HomePage_Banner
HomePage_Banner
HomePage_Banner
HomePage_Banner
HomePage_Banner
HomePage_Banner

ವಿಶ್ವ ಹೃದಯ ದಿನ: ಹೃದಯ ಲಬ್ ಡಬ್ ಅಂತಿದೆ ಅಂದ್ರೆ ಜೀವಿ ಬದುಕಿದೆ ಎಂದರ್ಥ!

Puttur_Advt_NewsUnder_1
Puttur_Advt_NewsUnder_1

ಆರೋಗ್ಯವೇ ಭಾಗ್ಯ ಎಂಬ ಮಾತಿದೆ. ಹೃದಯ ಲಬ್ ಡಬ್ ಅಂತಿದೆ ಅಂದ್ರೆ ಮನುಷ್ಯ ಅಥವಾ ಜೀವ ಇರೋ ಯಾವುದೇ ಜೀವಿ ಆದರೂ ಬದುಕಿದೆ ಎಂದರ್ಥ. ಹೃದಯ ಎಂಬ ದೇಹದ ಭಾಗವು ಅಷ್ಟೊಂದು ಪ್ರಾಮುಖ್ಯತೆಯನ್ನು ಹೊಂದಿದೆ. ತಮ್ಮ ಹೃದಯದ ಆರೋಗ್ಯಕ್ಕೆ ಎಲ್ಲರೂ ಗಮನ ನೀಡುತ್ತಾರೆ. ಇಂದು ವಿಶ್ವ ಹೃದಯ ದಿನ. ಹೃದಯದ ಆರೋಗ್ಯದ ಕುರಿತು ಜನರಿಗೆ ತಿಳಿಸುವ ಸಲುವಾಗಿ ಈ ದಿನವನ್ನು ಆಚರಿಸಲಾಗುತ್ತದೆ. ಹೃದಯದ ಆರೋಗ್ಯದ ಕಡೆ ಜನರು ನಿಗಾ ವಹಿಸುವಂತೆ ಮಾಡಲು ವಿಶ್ವ ಹೃದಯ ಸಂಸ್ಥೆಯು 1999ರಿಂದ ಪ್ರತಿ ವರ್ಷ ಸೆಪ್ಟೆಂಬರ್ ನ ಕೊನೆಯ ಭಾನುವಾರವನ್ನು ವಿಶ್ವ ಹೃದಯ ದಿನವನ್ನಾಗಿ ಆಯೋಜನೆ ಮಾಡುತ್ತಿತ್ತು. ನಂತರ 2001ನೇ ಇಸವಿಯಿಂದ ವಿಶ್ವ ಹೃದಯ ದಿನವನ್ನು ಸೆಪ್ಟೆಂಬರ್ ತಿಂಗಳ ಕೊನೆಯ ಭಾನುವಾರದ ಬದಲಾಗಿ ಸೆಪ್ಟಂಬರ್ 29ನೇ ದಿನಾಂಕದಂದು ಆಚರಣೆ ಮಾಡಲು ನಿರ್ಧರಿಸಲಾಯಿತು.

