HomePage_Banner
HomePage_Banner
HomePage_Banner
HomePage_Banner
HomePage_Banner
HomePage_Banner

2019-20ನೇ ಸಾಲಿನ ಗಾಂಧಿ ಗ್ರಾಮ ಪುರಸ್ಕಾರಕ್ಕೆ ಕುಟ್ರುಪಾಡಿ ಗ್ರಾಮ ಪಂಚಾಯತ್ ಆಯ್ಕೆ| ಹ್ಯಾಟ್ರಿಕ್ ಸಾಧನೆ ಮಾಡಿದ ಕುಟ್ರುಪಾಡಿ ಗ್ರಾಮ ಪಂಚಾಯತ್

Puttur_Advt_NewsUnder_1
Puttur_Advt_NewsUnder_1

ಕಡಬ: ತಾಲೂಕಿನ 21 ಗ್ರಾಮ ಪಂಚಾಯತ್‌ಗಳ ಪೈಕಿ ಉತ್ತಮ ಸಾಧನೆಗಾಗಿ ರಾಜ್ಯ ಸರಕಾರದಿಂದ ನೀಡಲಾಗುವ ಗಾಂಧಿ ಗ್ರಾಮ ಪುರಸ್ಕಾರಕ್ಕೆ ಕುಟ್ರುಪಾಡಿ ಗ್ರಾಮ ಪಂಚಾಯತ್ ಆಯ್ಕೆಯಾಗಿದೆ, ಕಳೆದ ಮೂರು ವರ್ಷಗಳಿಂದ ಸತತವಾಗಿ ಗಾಂಧಿ ಗ್ರಾಮ ಪುರಸ್ಕಾರಕ್ಕೆ ಆಯ್ಕೆಯಾಗುವ ಮೂಲಕ ಕುಟ್ರುಪಾಡಿ ಗ್ರಾಮ ಪಂಚಾಯತ್ ಹ್ಯಾಟ್ರಿಕ್ ಸಾಧನೆಯನ್ನು ಮಾಡಿದೆ.

ಪ್ರಶಸ್ತಿಗಳ ಸರಮಾಲೆ:
ಕುಟ್ರುಪಾಡಿ ಗ್ರಾ.ಪಂ.ಗೆ ೨೦೦೭-೦೮ರಲ್ಲಿ ಕೇಂದ್ರ ಸರ್ಕಾರದಿಂದ ನೀಡಲಾಗುವ ನಿರ್ಮಲ ಗ್ರಾಮ ಪುರಸ್ಕಾರ, ೨೦೧೬-೧೭ರಲ್ಲಿ ಬಯಲು ಬಹಿರ್ದೆಸೆ ಮುಕ್ತ ಗ್ರಾಮ ಪಂಚಾಯತಿ ಎಂದು ಘೋಷಣೆ. ೨೦೧೭-೧೮ ಮತ್ತು ೨೦೧೮-೧೯ ನೇ ಹಾಗೂ ೨೦೧೯-೨೦ನೇ ಸಾಲಿನಲ್ಲಿ ಉತ್ತಮ ಸಾಧನೆಗಾಗಿ ರಾಜ್ಯ ಸರ್ಕಾರದಿಂದ ನೀಡಲಾಗುವ ಗಾಂಧಿ ಗ್ರಾಮ ಪುರಸ್ಕಾರವನ್ನು ಪಡೆದುಕೊಂಡಿದೆ. ಅಲ್ಲದೆ ೨೦೧೯ರಲ್ಲಿ ಡಾ. ಶಿವರಾಮ ಕಾರಂತ ಹುಟ್ಟೂರ ಪ್ರಶಸ್ತಿ ಪ್ರತಿ?ನ(ರಿ.), ಕೋಟ ಇವರಿಂದ ಕೊಡಮಾಡಲ್ಪಡುವ ಡಾ|| ಶಿವರಾಮ ಕಾರಂತ ಪ್ರಶಸ್ತಿಯನ್ನು ಕೂಡ ಪಡೆದುಕೊಂಡಿರುವುದು ಪಂಚಾಯತ್‌ನ ಹೆಗ್ಗಲಿಕೆಯಾಗಿದೆ.

