HomePage_Banner
HomePage_Banner
HomePage_Banner
HomePage_Banner
HomePage_Banner
HomePage_Banner

ಕಾಣಿಯೂರು:ಗುದ್ದಲಿ ಪೂಜೆ ನಡೆದು ಬರೋಬ್ಬರಿ ಒಂದು ವರ್ಷ| ಇನ್ನೂ ಪ್ರಾರಂಭವಾಗಿಲ್ಲ ರಸ್ತೆ ಕಾಮಗಾರಿ

Puttur_Advt_NewsUnder_1
Puttur_Advt_NewsUnder_1
  • ಮಳೆಗಾಲದಲ್ಲಿ ಕೆಸರು ನೀರಿನ ಅಭಿಷೇಕ…  ಬೇಸಗೆಯಲ್ಲಿ ಧೂಳಿನ ಕಿರಿಕಿರಿ…
  • ಗ್ರಾಮೀಣ ಪ್ರದೇಶದ ರಸ್ತೆಗೆ ಕಾಯಕಲ್ಪ ಒದಗಲಿ – ಸ್ಥಳೀಯರ ಆಗ್ರಹ.

-ಸುಧಾಕರ ಆಚಾರ್ಯ ಕಾಣಿಯೂರು


ಕಾಣಿಯೂರು: ಕಾಣಿಯೂರು ಮಠದ ಜಂಕ್ಷನ್‌ನಿಂದ ಶ್ರೀ ಲಕ್ಷ್ಮೀನರಸಿಂಹ ಭಜನಾ ಮಂದಿರದ ಮೂಲಕ ಹಾದು ಹೋಗುವ ಪ್ರಗತಿ ವಿದ್ಯಾಸಂಸ್ಥೆಯವರೆಗೆ ರಸ್ತೆಯನ್ನು ಕಾಂಕ್ರೀಟಿಕರಣಗೊಳಿಸಲು ಗುದ್ದಲಿ ಪೂಜೆ ನಡೆದು ಬರೋಬ್ಬರಿ ಒಂದು ವರ್ಷವಾದರೂ ಇದುವರೆಗೂ ಕಾಮಗಾರಿ ಪ್ರಾರಂಭಿಸಿಲ್ಲ. ಈ ರಸ್ತೆಯು ಸಂಪೂರ್ಣ ಹದಗೆಟ್ಟಿದ್ದು, ವಾಹನ ಸಂಚಾರ ಬಿಡಿ, ಪಾದಚಾರಿಗಳು ನಡೆದುಕೊಂಡು ಹೋಗಲು ಸಾಧ್ಯವಾಗದ ಪರಿಸ್ಥಿತಿ ಇಲ್ಲಿ ನಿರ್ಮಾಣವಾಗಿದೆ. ಈ ಸಂಪರ್ಕ ರಸ್ತೆಯುದ್ದಕ್ಕೂ ಹೊಂಡ ಗುಂಡಿಗಳಿರುವುದರಿಂದ ವಾಹನಗಳು ಪಡಬಾರದ ಪಾಡು ಪಡುತ್ತಿವೆ. ಮಳೆಗಾಲದಲ್ಲಿ ಕೆಸರು ನೀರಿನ ಅಭಿಷೇಕ ಮಾಡಿಕೊಂಡು ಸಂಚರಿಸುತ್ತಿರುವ ಸಾರ್ವಜನಿಕರಿಗೆ ಬೇಸಗೆಯಲ್ಲಿ ಧೂಳಿನ ಕಿರಿಕಿರಿ ಉಂಟಾಗಿದೆ.

