತು ಪ್ರಸ್ತುತ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳು ಪ್ರತ್ಯಕ್ಷವಾಗಿ ಮತ್ತು ವರ್ಚ್ಯುವಲ್ ಮೀಟ್ ನ ಮೂಲಕವೂ ಭಾಗವಹಿಸಿದರು. ಕಾರ್ಯಕ್ರಮದ ಲೈವ್ ವ್ಯವಸ್ಥೆಯನ್ನೂ ಸುದ್ದಿ ವಾಹಿನಿಯ ಯುಟ್ಯೂಬ್ ವಾಹಿನಿಯ ಮೂಲಕ ಮಾಡಲಾಗಿತ್ತು‌.

ಕಾರ್ಯಕ್ರಮದಲ್ಲಿ ಕಾಲೇಜಿನ ಕನ್ನಡ ವಿಭಾಗದ ಮುಖ್ಯಸ್ಥ ಡಾ.ಶ್ರೀಧರ್ ಹೆಚ್‌.ಜಿ, ಹಿರಿಯ ಪತ್ರಕರ್ತ ಮಹೇಶ್ ಪುಚ್ಚಪ್ಪಾಡಿ, ಉಪನ್ಯಾಕರಾದ ಗಣೇಶ್ ಪ್ರಸಾದ್, ಭವ್ಯಾ ಪಿ‌.ಆರ್ ನಿಡ್ಪಳ್ಳಿ, ಅನನ್ಯ ರಾಕೇಶ್ ,ಆದರ್ಶ.ವಿ,ಸುಶ್ಮಿತಾ ಜಯಾನಂದ್, ಪ್ರಜ್ಞಾ ಬಾರ್ಯ, ಪ್ರಶಾಂತ್, ಸಂತೋಷ್ ಮತ್ತಿತರರು ಉಪಸ್ಥಿತರಿದ್ದರು.

ಕಾರ್ಯಕ್ರಮವನ್ನು ಸುದ್ದಿ ನ್ಯೂಸ್ ಪುತ್ತೂರು ಯುಟ್ಯೂಬ್ ಚಾನೆಲ್ ನಲ್ಲಿ ನೇರ ಪ್ರಸಾರ ಮಾಡಲಾಗಿತ್ತು..

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.