ಪ್ರಶಸ್ತಿಗೆ ಮಾನದಂಡ:
ಗಾಂಧಿ ಗ್ರಾಮ ಪುರಸ್ಕಾರಕ್ಕೆ ಪ್ರತಿ ತಾಲೂಕಿನಿಂದ ಉತ್ತಮವಾಗಿ ಕಾರ್‍ಯನಿರ್ವಹಿಸಿದ ಒಂದು ಗ್ರಾಮ ಪಂಚಾಯತ್‌ನ್ನು ಆಯ್ಕೆ ಮಾಡಲಾಗುತ್ತದೆ. ಗ್ರಾಮ ಪಂಚಾಯತ್‌ನ ಸಾಧನೆಗಳನ್ನು ಪಂಚಾಯತ್ ದಾಖಲೆಗಳ ಮೂಲಕ ಸರಕಾರದಿಂದ ನೇಮಕಗೊಳಿಸಲಾದ ನೋಡೆಲ್ ಅಧಿಕಾರಿಗಳು ಪರಿಶೀಲನೆ ಮಾಡಿ ಸರಕಾರಕ್ಕೆ ವರದಿ ನೀಡುತ್ತಾರೆ, ಈ ಆಧಾರದಲ್ಲಿ ಪ್ರಶಸ್ತಿಗಳನ್ನು ನೀಡಲಾಗುತ್ತದೆ.