ವಿಶ್ವ ಹೃದಯ ಸಂಸ್ಥೆಯು ಹೃದಯದ ಆರೋಗ್ಯದ ಬಗ್ಗೆ ಜನರಲ್ಲಿ ಜಾಗೃತಿಯನ್ನು ಮೂಡಿಸುವ ಪ್ರಯತ್ನ ಮಾಡುತ್ತದೆ. ಹೃದಯಕ್ಕೆ ಮಾರಕವಾದ ವಸ್ತುಗಳ ಬಗ್ಗೆ ಎಚ್ಚರಿಕೆಯನ್ನು ನೀಡುತ್ತದೆ. ಅವುಗಳ ಬಳಕೆಯನ್ನು ಕಡಿಮೆಗೊಳಿಸುವಂತೆ, ಹೃದಯದ ಆರೋಗ್ಯವನ್ನು ಕಾಪಾಡಿಕೊಳ್ಳುವಂತೆ ಮಾಹಿತಿಯನ್ನು ಪಸರಿಸುತ್ತದೆ. ಜೊತೆಗೆ ಹೃದಯದ ಆರೋಗ್ಯವನ್ನು ವೃದ್ಧಿಸುವ ಉತ್ತಮ ಹವ್ಯಾಸಗಳನ್ನು, ಆಹಾರ ಪದ್ಧತಿ ಸೇರಿದಂತೆ ಹಲವಾರು ವಿಚಾರಗಳನ್ನು ಜನರಿಗೆ ತಲುಪಿಸುತ್ತದೆ.
ಹೃದಯ ಸಂಸ್ಥೆಯು ಹೃದಯ ಖಾಯಿಲೆಗಳನ್ನು ತಡೆಗಟ್ಟಲು ಮೀಸಲಾಗಿರುವ ಸಂಸ್ಥೆಯಾಗಿದೆ. ಹೀಗಾಗಿ ಈ ಸಂಸ್ಥೆಯು ಸುಮಾರು 100 ದೇಶಗಳ ಹೃದಯ ಸಂಸ್ಥೆಗಳನ್ನು ನಿಯಂತ್ರಿಸುತ್ತದೆ. ಈ ಸಂಸ್ಥೆಯ ಮುಖ್ಯ ಉದ್ದೇಶ ಹೃದಯದ ಖಾಯಿಲೆಗಳಿಂದ ಸಂಭವಿಸುವ ಮರಣ ಪ್ರಮಾಣವನ್ನು ತಗ್ಗಿಸುವುದು. ಅದೇ ರೀತಿ ಹೃದಯ ಸಂಬಂಧಿ ರೋಗಗಳಿಂದ ಜನರಿಗೆ ಮುಕ್ತಿ ನೀಡುವುದಾಗಿದೆ. ವಿಶ್ವ ಹೃದಯ ದಿನದ ಅಭಿಯಾನದಲ್ಲಿ ಭಾಗವಹಿಸುವ ಮೂಲಕ ಜನರು ಹೃದಯಕ್ಕೆ ಸಂಬಂಧಿಸಿದ ರೋಗಗಳ ಬಗ್ಗೆ, ಪರಿಣಾಮ, ಮುಂಜಾಗ್ರತಾ ಕ್ರಮಗಳ ಬಗ್ಗೆ ಮಾಹಿತಿ ಪಡೆದುಕೊಳ್ಳುತ್ತಾರೆ. ಆರೋಗ್ಯಕರವಲ್ಲದ ಆಹಾರ ಕ್ರಮ, ಮದ್ಯಪಾನದ ಅತಿಯಾದ ಸೇವನೆ, ಮಾದಕ ವಸ್ತುಗಳ ಬಳಕೆ, ದೈಹಿಕ ಚಟುವಟಿಕೆಯ ಕೊರತೆ ಮುಂತಾದವುಗಳಿಂದ ಹೃದಯ ಸಂಬಂಧಿ ಖಾಯಿಲೆಗಳಿಗೆ ಒಳಗಾಗುವ ಸಾಧ್ಯತೆ ಹೆಚ್ಚಿರುತ್ತದೆ. ಇದರಿಂದಾಗಿ ಶೇಕಡಾ ೮೧ರಷ್ಟು ಜನರು ಅಕಾಲಿಕವಾಗಿ ಮರಣ ಹೊಂದುತ್ತಿದ್ದಾರೆ.

ಹೃದಯದ ಆರೋಗ್ಯವನ್ನು ಸಮತೋಲನದಲ್ಲಿಡಲು ಜಂಕ್ ಫುಡ್ ಬಳಕೆಗೆ ಕಡಿವಾಣ ಹಾಕಬೇಕು. ಕೊಬ್ಬಿನಾಂಶ ಹಾಗೂ ಕಬ್ಬಿಣಾಂಶ ಕಡಿಮೆ ಇರುವಂತಹ ಆಹಾರವನ್ನು ಸೇವನೆ ಮಾಡಬೇಕು. ಹೆಚ್ಚಾಗಿ ನೈಸರ್ಗಿಕ ಆಹಾರವನ್ನೇ ಬಳಸಬೇಕು. ತರಕಾರಿ, ಹಣ್ಣು ಹಂಪಲನ್ನು ಹೆಚ್ಚಾಗಿ ಸೇವಿಸಬೇಕು. ಮಾದಕ ವಸ್ತುಗಳಿಂದ ದೂರವಿರಬೇಕು. ಹಾಗೆಯೇ ಯೋಗ, ಪ್ರಾಣಾಯಾಮ, ಧ್ಯಾನ ಸೇರಿದಂತೆ ದೈಹಿಕ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಬೇಕು. ಜಗತ್ತಿನಲ್ಲಿ ಶೇಕಡಾ 30ರಷ್ಟು ಸಾವು ಸಂಭವಿಸುತ್ತಿರುವುದು ಹೃದಯ ಸಂಬಂಧಿ ಖಾಯಿಲೆಗಳಿಂದ ಎಂದು ವಿಶ್ವ ಆರೋಗ್ಯ ಸಂಸ್ಥೆಯು ತಿಳಿಸಿದೆ. ನಮ್ಮ ಹೃದಯದ ಆರೋಗ್ಯದತ್ತ ಗಮನ ಹರಿಸೋಣ. ಹೃದಯ ದಿನಾಚರಣೆಯ ಮಹತ್ವವನ್ನು ಹಲವರಿಗೆ ಹಂಚುವ ಮೂಲಕ ಈ ದಿನಾಚರಣೆ ಅರ್ಥಪೂರ್ಣವಾಗಿ ನಡೆಯುವಂತೆ ಮಾಡೋಣ. ನಮ್ಮ ಹೃದಯದ ಆರೋಗ್ಯವನ್ನು ನಾವೇ ಕಾಪಾಡಿಕೊಳ್ಳಬೇಕು.

– ಸೌಜನ್ಯ.ಬಿ.ಎಂ.ಕೆಯ್ಯೂರು.
ಪತ್ರಿಕೋದ್ಯಮ ವಿಭಾಗ.
ವಿವೇಕಾನಂದ ಪದವಿ ಕಾಲೇಜು ಪುತ್ತೂರು.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.