HomePage_Banner
HomePage_Banner
HomePage_Banner
HomePage_Banner
HomePage_Banner
HomePage_Banner

ಶ್ರೀಮಂತರ ಸಾಲ ಮನ್ನಾ ಮಾಡಿ ಬಡವರ ಸಾಲ ವಸೂಲಾತಿ ದೌರ್ಜನ್ಯ ಮಾಡುವ ಸರಕಾರ- ಋಣಮುಕ್ತ ಹೋರಾಟ ಸಮಿತಿ ಪ್ರತಿಭಟನೆಯಲ್ಲಿ ಬಿ.ಎಮ್. ಭಟ್

Puttur_Advt_NewsUnder_1
Puttur_Advt_NewsUnder_1


ಪುತ್ತೂರು: ವಿಜಯ ಮಲ್ಯ, ನೀರವ್ ಮೋದಿ ಮೊದಲಾದ ಅತಿ ಶ್ರೀಮಂತರ ಸಾಲಗಳನ್ನು ಮೋರ್‍ಟೋರಿಯಂ ಮಾಡುವ ಸರಕಾರ ಬಡ ಮಹಿಳೆಯರ ಕಿರು ಸಾಲಗಳನ್ನ ಮನ್ನಾ ಮಾಡದೇ ಪ್ರತಿ ದಿನಾ ಮನೆಗಳಿಗೆ ಮೈಕ್ರೋ ಸಿಬ್ಬಂದಿಗಳನ್ನು ಕಳಹಿಸಿ ದೌರ್ಜನ್ಯ ನಡೆಸುತ್ತಿದೆ ಎಂದು ಕರ್ನಾಟಕ ರಾಜ್ಯ ಋಣಮುಕ್ತ ಹೋರಾಟ ಸಮಿತಿಯ ರಾಜ್ಯಾದ್ಯಕ್ಷ ನ್ಯಾಯವಾದಿ ಬಿ.ಎಂ.ಭಟ್ ಆರೋಪಿಸಿದರು.
ಅ.1ರಂದು ಪುತ್ತೂರು ಮಿನಿ ವಿಧಾನ ಸೌದದ ಮುಂಭಾಗದಲ್ಲಿರುವ ಅಮರ್ ಜವಾನ್ ಬಳಿ ಕರ್ನಾಟಕ ರಾಜ್ಯ ಋಣಮುಕ್ತ ಹೋರಾಟ ಪುತ್ತೂರು ತಾಲೂಕು ಸಮಿತಿ ಮತ್ತು ಪುತ್ತೂರು ತಾಲೂಕು ಬೀಡಿ ಕೆಲಸಗಾರರ ಸಂಘದ ನೇತೃತ್ವದಲ್ಲಿ ಸಾಲಮನ್ನಾ, ಮೈಕ್ರೋ ಸಿಬ್ಬಂದಿಗಳ ದೌರ್ಜನ್ಯ ತಡೆಯಲು ಹಾಗೂ ಬೀಡಿ ಕಾರ್ಮಿಕರ ಬಾಕಿ ವೇತನಗಳನ್ನು, ಗ್ರಾಚ್ಯುವಿಟಿಗಳನ್ನು ಪಾವತಿಸಲು ಆಗ್ರಹಿಸಿ ನಡೆದ ಪ್ರತಿಭಟನಾ ಸಭೆಯಲ್ಲಿ ಅವರು ಮಾತನಾಡಿದರು. ರಿಸರ್ವ್ ಬ್ಯಾಂಕ್ ಗೈಡ್‌ಲೈನ್ಸ್‌ಗಳನ್ನು ಉಲ್ಲಂಘಿಸಿ ಮಹಿಳಾ ಸಬಲೀಕರಣದ ಬದಲು ಬಡಮಹಿಳೆಯರನ್ನು ದುಬಾರಿ ಬಡಿ ಯ ಆಧಾರ ರಹಿತವಾದ ಕೈಸಾಲಗಳ ಸುಳಿಗೆ ಸಿಲುಕಿಸಿದ ಮೈಕ್ರೋ ಫೈನಾನ್ಸ್ ಕಿರುಸಾಲಗಳು ಕಾನೂನು ರೀತಿಯಲ್ಲಿ ಮೋರ್‍ಟೋರಿಯಂ ಆಗಬೇಕಿದೆ. ಮೈಕ್ರೋ ಸಿಬ್ಬಂದಿಗಳು ದಿನಾ ಮನೆಮನೆಗಳಿಗೆ ಬಂದು ಮಹಿಳೆಯರಿಗೆ ಮಾನಸಿಕ ಹಿಂಸೆ, ಅವಮಾನ ಮಾಡುತ್ತಾ ದೌರ್ಜನ್ಯ ಎಸೆಯುವುದು ಕ್ರಿಮಿನಲ್ ಅಪರಾದವಾಗಿದ್ದು ಇದನ್ನು ತಕ್ಷಣ ಸರಕಾರ ತಡೆಹಿಡಿಯಬೇಕು. ಕೊರೋನಾ, ಲಾಕ್ ಡೌನ್ ಸಂತ್ರಸ್ಥರೂ ಆದ ಈ ಬಡ ಮಹಿಳೆಯರು ಈಗ ಬದುಕಲು ಕಷ್ಟ ಪಡುತ್ತಿರುವಾಗ ಇವರು ಸಾಲದ ಕಂತು ಕೊಡಿ ಎಂದು ಹಿಂಸಿಸುತ್ತಿದ್ದರೂ ಸರಕಾರದ ಮೌನ ಸಂಶಯಕ್ಕೆಡೆಮಾಡಿದೆ ಎಂದರು.

