ಪುತ್ತೂರು: ರೋಟರಿ ಕ್ಲಬ್ ಪುತ್ತೂರು ಯುವ ಇದರ ನೇತೃತ್ವದಲ್ಲಿ ಪುತ್ತೂರು ತಾಲೂಕಿನ ಅಟೋ ಚಾಲಕ ಮತ್ತು ಮಾಲಕರ ಕುಟುಂಬದವರಿಗೆ ಉಚಿತ ವೈದ್ಯಕೀಯ ತಪಾಸಣಾ ಶಿಬಿರ ಅ.೦೪ ರಂದು ದರ್ಬೆ ಉಷಾ ಪಾಲಿಕ್ಲಿನಿಕ್ ಬಳಿ ನಡೆಯಲಿದೆ. ಬೆಳಿಗ್ಗೆ, ಮಧ್ಯಾಹ್ನ ಹಾಗೂ ಸಂಜೆ ಮೂರು ಪ್ರತ್ಯೇಕ ಬ್ಯಾಚ್ಗಳಲ್ಲಿ ತಪಾಸಣೆ ನಡೆಯಲಿದ್ದು ಪ್ರತಿ ಬ್ಯಾಚಿನಲ್ಲಿ ಅಪಾಯಿಟ್ಮೆಂಟ್ ಪಡಕೊಂಡ ೧೦೦ ಜನರಿಗೆ ಮಾತ್ರ ಅವಕಾಶವಿರುತ್ತದೆ.
ಏನೇನು ತಪಾಸಣೆ ಇರಲಿದೆ
ಮುಖ್ಯವಾಗಿ ಉಚಿತ ಮಧುಮೇಹ ತಪಾಸಣೆ, ಬಿಪಿ ತಪಾಸಣೆ, ವೈದ್ಯಕೀಯ ಸಲಹೆ, ವೈದ್ಯರ ಸಲಹೆ ಮೇರೆಗೆ ಇಸಿಜಿ ತಪಾಸಣೆ ಅಲ್ಲದೆ ಉಚಿತ ಔಷಧಿ ನೀಡಲಾಗುತ್ತದೆ.
ತಜ್ಞ ವೈದ್ಯರುಗಳು
ಶಿಬಿರದಲ್ಲಿ ಮಂಗಳೂರಿನ ಖ್ಯಾತ ಆಸ್ಪತ್ರೆಯ ಎಲುಬು ಮತ್ತು ಕೀಲು ತಜ್ಞರು, ಕಿವಿ ಮೂಗು ಗಂಟಲು, ಸ್ತ್ರೀರೋಗ, ಪ್ರಸೂತಿ ತಜ್ಞರು, ಹೃದ್ರೋಗ, ಗ್ಯಾಸ್ಟ್ರೋಲಜಿ, ಜನರಲ್ ಫಿಶಿಯನ್, ಮಧುಮೇಹ, ನವಜಾತ ಶಿಶು ಹಾಗೂ ಮಕ್ಕಳ ತಜ್ಞರು, ಮನೋರೋಗ, ಕ್ಯಾನ್ಸರ್ ತಜ್ಞರು ಇದಲ್ಲದೆ ಪೈಲ್ಸ್/ಮೂಲವ್ಯಾಧಿ, ಫಿಸ್ತುಲಾ, ಫಿಶರೀಸ್,ಕಿಡ್ನಿ, ಲಿವರ್, ಹರ್ನಿಯಾ,ಆಪೆಂಡಿಕ್ಸ್ ತಪಾಸಣಾ ತಜ್ಞರುಗಳು ಭಾಗವಹಿಸಲಿದ್ದಾರೆ. ತಾಲೂಕಿನ ಅಟೋ ರಿಕ್ಷಾ ಚಾಲಕ, ಮಾಲಕರ ಕುಟುಂಬದವರು ಇದರ ಪ್ರಯೋಜನ ಪಡೆದುಕೊಳ್ಳುವಂತೆ ರೋಟರಿ ಕ್ಲಬ್ ಪುತ್ತೂರು ಯುವದ ಅಧ್ಯಕ್ಷ ಡಾ| ಹರ್ಷ ಕುಮಾರ್ ರೈ ಮಾಡಾವು ಮತ್ತು ಕಾರ್ಯದರ್ಶಿ ಉಮೇಶ್ ನಾಯಕ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಹೆಸರು ಮುಂಗಡ ಕಾಯ್ದಿರಿಸಿ
ವೈದ್ಯ ಸಂದರ್ಶನ ಅಪೇಕ್ಷಿತರು ಅ.01 ರ ಸಂಜೆ 5 ಗಂಟೆಯ ಒಳಗೆ ಮೊ. 9008256005 ಗೆ ಕರೆ ಮಾಡಿ ತಮ್ಮ ಹೆಸರನ್ನು ನೋಂದಾಯಿಸಿಕೊಳ್ಳಬೇಕು ಹಾಗೂ ತಮಗೆ ಸಂದರ್ಶನ ಮಾಡಬೇಕಾದ ತಜ್ಞ ವೈದ್ಯರ ಹೆಸರನ್ನೂ ಸಹ ತಿಳಿಸತಕ್ಕದ್ದು ಎಂದು ಕ್ಲಬ್ ಪ್ರಕಟಣೆ ತಿಳಿಸಿದೆ.