HomePage_Banner
HomePage_Banner
HomePage_Banner
HomePage_Banner
HomePage_Banner
HomePage_Banner

ಕೋಡಿಂಬಾಳ: ಉರುಳುಗೆ ಸಿಲುಕಿದ ಕಡವೆ-ಅರಣ್ಯ ಇಲಾಖೆಯವರಿಂದ ರಕ್ಷಣೆ

Puttur_Advt_NewsUnder_1
Puttur_Advt_NewsUnder_1


ಕಡಬ: ಕೋಡಿಂಬಾಳ ಗ್ರಾಮದ ಪಾಜೋವು ಎಂಬಲ್ಲಿ ಕಡವೆಯ ಕಾಲು ಉರುಳುಗೆ ಸಿಲುಕಿ ನಡೆಯಲಾಗದ ಸ್ಥಿತಿಯಲ್ಲಿ ಕಂಡು ಬಂದ ಘಟನೆ ಸೆ.28ರಂದು ನಡೆದಿದೆ.

ಕಾಡು ಪ್ರಾಣಿಗಳನ್ನು ಬೇಟೆಯಾಡುವ ಸಲುವಾಗಿ ಯಾರೋ ಇಟ್ಟಿರುವ ಉರುಳಿಗೆ ಕಡವೆಯ ಎಡ ಕಾಲು ಸಿಲುಕಿ ಬಹು ದಿನಗಳ ಬಳಿಕ ಉರುಳು ಸಹಿತ ನಡೆಯಲಾಗದ ಸ್ಥಿತಿಯಲ್ಲಿ ಕಂಡು ಬಂದಿದೆ. ಸ್ಥಳೀಯರಾದ ಬೆಳ್ಯಪ್ಪ ಗೌಡ ಪಾಜೋವು ಎಂಬವರುಅರಣ್ಯಾಧಿಕಾರಿಗಳಿಗೆ ಖಚಿತ ಮಾಹಿತಿ ನೀಡಿದ್ದು, ಕೂಡಲೇ ಅರಣ್ಯಾಧಿಕಾರಿಗಳ ತಂಡ ಸ್ಥಳಕ್ಕೆ ಆಗಮಿಸಿ ಕಡವೆಯನ್ನು ರಕ್ಷಿಸಿದ್ದಾರೆ. ಅಲ್ಲದೆ ಕಡಬದ ಪಶುವೈದ್ಯಾಧಿಕಾರಿ ಡಾ.ಅಜಿತ್ ಅವರು ಸೂಕ್ತ ಚಿಕಿತ್ಸೆ ನೀಡಿದ್ದಾರೆ.

ಬಳಿಕ ಕಡವೆಯನ್ನು ಏನೆಕಲ್ಲಿನ ನರ್ಸರಿಗೆ ಕೊಂಡು ಹೋಗಿ ಆರೈಕೆ ಮಾಡಲಾಗುತ್ತಿದೆ. ಅರಣ್ಯಾಧಿಕಾರಿಗಳ ತಂಡದಲ್ಲಿ ಪಂಜ ವಲಯ ಅರಣ್ಯಾಧಿಕಾರಿ ಎನ್. ಮಂಜುನಾಥ್, ಅರಣ್ಯ ರಕ್ಷಕರಾದ ರವಿ ಚಂದ್ರ ಪಡುಬೆಟ್ಟು,ವಿಶ್ವನಾಥ್ , ಗೌರವ ವನ್ಯ ಜೀವಿ ಪರಿಪಾಲಕ ಭುವನೇಶ್ ಕೈಕಂಬ ಕೈ ಜೋಡಿಸಿದ್ದಾರೆ.

ಪಾಜೋವು ಅರಣ್ಯ ಭಾಗದಲ್ಲಿ ಹಲವು ಉರುಳುಗಳು
ಪಂಜ ಅರಣ್ಯ ವ್ಯಾಪ್ತಿಯ ಪಾಜೋವು ಅರಣ್ಯ ಭಾಗದಲ್ಲಿ ಕಾಡು ಪ್ರಾಣಿಗಳ ಬೇಟೆಗಾಗಿ ಹಲವು ಉರುಳುಗಳನ್ನು ಇಟ್ಟಿರುವ ಬಗ್ಗೆ ಶಂಕೆ ವ್ಯಕ್ತವಾಗಿದೆ.ಅರಣ್ಯ ಅಧಿಕಾರಿಗಳು ಸೂಕ್ತ ಮಾಹಿತಿ ಕಲೆ ಹಾಕಿ ಕಾಡು ಪ್ರಾಣಿಗಳನ್ನು ರಕ್ಷಿಸುವಂತೆ ಆಗ್ರಹ ವ್ಯಕ್ತವಾಗಿದೆ.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.