ಡಾ ನರೇಂದ್ರ ರೈ ದೇರ್ಲರವರ ಕೃತಿಗಳ ಬಿಡುಗಡೆ- ರೈತರಿಂದಲೇ ಬಿಡುಗಡೆಗೊಂಡ ರೈತಪರ ಕೃತಿಗಳು

Puttur_Advt_NewsUnder_1
Puttur_Advt_NewsUnder_1

ಪುತ್ತೂರು: ಲೇಖಕ, ಆಭ್ಯುದಯ ಪತ್ರಕರ್ತ, ಪ್ರಾಧ್ಯಾಪಕ, ಕೃಷಿಕ ಡಾ. ನರೇಂದ್ರ ರೈ ದೇರ್ಲ ಅವರ ಕೃಷಿ, ಪರಿಸರಪರ ‘ಹಳ್ಳಿಯ ಆತ್ಮಕಥೆ’, ‘ಕೊರೋನಾ ನಂತರದ ಗ್ರಾಮಭಾರತ’ ಮತ್ತು ‘ಬೇರು ಬದುಕು'(ವಿಜಯವಾಣಿ ಅಂಕಣ) ಕೃತಿಗಳು ವಿಶೀಷ್ಠ ರೀತಿಯಲ್ಲಿ ಸರಳವಾಗಿ ಬಿಡುಗಡೆಗೊಂಡವು. ಕೋವಿಡ್ ೧೯ ರ ಸಂಕಷ್ಟ ಕಾಲದಲ್ಲಿ ಸಮಾರಂಭ ರಹಿತವಾಗಿ ಕರಾವಳಿಯ ಪ್ರಸಿದ್ಧ ಕೃಷಿಕರಾದ ರಾಜ್ಯ ಕೃಷಿ ಪಂಡಿತ ಪ್ರಶಸ್ತಿ ವಿಜೇತ ಪೈಲೂರು ಶ್ರೀನಿವಾಸ ರಾವ್, ಗೋಪಾಲಕೃಷ್ಣ ಶ್ಯಾನಭಾಗ ಹಾಗೂ ‘ಐಟಿಯಿಂದ ಮೇಟಿ’ ಕೃತಿ ಖ್ಯಾತಿಯ ವಸಂತ ಕಜೆಯವರು ಕೃತಿಗಳನ್ನು ಅತ್ಯಂತ ಸರಳವಾಗಿ ತಮ್ಮ ತಮ್ಮ ಮನೆಗಳಲ್ಲೇ ಲೋಕಾರ್ಪಣೆಗೊಳಿಸಿದರು. ಹದಿನೆಂಟು ಪ್ರಬಂಧಗಳ ಸಂಕಲನವಾದ ‘ಹಳ್ಳಿಯ ಆತ್ಮಕಥೆ’ ಯನ್ನು ಸುಳ್ಯ ಚೊಕ್ಕಾಡಿಯ ಪೈಲೂರರ ಮನೆಯಲ್ಲಿ ಬಿಡುಗಡೆಗೊಳಿಸಲಾಯಿತು. ಆ ಸರಳ ಸಮಾರಂಭದಲ್ಲಿ ಶ್ರೀನಿವಾಸ ರಾವ್ ಅವರ ಪುತ್ರ ದೂರದರ್ಶನ ಸುದ್ದಿ ಸಂಪಾದಕರಾಗಿದ್ದ ಡಾ ಶಿವರಾಮ ಪೈಲೂರು ರವರು ನೂತನ ಕೃತಿಗಳ ಕುರಿತು ಪುಟ್ಟ ಸಾಕ್ಷ್ಯ ಚಿತ್ರಗಳನ್ನು ಪ್ರದರ್ಶಿಸಿದರು.

ಎರಡನೆಯ ಕೃತಿ ‘ಬೇರು ಬದುಕು’ ನ್ನು ಕರಾವಳಿಗೆ ಮೊದಲ ಬಾರಿಗೆ ಕೊಕ್ಕೋ ಕೃಷಿ, ಹನಿ ನೀರವರಿಯನ್ನು ಪರಿಚಯಿಸಿದ ಹಿರಿಯ ಕೃಷಿಕ ಮಣಿಕ್ಕಾರ ಗೋಪಾಲಕೃಷ್ಣ ಶ್ಯಾನುಭಾಗರು ಮನೆಮಂದಿಯೊಂದಿಗೆ ಸೇರಿ ಬಿಡುಗಡೆಗೊಳಿಸಿದರು. ‘ಬೇರು ಬದುಕು’ ದೇರ್ಲರ ‘ವಿಜಯವಾಣಿ’ ಅಂಕಣದ ನಾಲ್ಕನೆಯ ಸಂಪುಟ. ಕಳೆದ ವರ್ಷ ಬಿಡುಗಡೆಗೊಂಡ ಮೂರನೆಯ ಸಂಪುಟಕ್ಕೆ ಕರ್ನಾಟಕ ಸಾಹಿತ್ಯ ಅಕಾಡೆಮಿ ಮತ್ತು ಡಾ. ಹಾ.ಮಾ.ನಾಯಕ ಅಂಕಣ ಪ್ರಶಸ್ತಿ ಲಭಿಸಿತ್ತು. ಮೂರನೆಯ ‘ಕೊರೋನಾ ನಂತರದ ಗ್ರಾಮಭಾರತ’ ಕೃತಿಯು ಬಂಟ್ವಾಳ ತಾಲೂಕಿನ ಮಂಚಿಯ ಯುವ ಕೃಷಿಕ, ಉದ್ಯೋಗಿಗಳು ನೆಲಕ್ಕೆ ವಾಪಾಸಾದ ಕೃಷಿಕ ವಸಂತ ಕಜೆ ಬಿಡುಗಡೆಗೊಳಿಸಿದರು. ಮೂರೂ ಕಡೆಯೂ ಲೇಖಕ ನರೇಂದ್ರ ರೈ ಉಪಸ್ಥಿತರಿದ್ದರು. ಯಾವುದೇ ವೇದಿಕೆ, ಭಾಷಣವಿಲ್ಲದ ರೈತಪರ ಈ ಸರಳ ಕಾರ್ಯಕ್ರಮ ಮಾದರಿಯಾಯಿತು

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.