ರೆಂಜಿಲಾಡಿ ಶಾಲೆಯಲ್ಲಿ ಜಲ ಮರುಪೂರಣ ಘಟಕ ಉದ್ಘಾಟನೆ| ಉದ್ಯೋಗ ಖಾತರಿಯ ರೂ. 85 ಸಾವಿರ ವೆಚ್ಚದಲ್ಲಿ ಘಟಕ ನಿರ್ಮಾಣ

Puttur_Advt_NewsUnder_1
Puttur_Advt_NewsUnder_1


ಕಡಬ: ರೆಂಜಿಲಾಡಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ವಠಾರದಲ್ಲಿ ಉದ್ಯೋಗ ಖಾತರಿ ಯೋಜನಯಡಿ ಸುಮಾರು ರೂ.85 ಸಾವಿರ ವೆಚ್ಚದಲ್ಲಿ ಕೊಳವೆಬಾವಿಗೆ ನಿರ್ಮಿಸಲಾದ ಜಲ ಮರುಪೂರಣ ಘಟಕವನ್ನು ಸೆ.30ರಂದು ಉದ್ಘಾಟಿಸಲಾಯಿತು.
ತಾ.ಪಂ. ಸದಸ್ಯ ಗಣೇಶ್ ಗೌಡ ಕೈಕುರೆ ಘಟಕವನ್ನು ಉದ್ಘಾಟಿಸಿ ಮಾತನಾಡಿ, ಇಂದಿನ ದಿನಗಳಲ್ಲಿ ಜಲ ಮರುಪೂರಣದಂತಹ ಅಂತರ್ಜಲ ವೃದ್ಧಿಸುವ ಯೋಜನೆಗಳು ಮುಖ್ಯವಾಗಿದ್ದು, ನೀರಿಗಾಗಿ ಪರಿತಪಿಸುವ ಬದಲಾಗಿ ಇಂತಹ ಜಲಮರುಪೂರಣ ಯೋಜನೆಗಳನ್ನು ಅಳವಡಿಸಿಕೊಂಡಲ್ಲಿ ನೀರಿನ ಅಭಾವವನ್ನು ತಪ್ಪಿಸಬಹುದು ಎಂದ ಅವರು ಇಂಗು ಗುಂಡಿ ರಚಿಸಿ ನೀರನ್ನು ಇಂಗಿಸುವುದರಿಂದ ಭೂಮಿಯಲ್ಲಿ ಅಂತರ್ಜಲ ಮಟ್ಟವನ್ನು ಹೆಚ್ಚಿಸಬಹುದು ಎಂದರು. ಈ ಸಂದರ್ಭದಲ್ಲಿ ಉದ್ಯೋಗ ಖಾತರಿ ಎಂಜಿನಿಯರ್ ಮನೋಜ್ ಅವರನ್ನು ಜಿ.ಪಂ. ಸದಸ್ಯ ಪಿ.ಪಿ. ವರ್ಗೀಸ್ ಅವರು ಶಾಲಾ ವತಿಯಿಂದ ಸ್ಮರಣಿಕೆ ನೀಡಿ ಗೌರವಿಸಿದರು.  ಬೆಥನಿ ವಿದ್ಯಾಸಂಸ್ಥೆಯ ನಿರ್ದೇಶಕ ವಂ.ರೆ.ಫಾ.ಸಖರಿಯಾಸ್ ನಂದಿಯಾಟ್, ರೆಂಜಿಲಾಡಿ ಬೀಡಿನ ಯಶೋಧರ ಯಾನೆ ತಮ್ಮಯ್ಯ ಬಳ್ಳಾಲ್, ಗ್ರಾ.ಪಂ. ನಿಕಟಪೂರ್ವ ಅಧ್ಯಕ್ಷ ಸದಾನಂದ ಗೌಡ, ಪಿಡಿಒ ಆನಂದ ಎ., ಸಿಆರ್‌ಪಿ ಗೋವಿಂದ ನಾಯಕ್, ಎಸ್‌ಡಿಎಂಸಿ ಅಧ್ಯಕ್ಷ ಜಗದಿಶ್, ಪ್ರಮುಖರಾದ ಸುಂದರ, ಯಶವಂತ ಕಲ್ಲುಗುಡ್ಡೆ, ಶಾಲಾ ಶಿಕ್ಷಕರು, ಪೋಷಕರು ಉಪಸ್ಥಿತರಿದ್ದರು. ಮುಖ್ಯ ಶಿಕ್ಷಕ ಮೇದಪ್ಪ ಗೌಡ ಸ್ವಾಗತಿಸಿ, ವಂದಿಸಿದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.