ಗಾಂಧಿ ಗ್ರಾಮ ಪುರಸ್ಕಾರಕ್ಕೆ ಸಹಕಾರಿ ಆದ ಅಂಶಗಳು:
ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಪ.ಜಾ, ಪ.ಪಂ ಕಾಲನಿಗಳಿಗೆ ಮತ್ತು ಇತರ ಜನವಸತಿ ಪ್ರದೇಶಗಳಿಗೆ ಸೋಲಾರ್ ಬೀದಿ ದೀಪಗಳನ್ನು ಅಳವಡಿಸಿ ವಿದ್ಯುತ್ ಉಳಿತಾಯಕ್ಕೆ ಪ್ರಾಶಸ್ತ್ಯ ನೀಡಲಾಗಿದೆ. ಬಯಲು ಮಲ ಮೂತ್ರ ವಿಸರ್ಜನೆಯನ್ನು ತಡೆಯವ ನಿಟ್ಟಿನಲ್ಲಿ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಸಾರ್ವಜನಿಕ ಶೌಚಾಲಯ ನಿರ್ಮಾಣ ಮಾಡಲಾಗಿದೆ. ಸ್ವಚ್ಚತೆಯ ಬಗ್ಗೆ ಅರಿವು ಮೂಡಿಸುವ ಉದ್ದೇಶದಿಂದ ಸ್ವಚ್ಛ ಕುಟ್ರುಪಾಡಿ ಎಂಬ ಧ್ಯೇಯ ವಾಕ್ಯದೊಂದಿಗೆ ಪ್ರತಿ ತಿಂಗಳ ಒಂದು ಬಾನುವಾರ ಸ್ವಚ್ಛತಾ ಕಾರ್ಯಕ್ರಮವನ್ನು ನಡೆಸಲಾಗುತ್ತಿದೆ. ಸ್ವಚ್ಛ ಕುಟ್ರುಪಾಡಿ ಎಂಬ ವಾಟ್ಸಾಪ್ ಗ್ರೂಪ್ ಮಾಡಲಾಗಿದ್ದು ಇದರ ಮೂಲಕ ಗ್ರಾಮಸ್ಥರು ಸ್ವಚ್ಚತೆ ಬಗ್ಗೆ ದೂರು ಸಲಹೆಗಳನ್ನು ನೀಡಬಹುದಾಗಿದೆ. ಸಿಬ್ಬಂದಿಗಳಿಗೆ ಈ ಹಾಜರಾತಿಯನ್ನು ಜಾರಿಗೊಳಿಸಲಾಗಿದೆ. ವಿದ್ಯುತ್ ಬೀದಿ ದೀಪ ಮತ್ತು ಕುಡಿಯುವ ನೀರಿನ ಸ್ಥಾವರ ಪಂಪು ಚಾಲನೆಗೆ ಸ್ವಯಂ ಚಾಲಿತ ವ್ಯವಸ್ಥೆಯನ್ನು ಅಳವಡಿಸಲಾಗಿರುತ್ತದೆ. ವಿದ್ಯುತ್ ಶುಲ್ಕವನ್ನು ನಿಯಮಿತವಾಗಿ ಪಾವತಿಸಿ, ಉಳಿಕೆ ಅನುದಾನನ್ನು ಅಭಿವೃದ್ದಿ ಕಾರ್ಯಕ್ರಮಗಳಿಗೆ ಬಳಕೆ ಮಾಡಲಾಗುತ್ತಿದೆ. ಗ್ರಾಮ ಪಂಚಾಯತಿಯ ಎಲ್ಲಾ ಕುಡಿಯುವ ನೀರಿನ ಫಲಾನುಭವಿಗಳ ವಿವರವನ್ನು ಗಣಕೀಕರಣಗೊಳಿಸಲಾಗಿದೆ ಮತ್ತು ಸಿಂಪ್ಯುಟರ್ ಮೂಲಕ ಬಿಲ್ಲಿಂಗ್ ವ್ಯವಸ್ಥೆಯನ್ನು ಜಾರಿಗೊಳಿಸಲಾಗಿರುತ್ತದೆ. ನಗದು ರಹಿತ ವ್ಯವಹಾರವನ್ನು ಉತ್ತೇಜಿಸುವುದಕ್ಕಾಗಿ ಗ್ರಾಮ ಪಂಚಾಯತಿಯ ಮನೆ ತೆರಿಗೆ, ನೀರಿನ ಮಾಸಿಕ ಶುಲ್ಕ, ಇತರ ಶುಲ್ಕವನ್ನು ಕ್ಯೂ ಆರ್ ಕೋಡ್ ಸ್ಕ್ಯಾನರ್, ಸ್ವೈಪಿಂಗ್ ಮೆಶಿನ್ ಮೂಲಕ ನೇರವಾಗಿ ಬ್ಯಾಂಕ್ ಖಾತೆಗೆ ಪಾವತಿಸುವ ವ್ಯವಸ್ಥೆಯನ್ನು ಜಾರಿಗೊಳಿಸಲಾಗಿದೆ. ಕಚೇರಿಯಲ್ಲಿ ಐ.ಪಿ ಬೇಸ್ಡ್ ಸಿ ಸಿ ಕ್ಯಾಮಾರಾ ಮತ್ತು ಟಿ ವಿ ಅಳವಡಿಸಲಾಗಿದೆ. ಕಚೇರಿಯನ್ನು ಸಂಪೂರ್ಣ ಸೊಲಾರೀಕರಣಗೊಳಿಸಲಾಗಿದೆ. ಪ್ರೊಜೆಕ್ಟರ್ ಮತ್ತು ಸ್ಕ್ರೀನ್ ಮೂಲಕ ಗ್ರಾಮದ ಎಲ್ಲಾ ಶಾಲೆಗಳಲ್ಲಿ ಮಕ್ಕಳು ಮತ್ತು ಪೋ?ಕರಿಗೆ ಶೌಚಾಲಯ ಬಳಕೆ, ಸ್ವಚ್ಚತೆ, ಪರಿಸರ ಸಂರಕ್ಷಣೆ, ಶಿಕ್ಷಣ, ಪ್ಲಾಷ್ಟಿಕ್ ಬಳಕೆಯಿಂದಾಗುವ ದುಷ್ಪ್ಪರಿಣಾಮಗಳ ಬಗ್ಗೆ ಸಾಕ್ಷ್ಯ ಚಿತ್ರ ಪ್ರದರ್ಶನವನ್ನು ಹಮ್ಮಿಕೊಳ್ಳಲಾಗಿದೆ. ಗ್ರಾಮ ಪಂಚಾಯತಿಯಿಂದ ಡಿಜಿಟಲ್ ಲೈಬ್ರೇರಿ ಅನು?ನಗೊಳಿಸಲಾಗಿದ್ದು, ಆನ್‌ಲೈನ್ ಮೂಲಕ ಪುಸ್ತಕಗಳನ್ನು ಓದಿಕೊಳ್ಳುವ ವ್ಯವಸ್ಥೆ ಮಾಡಲಾಗಿದೆ. ಗ್ರಾಮ ಪಂಚಾಯತಿಯ ಸಂಪೂರ್ಣ ಮಾಹಿತಿ ಹೊಂದಿರುವ ಜಾಲತಾಣವನ್ನು ತೆರಯಲಾಗಿದೆ. ಈ ಎಲ್ಲ ಅಂಶಗಳು ಗಾಂಧಿ ಗ್ರಾಮ ಪುರಸ್ಕಾರಕ್ಕೆ ಪೂರಕವಾಗಿತ್ತು.

