HomePage_Banner
HomePage_Banner
HomePage_Banner
HomePage_Banner
HomePage_Banner
HomePage_Banner

ಕಟ್ಟತ್ತಾರು ಮಸೀದಿಯಲ್ಲಿ ಬೇಕಲ್ ಉಸ್ತಾದ್, ಕಮ್ಮಾಡಿ ಹಾಜಿ ಅನುಸ್ಮರಣೆ

Puttur_Advt_NewsUnder_1
Puttur_Advt_NewsUnder_1

ಪುತ್ತೂರು: ಇತ್ತೀಚೆಗೆ ನಿಧನರಾದ ವಿದ್ವಾಂಸ, ಕರ್ಮಶಾಸ್ತ್ರ ಪಂಡಿತ ಬೇಕಲ ಇಬ್ರಾಹಿಂ ಮುಸ್ಲಿಯಾರ್ ಹಾಗೂ ಪುತ್ತೂರು ತಾಲೂಕು ಸಂಯುಕ್ತ ಜಮಾಅತ್ ಅಧ್ಯಕ್ಷರಾಗಿದ್ದ ಹಾಜಿ ಎಸ್ ಇಬ್ರಾಹಿಂ ಕಮ್ಮಾಡಿಯವರಿಗೆ ಅನುಸ್ಮರಣೆ ಹಾಗೂ ತಹ್ಲೀಲ್ ಸಮರ್ಪಣೆ  ಕಟ್ಟತ್ತಾರು ಬದ್ರಿಯಾ ಜುಮಾ ಮಸೀದಿಯಲ್ಲಿ ನಡೆಯಿತು. ದುವಾ ನೆರವೇರಿಸಿದ ಕಟ್ಟತ್ತಾರು ಮಸೀದಿ ಖತೀಬ್ ದಾವೂದ್ ಸಹದಿ ಮಾತನಾಡಿ ಸಮುದಾಯಕ್ಕೆ ಉತ್ತಮ ನಾಯಕತ್ವ ಹಾಗೂ ಮಾರ್ಗದರ್ಶನ ನೀಡುತಿದ್ದ ಬೇಕಲ್ ಉಸ್ತಾದರ ವಿಯೋಗ ಮುಸ್ಲಿಂ ಸಮುದಾಯವನ್ನು ಅನಾಥರನ್ನಾಗಿಸಿದೆ, ಬೇಕಲ್ ಉಸ್ತಾದ್‌ರವರು ಅಪಾರ ಪಾಂಡಿತ್ಯವನ್ನು ಹೊಂದಿದ್ದರು, ಅವರ ಅಗಲಿಕೆ ತುಂಬಲಾರದ ನಷ್ಟ ಎಂದು ಹೇಳಿದರು. ಕಮ್ಮಾಡಿ ಇಬ್ರಾಹಿಂ ಹಾಜಿಯವರು ಈ ಊರಿನ ಹಳೆ ಮಸೀದಿಯ ಪ್ರಾರಂಭ ಕಾಲದಿಂದಲೇ ಉತ್ತಮ ಭಾಂದವ್ಯ ಹೊಂದಿದ್ದರು ಹಳೆ ಮಸೀದಿಯ ನಿರ್ಮಾಣಕ್ಕೂ ಅವರು ಸಹಕರಿಸಿದ್ದರು ಮತ್ತು ನೂತನವಾಗಿ ನಿರ್ಮಾಣವಾದ ಈ ಮಸೀದಿಗೆ ಕಾರ್ಪೆಟ್‌ನ್ನು ನೀಡಿ ಸಹಕರಿಸಿದ್ದರು ಎಂದರು. ಕಟ್ಟತ್ತಾರು ನುಸ್ರತುಲ್ ಇಸ್ಲಾಂ ಜಮಾಅತ್ ಕಮಿಟಿ ಪದಾಧಿಕಾರಿಗಳು, ಜಮಾಅತರು ಉಪಸ್ಥಿತರಿದ್ದರು.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.