ಒಂದು ವರ್ಷವಾದರೂ ಇನ್ನೂ ನಡೆದಿಲ್ಲ ಕಾಮಗಾರಿ..:
ಕಾಣಿಯೂರು – ನೀರಜರಿ- ಅಬೀರ ರಸ್ತೆಗೆ ಕಾಂಕ್ರಿಟೀಕರಣ ಕಾಮಗಾರಿಗೆಂದು ಕಳೆದ ಅಕ್ಟೋಬರ್ ತಿಂಗಳಲ್ಲಿ ಕಾಣಿಯೂರಿನ ಶ್ರೀ ಲಕ್ಷ್ಮೀನರಸಿಂಹ ಭಜನಾ ಮಂದಿರದ ಸಮೀಪದಲ್ಲಿಯೇ ಸುಳ್ಯ ಶಾಸಕ ಎಸ್ ಅಂಗಾರ ಅವರು ಗುದ್ದಲಿ ಪೂಜೆ ನೆರವೇರಿಸಿದ್ದರು. ಕಾಣಿಯೂರು ಕೂಡುರಸ್ತೆಯಿಂದ ಪ್ರಗತಿ ವಿದ್ಯಾಸಂಸ್ಥೆಯವರೆಗೆ ಸುಮಾರು ೭೦೦ಮೀಟರ್ ರಸ್ತೆಯನ್ನು ಸಂಪೂರ್ಣ ಕಾಂಕ್ರಿಟೀಕರಣಕ್ಕೆ ಈಗಾಗಲೇ ಅನುದಾನ ಬಿಡುಗಡೆಯಾಗಿದ್ದು, ಮುಂದಿನ ಹಂತವಾಗಿ ಪ್ರಗತಿ ವಿದ್ಯಾಸಂಸ್ಥೆಯಿಂದ ನೀರಜರಿ- ಅಬೀರ ರಸ್ತೆಗೆ ರೂ ಒಂದು ಕೋಟಿ ಅನುದಾನಕ್ಕೆ ಈಗಾಗಲೇ ಪ್ರಸ್ತಾವನೆ ಕಳುಹಿಸಲಾಗಿದೆ. ಅನುದಾನ ಬಿಡುಗಡೆಗೊಂಡ ತಕ್ಷಣ ಅಬೀರ- ನೀರಜರಿ- ಅಮೈ ಸಂಪರ್ಕ ರಸ್ತೆಯ ಕಾಮಗಾರಿಯನ್ನು ಮಾಡಲಾಗುತ್ತದೆ ಎಂಬ ಭರವಸೆಯನ್ನು ಕೂಡ ಆ ಸಂದರ್ಭದಲ್ಲಿ ಹೇಳಿದ್ದರು. ಆದರೆ ಗುದ್ದಲಿ ಪೂಜೆ ನಡೆದು ಒಂದು ವರುಷವಾದರೂ ಕಾಮಗಾರಿ ಪ್ರಾರಂಭವಾಗಲೇ ಇಲ್ಲ.. ಈ ವಿಚಾರವಾಗಿ ಸಾರ್ವಜನಿಕರು ಬೇಸತ್ತು ಕಾಮಗಾರಿ ಶೀಘ್ರವಾಗಿ ನಡೆಸಲು ಆಗ್ರಹಿಸುತ್ತಿದ್ದಾರೆ. ಈ ರಸ್ತೆಯು ಕಾಣಿಯೂರು – ನೀರಜರಿ- ಅಬೀರ ಸಂಪರ್ಕ ರಸ್ತೆ ಮಾತ್ರವಲ್ಲದೇ, ಇತಿಹಾಸ ಪ್ರಸಿದ್ಧ ಶ್ರೀ ಕಾಣಿಯೂರು ಮಠ, ಕಾಣಿಯೂರು- ಮಾದೋಡಿ – ಬೆಳ್ಳಾರೆಗೆ ಸಂಪರ್ಕ ರಸ್ತೆ, ಕಾಣಿಯೂರು ಶ್ರೀ ಲಕ್ಷ್ಮೀನರಸಿಂಹ ಭಜನಾ ಮಂದಿರ, ಕಾಣಿಯೂರು ಪ್ರಗತಿ ವಿದ್ಯಾಸಂಸ್ಥೆ ಹಾಗೂ ಕಾಣಿಯೂರು- ಪೆರ್ಲೋಡಿಗೆ ಸಂಪರ್ಕ ರಸ್ತೆಯೂ ಇದಾಗಿದೆ.

ಈಗಾಗಲೇ ಈ ರಸ್ತೆ ಕಾಮಗಾರಿಗೆ ಟೆಂಡರ್ ಪ್ರಕ್ರಿಯೆ ಅಂತಿಮಗೊಂಡಿದೆ. ಗುದ್ದಲಿ ಪೂಜೆ ನಡೆದಿದೆ. ಆದರೆ ಕಾರಣಾಂತರಗಳಿಂದ ಕಾಮಗಾರಿ ಮುಂದುವರಿದಿಲ್ಲ. ಶೀಘ್ರದಲ್ಲಿ ಕಾಮಗಾರಿ ಪ್ರಾರಂಭಿಸಲಾಗುವುದು. -ಎಸ್.ಅಂಗಾರ ಶಾಸಕರು, ಸುಳ್ಯ

 