ಆಧುನಿಕ ತಂತ್ರಜ್ಞಾನದ ಸದ್ಬಳಕೆ ಮೂಲಕ ಜನರಿಗೆ ಪಾರದರ್ಶಕ ಸೇವೆ- ವಿಲ್ಪ್ರೇಡ್ ಲಾರೆನ್ಸ್ ರೋಡ್ರಿಗಸ್ , ಪಿಡಿಒ
ಈ ಬಗ್ಗೆ ಪಂಚಾಯತ್ ಅಭಿವೃದ್ದಿ ಅಧಿಕಾರಿ ವಿಲ್ಪ್ರೇಡ್ ಲಾರೆನ್ಸ್ ರೋಡ್ರಿಗಸ್ ಅವರು ಪ್ರತಿಕ್ರಿಯೆ ನೀಡಿ, ಪ್ರಶಸ್ತಿಗೆ ಆಯ್ಕೆಯಾಗಿರುವುದು ಸಂತಸದ ವಿಚಾರ, ಈ ಪ್ರಶಸ್ತಿಗೆ ಆಯ್ಕೆಯಾಗಲು, ಪಂಚಾಯತ್‌ನ ಜನಪ್ರತಿನಿಧಿಗಳು, ಸಿಬ್ಬಂದಿಗಳು ಹಾಗೂ ಗ್ರಾಮದ ಜನತೆಯ ಸಹಕಾರ ಮುಖ್ಯವಾಗಿದೆ. ನಾವು ಆಧುನಿಕ ತಂತ್ರಜ್ಞಾನವನ್ನು ಅಳವಡಿಸಿಕೊಂಡು ಗ್ರಾಮಸ್ಥರಿಗೆ ಪಾರದರ್ಶಕ ಸೇವೆ ನೀಡುತ್ತಿರುವುದೇ ಕಾರಣವಾಗಿದೆ, ಮುಂದಿನ ದಿನದಲ್ಲಿ ಕೇಂದ್ರ ಮಟ್ಟದಲ್ಲಿ ನಮ್ಮನ್ನು ಗುರುತಿಸಿಕೊಳ್ಳುವ ದೀನ್ ದಯಾಲ್ ಪ್ರಶಸ್ತಿಯನ್ನು ಪಡೆಯುವ ಪ್ರಯತ್ನದಲ್ಲಿದ್ದೇವೆ, ಸಹಕರಿಸಿದ ಎಲ್ಲರಿಗೂ ಕೃತಜ್ಞತೆಗಳು ಎಂದು ಅವರು ಅಭಿಪ್ರಾಯ ಪಟ್ಟಿದ್ದಾರೆ.

ಪ್ರಶಸ್ತಿ ಬಂದಿರುವುದು ಸಂತಸ ತಂದಿದೆ- ವಿದ್ಯಾಗೋಗಟೆ
ಈ ಬಗ್ಗೆ ಪಂಚಾಯತ್ ಮಾಜಿ ಅಧ್ಯಕ್ಷೆ ವಿದ್ಯಾ ಗೋಗಟೆಯವರು ಪ್ರತಿಕ್ರಿಯೆ ನೀಡಿ, ಸತತವಾಗಿ ಮೂರನೇ ಬಾರಿಗೆ ಪ್ರಶಸ್ತಿಗೆ ಆಯ್ಕೆಯಾಗಿರುವುದು ಸಂತಸ ತಂದಿದೆ, ಈ ಮೂಲಕ ಗ್ರಾಮದ ಜನರ ಸೇವೆ ಇನ್ನಷ್ಟು ಮಾಡಲು ಉತ್ತೇಜನ ಬಂದಿದೆ, ಇದು ಅಧಿಕಾರಿ ಸಿಬ್ಬಂದಿ ವರ್ಗ, ಜನಪ್ರತಿನಿಧಿಗಳು, ಗ್ರಾಮದ ಜನರ ಸಹಕಾರದಿಂದ ಸಾಧ್ಯವಾಗಿದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.