HomePage_Banner
HomePage_Banner
HomePage_Banner
HomePage_Banner
HomePage_Banner
HomePage_Banner

ಪುತ್ತೂರು ತಾ| ರಬ್ಬರ್ ಬೆಳೆಗಾರರ ಮಾರಾಟ ಸಂಸ್ಕರಣ ಸಹಕಾರ ಸಂಘದ ಚುನಾವಣೆ- 13 ನಿರ್ದೇಶಕರ ಅವಿರೋಧ ಆಯ್ಕೆ

Puttur_Advt_NewsUnder_1
Puttur_Advt_NewsUnder_1

ನೆಲ್ಯಾಡಿ: ನೆಲ್ಯಾಡಿಯಲ್ಲಿ ಮುಖ್ಯ ಕಚೇರಿ ಹೊಂದಿರುವ ಪುತ್ತೂರು ತಾಲೂಕು ರಬ್ಬರ್ ಬೆಳೆಗಾರರ ಮಾರಾಟ ಮತ್ತು ಸಂಸ್ಕರಣ ಸಹಕಾರ ಸಂಘದ ಆಡಳಿತ ಮಂಡಳಿಗೆ ಮುಂದಿನ ೫ ವರ್ಷಗಳ ಅವಧಿಗೆ 13ನಿರ್ದೇಶಕರ ಅವಿರೋಧ ಆಯ್ಕೆ ನಡೆದಿದೆ. ಪರಿಶಿಷ್ಠ ಪಂಗಡಕ್ಕೆ ಮೀಸಲಾದ 1 ಸ್ಥಾನಕ್ಕೆ ಯಾವುದೇ ನಾಮಪತ್ರ ಸಲ್ಲಿಕೆಯಾಗದೆ ಇರುವುದರಿಂದ ಖಾಲಿಯಾಗಿದೆ.
ಸಾಮಾನ್ಯಕ್ಕೆ ನಿಗದಿಯಾಗಿರುವ 7 ಸ್ಥಾನಗಳಿಗೆ ಪ್ರಸಾದ್ ಕೌಶಲ್ ಶೆಟ್ಟಿ ಬಿ. ಕೊಂಬೆಟ್ಟು ಪುತ್ತೂರು, ಜಾರ್ಜ್‌ಕುಟ್ಟಿ ಸಿ ನಿಡ್ಯಡ್ಕ ಇಚ್ಲಂಪಾಡಿ, ಜಯರಾಮ, ಬಿ. ಬಾಣಜಾಲು, ರೋಯಿ ಅಬ್ರಹಾಂ ಪದವು ಕುಂತೂರು, ವ್ಯಾಸ ಎನ್.ವಿ. ನೆಕ್ಕರ್ಲ ಕೌಕ್ರಾಡಿ, ಶ್ರೀರಾಮ ಪಕ್ಕಳ ಕರ್ನೂರುಗುತ್ತು ನೆಟ್ಟಣಿಗೆ ಮುಡ್ನೂರು, ರಮೇಶ್ ಕಲ್ಪುರೆ 102 ನೆಕ್ಕಿಲಾಡಿ. ಸಂಘ ಸಂಸ್ಥೆಗಳ ಬಿ ವರ್ಗಕ್ಕೆ ಮೀಸಲಾದ ೧ ಸ್ಥಾನಕ್ಕೆ ಸುಭಾಸ್ ನಾಯಕ್ ನೆಕ್ರಾಜೆ ಮನೆ ಕೋಡಿಂಬಾಡಿ, ಹಿಂದುಳಿದ ಪ್ರವರ್ಗ ಎ ಮೀಸಲು ೧ ಸ್ಥಾನಕ್ಕೆ ಗಿರೀಶ್ ಸಾಲಿಯಾನ್ ಬದನೆ ಇಚ್ಲಂಪಾಡಿ, ಹಿಂದುಳಿದ ಪ್ರವರ್ಗ ಬಿ ಮೀಸಲು ೧ ಸ್ಥಾನಕ್ಕೆ ಸತ್ಯಾನಂದ ಬಿ., ಬೊಳ್ಳಾಜೆ ನೂಜಿಬಾಳ್ತಿಲ, ಮಹಿಳಾ ಮೀಸಲು ೨ ಸ್ಥಾನಕ್ಕೆ ಅರುಣಾಕ್ಷಿ ಅಕ್ಷಯ ನಿಲಯ ಪುಚ್ಚೇರಿ ನೆಲ್ಯಾಡಿ, ಗ್ರೇಸಿ ನೈನಾನ್ ಸ್ನೇಹ ಸದನ ನೆಲ್ಯಾಡಿ ಹಾಗೂ ಪರಿಶಿಷ್ಠ ಜಾತಿ ಮೀಸಲು ೧ ಸ್ಥಾನಕ್ಕೆ ಬೈರ ಮುಗೇರ ಕುದುರಡ್ಕ ಕೋಡಿಂಬಾಳ ಇವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಪರಿಶಿಷ್ಠ ಪಂಗಡಕ್ಕೆ ಮೀಸಲಾದ ೧ ಸ್ಥಾನಕ್ಕೆ ಯಾವುದೇ ನಾಮಪತ್ರ ಸಲ್ಲಿಕೆಯಾಗದೆ ಇರುವುದರಿಂದ ಖಾಲಿಯಾಗಿದೆ.
ಅ.೧ರಂದು ಚುನಾವಣೆ ನಡೆಯಬೇಕಾಗಿದ್ದ ಹಿನ್ನೆಲೆಯಲ್ಲಿ ಸೆ.22ರಿಂದ ನಾಮಪತ್ರ ಸಲ್ಲಿಕೆ ಪ್ರಕ್ರಿಯೆ ಆರಂಭಗೊಂಡಿದ್ದು ಸೆ.೨೬ ನಾಮಪತ್ರ ಸಲ್ಲಿಕೆಗೆ ಕೊನೆ ದಿನವಾಗಿತ್ತು. ಸೆ.೨೭ರಂದು ನಾಮಪತ್ರಗಳ ಪರಿಶೀಲನೆ ನಡೆದಿದ್ದು ಸೆ.೨೮ರಂದು ನಾಮಪತ್ರ ಹಿಂತೆಗೆತಕ್ಕೆ ಕೊನೆ ದಿನವಾಗಿತ್ತು. 13 ನಿರ್ದೇಶಕ ಸ್ಥಾನಗಳಿಗೆ ಆಯ್ಕೆ ಬಯಸಿ ನಾಮಪತ್ರ ಸಲ್ಲಿಸಿದ್ದ ಎಲ್ಲಾ ಅಭ್ಯರ್ಥಿಗಳು ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ನೂತನವಾಗಿ ಆಯ್ಕೆಯಾಗಿರುವ ಎಲ್ಲಾ ನಿರ್ದೇಶಕರುಗಳು ಕಳೆದ ಸಾಲಿನ ಆಡಳಿತ ಮಂಡಳಿಯಲ್ಲಿದ್ದ ನಿರ್ದೇಶಕರುಗಳೇ ಆಗಿದ್ದಾರೆ. ಸಹಕಾರ ಸಂಘಗಳ ಉಪನಿಬಂಧಕರ ಕಚೇರಿ ಮಂಗಳೂರು ಇಲ್ಲಿನ ಪ್ರಥಮ ದರ್ಜೆ ಸಹಾಯಕ ವಿಲಾಸ್‌ರವರು ಚುನಾವಣಾಧಿಕಾರಿಯಾಗಿದ್ದರು. ಆಯ್ಕೆಯಾಗಿರುವ 13 ನಿರ್ದೇಶಕರ ಪೈಕಿ 9 ಮಂದಿ ಕಾಂಗ್ರೆಸ್ ಹಾಗೂ ನಾಲ್ವರು ಬಿಜೆಪಿಯವರಾಗಿದ್ದಾರೆ.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.