HomePage_Banner
HomePage_Banner
HomePage_Banner
HomePage_Banner
HomePage_Banner
HomePage_Banner

ಲಿಖಿತ ಪ್ರಶ್ನೆಗೆ ಲಿಖಿತ ಉತ್ತರ ಸಿಕ್ಕಾಗ ಸಮಸ್ಯೆ ಪರಿಹಾರ- ಪಾರ್ಲಿಮೆಂಟರಿ ರೀತಿಯ ಸಭೆ ನಡೆಸಲು ಶಾಸಕ ಸಂಜೀವ ಮಠಂದೂರು ಸೂಚನೆ

Puttur_Advt_NewsUnder_1
Puttur_Advt_NewsUnder_1
  • ತಾ.ಪಂ ಸಾಮಾನ್ಯ ಸಭೆ

ಪುತ್ತೂರು: ಸಭೆ ಸುಗಮವಾಗಿ ನಡೆಸಬೇಕು ಮತ್ತು ಪರಿಣಾಮಕಾರಿಯಾಗಿ ನಡೆಸಬೇಕು ಮತ್ತು ಸಭೆಯಲ್ಲಿ ಪರಿಣಾಮಕಾರಿ ಉತ್ತರ ಸಿಗಬೇಕಾದರೆ ಪಾರ್ಲಿಮೆಂಟರಿ ರೀತಿಯಲ್ಲಿ ಲಿಖಿತ ಪ್ರಶ್ನೋತ್ತರ ಸಭೆ ನಡೆಯಬೇಕು. ಆಗ ಎಲ್ಲಾ ಸಮಸ್ಯೆಗಳಿಗೂ ಪರಿಹಾರ ಸಿಗುತ್ತದೆ. ಹಾಗಾಗಿ ಮುಂದೆ ತಾ.ಪಂ ಸಭೆ ಪಾರ್ಲಿಮೆಂಟರಿ ರೀತಿಯಲ್ಲೇ ನಡೆಸಲು ಶಾಸಕ ಸಂಜೀವ ಮಠಂದೂರು ಅವರು ಸೂಚಿಸಿದ್ದಾರೆ.
 
ಸೆ.29ರಂದು ನಡೆದ ತಾ.ಪಂ ಸಾಮಾನ್ಯ ಸಭೆಗೆ ಆಗಮಿಸಿ ಸದಸ್ಯರ ಪ್ರಶ್ನೆಗಳು, ಇಲಾಖಾಧಿಕಾರಿಗಳ ಅಸಮರ್ಪಕ ಉತ್ತರದೊಂದಿಗೆ ಒಟ್ಟು ಸಮಸ್ಯೆಗಳಿಗೆ ಪರಿಹಾರ ಸಿಗದ ಹಿನ್ನೆಲೆಯಲ್ಲಿ ಅವರು ಮುಂದೆ ಪಾರ್ಲಿಮೆಂಟರಿ ರೀತಿಯಲ್ಲಿ ಸಭೆ ನಡೆಸಲು ತಾ.ಪಂ ಕಾರ್ಯನಿರ್ವಾಹಕ ಅಧಿಕಾರಿಗೆ ಸೂಚಿಸಿದರು. ತಾ.ಪಂ ಅಧ್ಯಕ್ಷ ರಾಧಾಕೃಷ್ಣ ಬೋರ್ಕರ್ ಅವರು ಸಭೆ ಅಧ್ಯಕ್ಷತೆ ವಹಿಸಿದ್ದರು. ಸದಸ್ಯರು ಸಭೆಯಲ್ಲಿ ಸಮಸ್ಯೆಯ ಕುರಿತು ಅಧಿಕಾರಿಗಳನ್ನು ಪ್ರಶ್ನಿಸುವುದು ಈ ಸಂದರ್ಭದ ಅಧಿಕಾರಿಗಳು ಉತ್ತರಕ್ಕೂ ತಯಾರಾಗಿರುವುದಿಲ್ಲ. ಮತ್ತೆ ಅದೇ ಪ್ರಶ್ನೆಗೆ ಸಂಬಂಧಿಸಿ ಮುಂದಿನ ಸಾಮಾನ್ಯ ಸಭೆಯಲ್ಲಿ ಪಾಲನ ವರದಿಯಲ್ಲಿ ಅಧಿಕಾರಿಗಳಿಗೆ ಉತ್ತರ ಕೊಡುವ ಕೆಲಸ ಆಗುತ್ತದೆ. ಪಾಲನ ವರದಿ ಮುಗಿಯುವಾಗ ಮಧ್ಯಾಹ್ನ ಆಗುತ್ತದೆ. ಮಧ್ಯಾಹ್ನದ ಬಳಿಕ ಇತರ ಚರ್ಚೆ ಆಗುತ್ತದೆ. ಹೀಗೆ ಸಮಯ ವ್ಯರ್ಥ ಮಾಡುವುದಕ್ಕಿಂತ ಸದಸ್ಯರು ತಾವು ಕೇಳಬೇಕಾದ ಪ್ರಶ್ನೆಗಳನ್ನು 15 ದಿನದ ಮುಂಚಿತವಾಗಿ ತಾ.ಪಂ ಅಧ್ಯಕ್ಷರು ಅಥವಾ ಕಾರ್ಯನಿರ್ವಾಹಕ ಅಧಿಕಾರಿಯ ಹೆಸರಿಗೆ ಲಿಖಿತವಾಗಿ ಕೊಟ್ಟರೆ. ಅವರು ಸಂಬಂಧಪಟ್ಟ ಇಲಾಖೆಗೆ ಅದನ್ನು ಕಳುಹಿಸಿಕೊಡುತ್ತಾರೆ. ಅಲ್ಲಿಂದ ಅದಕ್ಕೆ ಸಂಬಂಧಿಸಿದ ಲಿಖಿತ ಉತ್ತರ ಸಭೆಯಲ್ಲಿ ತಿಳಿಸಲಾಗುತ್ತದೆ. ಉತ್ತರ ಸಮಂಜಸವಿಲ್ಲ ಎಂದಾಗ ಈ ಕುರಿತು ಚರ್ಚಿಸ ಬಹುದು. ಸಮಸ್ಯೆಗೆ ಇಲ್ಲಿ ಉತ್ತರ ಸಿಗದಿದ್ದರೆ ಜಿ.ಪಂ ಅಥವಾ ರಾಜ್ಯಕ್ಕೂ ಕಳುಹಿಸಿಕೊಡಬಹುದು ಎಂದು ಅವರು ಹೇಳಿದರು.


ತಾ.ಪಂ ಸ್ಥಾಯಿ ಸಮಿತಿ ಅಧ್ಯಕ್ಷ ಸಾಜ ರಾಧಾಕೃಷ್ಣ ಆಳ್ವ, ತಹಶೀಲ್ದಾರ್ ರಮೇಶ್ ಬಾಬು, ತಾ.ಪಂ ಕಾರ್ಯನಿರ್ವಾಹಕ ಅಧಿಕಾರಿ ನವೀನ್ ಭಂಡಾರಿ ವೇದಿಕೆಯಲ್ಲಿ ಉಪಸ್ಥಿತರಿದ್ದರು. . ಸಭೆಯಲ್ಲಿ ತಾ.ಪಂ ಸದಸ್ಯರಾದ ಶಿವರಂಜನ್, ದಿವ್ಯಾ ಪುರುಷೋತ್ತಮ, ಮುಕುಂದ ಗೌಡ, ಪೌಝಿಯ, ಹರೀಶ್ ಬಿಜತ್ರೆ, ಲಕ್ಷ್ಮಣ ಗೌಡ ಬೆಳ್ಳಿಪ್ಪಾಡಿ, ಮೀನಾಕ್ಷಿ ಮಂಜುನಾಥ್, ಭವಾನಿ ಚಿದಾನಂದ್, ಸುಜಾತಕೃಷ್ಣ, ಜಿ.ಪಂ ಸದಸ್ಯೆ ಅನಿತಾ ಹೇಮನಾಥ ಶೆಟ್ಟಿ ವಿವಿಧ ಇಲಾಖೆಯ ಅಧಿಕಾರಿಗಳು ಸಭೆಯಲ್ಲಿ ಉಪಸ್ಥಿತರಿದ್ದರು.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.