ಗೈಡ್‌ಲೈನ್ ಉಲ್ಲಂಘಿಸಿದ ಮೈಕ್ರೋ ಫೈನಾನ್ಸ್:
ಕಾರ್ಮಿಕ ಮುಖಂಡರಾದ ಎಲ್. ಮಂಜುನಾಥ್ ಮಾತನಾಡಿ ಗುಂಪು ಮಾಲಕತ್ವದಲ್ಲಿ ಉದ್ದಿಮೆಗಳನ್ನು ಸ್ಥಾಪಿಸಿ ಅವರಿಗೆ ತರಬೇತಿ ನೀಡಿ ಮಹಿಳಾ ಸಬಲೀಕರಣ ಮಾಡಬೇಕಿತ್ತು. ಆದರೆ ರಿಸರ್ವ್ ಗೈಡ್‌ಲೈನ್ಸ್ ಉಲ್ಲಂಘಿಸಿದ ಮೈಕ್ರೋ ಫೈನಾನ್ಸ್‌ನ ಕಿರು ಸಾಲಗಳನ್ನು ಮನ್ನ ಮಾಡಬೇಕೆಂದು ಅವರು ಸರಕಾರವನ್ನು ಒತ್ತಾಯಿಸಿದರು. ಈ ಸಂದರ್ಭದಲ್ಲಿ ದಲಿತ ಹಕ್ಕು ಹೋರಾಟ ಸಮಿತಿಯ ಈಶ್ವರಿ, ಋಣಮುಕ್ತ ಸಮಿತಿಯ ಪುತ್ತೂರು ಅದ್ಯಕ್ಷ ಕೇಶವ ಗೌಡ, ಬೀಡಿ ಕಾರ್ಮಿಕ ಸಂಘದ ಅದ್ಯಕ್ಷ ಗುಡ್ಡಪ್ಪ ಗೌಡ, ಋಣಮುಕ್ತ ಹೋರಾಟ ಸಮಿತಿಯ ತಾಲೂಕು ಕಾರ್ಯದರ್ಶಿ ಪೂಜಾ, ಕೋಶಾಧಿಕಾರಿ ಬದ್ರುನ್ನೀಸ, ಜಿಲ್ಲಾ ಜೊತೆ ಕಾರ್ಯದರ್ಶಿ ಗಣೇಶ ಪ್ರಸಾದ್ ಮತ್ತಿತರರು ಉಪಸ್ಥಿತರಿದ್ದರು.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.