ಸುಮಾರು ಒಂದು ವರ್ಷದ ಹಿಂದೆ ಕಾಣಿಯೂರು ಮಠದ ಜಂಕ್ಷನ್‌ನಿಂದ ಭಜನಾ ಮಂದಿರದ ಮೂಲಕ ಪ್ರಗತಿ ಶಾಲೆಯ ಎದುರು ವರೆಗಿನ ರಸ್ತೆಯನ್ನು ಕಾಂಕ್ರೀಟಿಕರಣಗೊಳಿಸಲು ಸುಳ್ಯ ಶಾಸಕ ಎಸ್ ಅಂಗಾರ ಅವರು ಗುದ್ದಲಿ ಪೂಜೆ ಮಾಡಿದ್ದರು. ಇದುವರೆಗೂ ಕಾಮಗಾರಿಯನ್ನು ಪ್ರಾರಂಭಿಸಿಲ್ಲ. ಒಂದು ಕಿಲೋ ಮೀಟರ್ ಗಿಂತ ಕಡಿಮೆ ದೂರವಿರುವ ಈ ರಸ್ತೆ ಹತ್ತು- ಹನ್ನೆರಡು ವರ್ಷಗಳಿಂದ ಇದೇ ಸ್ಥಿತಿಯಲ್ಲಿದೆ. ಇದು ರಾಜ್ಯ ಹೆದ್ದಾರಿ (ಎಸ್.ಎಚ್- 100) ಗೆ ಸಮಾನಾಂತರವಾಗಿ ಇಪ್ಪತ್ತರಿಂದ ಐವತ್ತು ಮೀಟರ್ ದೂರದಲ್ಲಿದ್ದು, ಕಾಣಿಯೂರು ಪಂಚಾಯತ್ ಆಫೀಸ್‌ನಿಂದ ಕೂಗಳತೆ ದೂರದಲ್ಲಿದೆ. ಭಜನಾ ಮಂದಿರದಲ್ಲಿ ಮತ್ತು ಪ್ರಗತಿ ಶಾಲೆಯಲ್ಲಿ ನಡೆಯುವ ಸಭೆ ಸಮಾರಂಭಗಳಿಗೆ ಅನೇಕ ಅಧಿಕಾರಿಗಳು, ಜನಪ್ರತಿನಿಧಿಗಳು ಆಗಾಗ ಇದೇ ರಸ್ತೆಯ ಮೂಲಕ ಬಂದು ಹೋಗುತ್ತಿದ್ದರೂ ಈ ರಸ್ತೆಯ ಪರಿಸ್ಥಿತಿ ಯಾರ ಗಮನಕ್ಕೂ ಬಾರದೇ ಇನ್ನೂ ಹಾಗೆಯೇ ಉಳಿದಿರುವುದು ಶೋಚನೀಯ. ಎಂ.ಎನ್.ಗೌಡ, ಮಾಜಿ ಉಪ ನಿವಾಸಿ ಆಯುಕ್ತ ಕರ್ನಾಟಕ ಸರಕಾರ ಮತ್ತು ನಿವೃತ್ತ ಉಪ ಕಾರ್ಯದರ್ಶಿ ಭಾರತ ಸರಕಾರ

ಈ ರಸ್ತೆ ಕಾಮಗಾರಿಗೆ ಗುದ್ದಲಿ ಪೂಜೆ ನಡೆದು ಒಂದು ವರ್ಷವಾದರೂ ಕಾಮಗಾರಿ ನಡೆಯದೇ ಇರುವುದು ತುಂಬಾ ಬೇಸರದ ವಿಚಾರ. ಈ ರಸ್ತೆ ಎರಡು ಮೂರು ಗ್ರಾಮಗಳಿಗೆ ಸಂಬಂಧಪಟ್ಟ ರಸ್ತೆಯಾಗಿದ್ದು, ಜನರು ಮೂಲಭೂತ ಸೌಕರ್ಯವನ್ನು ಪಡೆಯಲು ಇದೇ ರಸ್ತೆಯಾಗಿರುತ್ತದೆ. ನಾವು ಈ ಬಗ್ಗೆ ರಸ್ತೆ ಗುತ್ತಿಗೆದಾರರಲ್ಲಿ ವಿಚಾರಿಸಿದಾಗ ಟೆಂಡರ್ ಆಗಲಿಲ್ಲ, ಅದಕ್ಕೆ ಅನುದಾನವೇ ಬರಲಿಲ್ಲ, ವರ್ಕ್ ಆಡರ್ ಸಿಗಲಿಲ್ಲ ಎಂಬುದಾಗಿ ದೂರವಾಣಿ ಮುಖಾಂತರ ಅವರನ್ನು ಸಂಪರ್ಕಿಸಿದಾಗ ಇದನ್ನೇ ಉತ್ತರ ನೀಡಿರುತ್ತಾರೆ. ಆದಕಾರಣ ಈ ರಸ್ತೆ ಕಾಮಗಾರಿಯನ್ನು ಶಾಸಕರು ಹೆಚ್ಚಿನ ಮುತುರ್ವಜಿ ವಹಿಸಿ ಆದಷ್ಟು ಶೀಘ್ರ ಕಾಮಗಾರಿ ಪೂರ್ಣಗೊಳಿಸುವಂತೆ ಆಗ್ರಹ ಪಡಿಸುತ್ತೇನೆ.– ದೇವಿಕಿರಣ್ ರೈ ಮಾದೋಡಿ ಸದಸ್ಯರು, ಆಡಳಿತ ಸಮಿತಿ ಪ್ರಗತಿ ವಿದ್ಯಾಸಂಸ್ಥೆ ಕಾಣಿಯೂರು.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.