HomePage_Banner
HomePage_Banner
HomePage_Banner
HomePage_Banner
HomePage_Banner
HomePage_Banner

ಕೆಯ್ಯೂರಿನಲ್ಲಿ ಶ್ರೀ ದುರ್ಗಾ ಫ್ಯಾನ್ಸಿ ಸ್ಟೇಷನರಿ, ಜೆರಾಕ್ಸ್ ಸೆಂಟರ್ ಉದ್ಘಾಟನೆ

Puttur_Advt_NewsUnder_1
Puttur_Advt_NewsUnder_1

 

ಪುತ್ತೂರು: ಕೆಯ್ಯೂರು ಗ್ರಾಮದ ದೇವಿನಗರದಲ್ಲಿ ಫ್ಯಾನ್ಸಿ, ಸ್ಟೇಷನರಿ ಮತ್ತು ಜೆರಾಕ್ಸ್ ಸೆಂಟರ್ ಅ.1ರಂದು ದೇವಿನಗರದಲ್ಲಿ ಶುಭಾರಂಭಗೊಂಡಿತು. ಮೋನಪ್ಪ ಪೂಜಾರಿ ಪಲ್ಲತ್ತಡ್ಕರವರು ದೀಪ ಬೆಳಗಿಸಿ ಉದ್ಘಾಟಿಸಿದರು. ಬಳಿಕ ಪ್ರತಿಕ್ರಿಯೆ ನೀಡಿದ ಅವರು, ಫ್ಯಾನ್ಸಿ ಸ್ಟೇಷನರಿ ಮತ್ತು ಜೆರಾಕ್ಸ್ ಸೆಂಟರ್‌ನ ಮಾಲಕರು ದೈವಭಕ್ತರು ಅವರು ಆರಂಭಿಸಿದ ಉದ್ಯಮವು ಯಶಸ್ವಿಯಾಗಿ ಮುನ್ನೆಡೆಯಲಿ ಪಲ್ಲತ್ತಡ್ಕದ ಹೊಸಮ್ಮನ ಅನುಗ್ರಹ ಪ್ರಾಪ್ತಿಯಾಗಲಿ ಎಂದು ಹೇಳಿದರು. ರಿಬ್ಬನ್ ತುಂಡರಿಸುವ ಮೂಲಕ ಜೆರಾಕ್ಸ್ ಸೆಂಟರ್ ಉದ್ಘಾಟಿಸಿದ ಶ್ರೀ ಕ್ಷೇತ್ರ ಕೆಯ್ಯೂರಿನ ವ್ಯವಸ್ಥಾಪನಾ ಸಮಿತಿಯ ಮಾಜಿ ಅಧ್ಯಕ್ಷ ಎಸ್.ಬಿ.ಜಯರಾಮ ರೈ ಬಳಜ್ಜರವರು ಶುಭ ಸಂದೇಶ ನೀಡುತ್ತಾ, ಬೆಳೆಯುತ್ತಿರುವ ಕೆಯ್ಯೂರು ಪೇಟೆಗೆ ಇಂತಹ ಫ್ಯಾನ್ಸಿ,ಸ್ಟೇಷನರಿ, ಜೆರಾಕ್ಸ್ ಸೆಂಟರ್‌ನ ಅಗತ್ಯತೆ ಇದೆ. ಪೇಟೆಯು ಇದೇ ರೀತಿಯಲ್ಲಿ ಬೆಳೆಯುತ್ತಾ ಸಾಗಲಿ, ಮಾಲಕರಿಗೆ ಯಶಸ್ಸು ಸಿಗಲಿ ಎಂದು ಹೇಳಿದರು.

