HomePage_Banner
HomePage_Banner
HomePage_Banner
HomePage_Banner
HomePage_Banner
HomePage_Banner

ಬೆದ್ರೋಡಿ: ಮಣ್ಣು ಹಾಕಿ ಚರಂಡಿ ಮುಚ್ಚಿರುವ ಆರೋಪ ಸುಳ್ಳು- ಯಾರಿಗೂ ತೊಂದರೆಯಾಗದಂತೆ ಮಣ್ಣು ಹಾಕಿ ಜಾಗ ಎತ್ತರಿಸಲಾಗಿದೆ; ಸ್ಪಷ್ಟನೆ

Puttur_Advt_NewsUnder_1
Puttur_Advt_NewsUnder_1


ನೆಲ್ಯಾಡಿ: ಅವೈಜ್ಞಾನಿಕವಾಗಿ ಮಣ್ಣು ಹಾಕಿರುವುದರಿಂದ ಚರಂಡಿ ಮುಚ್ಚಿ ಸಾರ್ವಜನಿಕ ರಸ್ತೆಯಲ್ಲಿಯೇ ನೀರು ಹರಿಯುತ್ತಿರುವುದರಿಂದ ಸಂಚಾರಕ್ಕೆ ತೊಂದರೆಯಾಗಿದೆ ಎಂದು ಬಜತ್ತೂರು ಗ್ರಾಮದ ರೆಂಜಾಳ ನಿವಾಸಿ ಪ್ರೇಮ ಎಂಬವರು ಮಾಡಿರುವ ಆರೋಪ ಸುಳ್ಳು, ನನ್ನ ಜಾಗಕ್ಕೆ ನನಗೆ ಸೂಕ್ತವಾದ ರೀತಿಯಲ್ಲಿ ಯಾರಿಗೂ ತೊಂದರೆಯಾಗದಂತೆ ಮಣ್ಣು ಹಾಕಿ ಎತ್ತರ ಮಾಡಿದ್ದೇನೆ ಎಂದು ಬೆದ್ರೋಡಿ ನಿವಾಸಿ ಅಬ್ಬಾಸ್‌ರವರು ಸ್ಪಷ್ಟಪಡಿಸಿದ್ದಾರೆ.

ಬಜತ್ತೂರು ಗ್ರಾಮದ ಬೆದ್ರೋಡಿ ವಿದ್ಯಾನಗರ ಎಂಬಲ್ಲಿ ಬೆದ್ರೋಡಿ-ರೆಂಜಾಳ ರಸ್ತೆಯ ಬಳಿ ಅಬ್ಬಾಸ್‌ರವರು ಅವೈಜ್ಞಾನಿಕವಾಗಿ ಮಣ್ಣು ಹಾಕಿ ಭೂಮಿಯನ್ನು ಎತ್ತರಿಸಿ ಮನೆ ನಿರ್ಮಿಸಿದ್ದಾರೆ. ಹಾಕಲಾದ ಮಣ್ಣು ಸವಕಳಿಯಾಗದಂತೆ ಯಾವುದೇ ಮುನ್ನೆಚ್ಚರಿಕೆ ವಹಿಸದ ಕಾರಣ ಮಳೆಗಾಲದಲ್ಲಿ ಮಣ್ಣೆಲ್ಲಾ ಕರಗಿ ರಸ್ತೆ ಬದಿಯ ಚರಂಡಿಗೆ ಬಂದು ಬಿದ್ದಿದೆ. ಈಗ ಚರಂಡಿಯಲ್ಲಿ ನೀರು ಸರಾಗವಾಗಿ ಹರಿದು ಹೋಗದೇ ರಸ್ತೆಯಲ್ಲಿಯೇ ಹರಿದು ಹೋಗುವಂತಾಗಿದೆ. ಇದರಿಂದಾಗಿ ರಸ್ತೆಯಲ್ಲಿ ನಡೆದು ಹೋಗಲೂ ಸಾಧ್ಯವಾಗದೆ ಸಮಸ್ಯೆಯಾಗಿದೆ ಎಂದು ಆರೋಪಿಸಿ ಬಜತ್ತೂರು ಗ್ರಾಮದ ರೆಂಜಾಳ ನಿವಾಸಿ ಪ್ರೇಮ ಎಂಬವರು ಬಜತ್ತೂರು ಗ್ರಾಮ ಪಂಚಾಯತ್‌ಗೆ ದೂರು ನೀಡಿದ್ದರು. ಈ ಬಗ್ಗೆ ಸೆ.24ರಂದು ಸುದ್ದಿ ವೆಬ್‌ಸೈಟ್‌ನಲ್ಲಿ ಪ್ರಕಟಗೊಂಡ ವರದಿಯ ಬಗ್ಗೆ ಪ್ರತಿಕ್ರಿಯೆ ನೀಡಿರುವ ಅಬ್ಬಾಸ್‌ರವರು, ನನ್ನ ಜಾಗಕ್ಕೆ ನನಗೆ ಸೂಕ್ತವಾದ ರೀತಿಯಲ್ಲಿ ಯಾರಿಗೂ ತೊಂದರೆಯಾಗದಂತೆ ಮಣ್ಣು ಹಾಕಿ ಎತ್ತರ ಮಾಡಿರುತ್ತೇವೆ. ಮಣ್ಣು ಹಾಕಿರುವ ಜಾಗವು ನಮ್ಮ ಕದೀಮಾ ವರ್ಗವಾಗಿದ್ದು ನನ್ನ ೧೪.೫ ಸೆಂಟ್ಸ್ ಜಾಗದಲ್ಲಿಯೇ ಇದೆಯೇ ಹೊರತು ಇನ್ನೊಬ್ಬರ ಜಾಗದಲ್ಲಿ ಇಲ್ಲ. ಇದರಿಂದ ಯಾರಿಗೂ ತೊಂದರೆ ಇರುವುದಿಲ್ಲ. ಸದ್ರಿ ಜಾಗದ ವಿವಾದವೂ ಪುತ್ತೂರು ನ್ಯಾಯಾಲಯದಲ್ಲಿ ವಿಚಾರಣೆಯ ಹಂತದಲ್ಲಿದ್ದು ಇಂಜೆಕ್ಷನ್ ಆರ್ಡರ್ ಸಹ ಆಗಿರುತ್ತದೆ. ಪ್ರೇಮರವರು ನೀಡಿರುವ ಫೋಟೋ ಹಾಗೂ ವಾಸ್ತವಿಕವಿರುವ ಸ್ಥಳಕ್ಕೆ ವ್ಯತ್ಯಾಸವಿದೆ. ಅವರು ತಿಳಿಸಿದ ರೀತಿಯಲ್ಲಿ ಅಲ್ಲಿ ಯಾವುದೇ ರಸ್ತೆ ಇಲ್ಲ. ಈ ಬಗ್ಗೆ ೨೦೧೩-೧೪ರಲ್ಲಿ ಗ್ರಾಮ ಪಂಚಾಯಿತಿಯಿಂದಲೇ ಮಾಹಿತಿ ನೀಡಲಾಗಿದೆ. ನಾವು ಮಣ್ಣು ಹಾಕಿರುವುದರಿಂದ ವಾಸ್ತವಿಕವಾಗಿ ಯಾರಿಗೂ ಯಾವ ರೀತಿಯಲ್ಲೂ ತೊಂದರೆ ಇರುವುದಿಲ್ಲ ಎಂದು ಅಬ್ಬಾಸ್‌ರವರು ಸ್ಪಷ್ಟಪಡಿಸಿದ್ದಾರೆ.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.