ಮುಖ್ಯ ಅತಿಥಿಯಾಗಿ ಆಗಮಿಸಿದ್ದ ಕೆಯ್ಯೂರು ಗ್ರಾಪಂ ಮಾಜಿ ಸದಸ್ಯ ಎ.ಕೆ ಜಯರಾಮ ರೈ ಶುಭ ಸಂದೇಶ ನೀಡುತ್ತಾ, 1980 ಮೇ.2ರಂದು ನಾನು ದಿನಸಿ ಅಂಗಡಿ ಆರಂಭಿಸಿದ ಕಟ್ಟಡದಲ್ಲಿ ಸುಶೀಲಾ ಚಂದ್ರಶೇಖರ್‌ರವರು ಇಂದು ಫ್ಯಾನ್ಸಿ, ಸ್ಟೇಷನರಿ ಸೆಂಟರ್ ಆರಂಭಿಸಿದ್ದಾರೆ. ಇವರ ಉದ್ಯಮವು ಯಶಸ್ವಿಯಾಗಲಿ ಶ್ರೀ ದೇವಿಯ ಅನುಗ್ರಹ ಸಿಗಲಿ ಎಂದು ಹೇಳಿದರು. ಈ ಸಂದರ್ಭದಲ್ಲಿ ಹಿರಿಯರಾದ ದಂಬೆಕ್ಕಾನ ಸದಾಶಿವ ರೈ, ಜಜಯಂತ ಪೂಜಾರಿ ಕೆಂಗುಡೇಲು, ಕೃಷ್ಣಪ್ರಸಾದ್ ಪಲ್ಲತ್ತಡ್ಕ, ವಿನಯ ಕುಮಾರ್ ರೈ ದೇರ್ಲ, ಶರತ್ ಕುಮಾರ್ ರೈ ದೇರ್ಲ, ರವಿ ಕುಮಾರ್ ಕೈತಡ್ಕ, ವಿಶ್ವನಾಥ ಪೂಜಾರಿ ಕೆಂಗುಡೇಲು, ಆನಂದ ರೈ ದೇವಿನಗರ, ಚಂದ್ರಶೇಖರ ರೈ ಬೊಳಿಕ್ಕಲಮಠ, ಹರಿಣಾಕ್ಷಿ ಜೆ.ರೈ, ರಮಾನಾಥ ರೈ ಕೋಡಂಬು, ದಿವ್ಯ ಆರ್.ರೈ, ಮೋನಪ್ಪ ಪಿ.ಪಲ್ಲತ್ತಡ್ಕ, ಶಾಂಭವಿ ಶೆಟ್ಟಿ ದೇರ್ಲ, ಜಯರಾಮ ಶೆಟ್ಟಿ ದೇರ್ಲ, ಜಯಂತ ರೈ ಮೇನಾಲ ಮತ್ತಿತರರು ಆಗಮಿಸಿ ಶುಭ ಹಾರೈಸಿದರು. ಸಂಸ್ಥೆಯ ಮಾಲಕರಾದ ಸುಶೀಲ ಚಂದ್ರಶೇಖರ ಶೆಟ್ಟಿ ಕೆಯ್ಯೂರು ಅತಿಥಿಗಳನ್ನು ಸ್ವಾಗತಿಸಿ, ಸತ್ಕರಿಸಿ ಗ್ರಾಹಕರ ಸಹಕಾರ ಕೋರಿದರು.

ಶ್ರೀ ದುರ್ಗಾ ಫ್ಯಾನ್ಸಿ,ಸ್ಟೇಷನರಿ ಮತ್ತು ಜೆರಾಕ್ಸ್ ಸೆಂಟರ್‌ನಲ್ಲಿ ಎಲ್ಲಾ ಬಗೆಯ ಫ್ಯಾನ್ಸಿ ಐಟಂಗಳು, ಶಾಲಾ ಕಾಲೇಜಿನ ಸ್ಟೇಷನರಿ ಐಟಂಗಳು ಮತ್ತು ಜೆರಾಕ್ಸ್ ಸೇವೆಗಳು ಲಭ್ಯವಿದೆ.ಹೆಚ್ಚಿನ ಮಾಹಿತಿಗಾಗಿ ಮೊ.9686365128 ಗೆ ಸಂಪರ್ಕಿಸಬಹುದಾಗಿದೆ.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.