HomePage_Banner
HomePage_Banner
HomePage_Banner
HomePage_Banner
HomePage_Banner
HomePage_Banner

ತಡರಾತ್ರಿ ಬಂದವ ಎರಡು ಮನೆಯ ಹೊರಗೆ ತಡಕಾಡಿದ..!- ಕುಂಬ್ರದಲ್ಲಿ ನಡೆದ ಘಟನೆ… ಸಾಕ್ಷಿಯಾದ ಸಿ ಸಿ ಕೆಮರಾ

Puttur_Advt_NewsUnder_1
Puttur_Advt_NewsUnder_1


ಪುತ್ತೂರು: ತಡ ರಾತ್ರಿ ಮನೆಯ ಅಂಗಳಕ್ಕೆ ಬಂದ ಕಳ್ಳನೋರ್ವ ಎರಡು ಮನೆಯ ಸುತ್ತಲೂ ವೀಕ್ಷಣೆ ಮಾಡುವ ವೇಳೆ ಮನೆಯವರು ಎಚ್ಚರವಾದ ವೇಳೆ ಆತ ಪರಾರಿಯಾದ ಘಟನೆ ಕುಂಬ್ರ ಕೊಯಿಲತ್ತಡ್ಕ ಜನತಾ ಕಾಲನಿಯಲ್ಲಿ ಸೆ. 30ರಂದು ರಾತ್ರಿ ನಡೆದಿದೆ. ಕಳ್ಳನು ಬಂದಿರುವ ಪ್ರತೀಯೊಂದು ದೃಶ್ಯವೂ ಮನೆಯಲ್ಲಿದ್ದ ಸಿ ಸಿ ಕೆಮರಾದಲ್ಲಿ ದಾಖಲಾಗಿದ್ದು ಆತನ ಮುಖಚರ್ಯೆ ಸ್ಪಷ್ಟವಾಗಿ ಗೋಚರವಾಗುತ್ತಿದೆ. ಕುಂಬ್ರ ಸೇತುವೆ ಬಳಿ ಇರುವ ಜನತಾ ಕಾಲನಿಗೆ ತೆರಳುವ ಮೂಲಕ ಮಣ್ಣಿನ ರಸ್ತೆಯ ಮೂಲಕ ನಡೆದುಕೊಂಡೇ ಬಂದ ಈತ ಅಲ್ಲಿನ ನಾಸಿರ್ ಎಂಬವರ ಮನೆಯ ಅಂಗಳದ ಮೂಲಕ ನೇರವಾಗಿ ಕಾಲನಿಗೆ ತೆರಳುತ್ತಾನೆ. ಕಾಲನಿಯ ಹತ್ತಾರು ಮನೆಗಳನ್ನು ದಾಟಿ ಕಾಲನಿ ಪಕ್ಕದಲ್ಲಿರುವ ಮೀನು ವ್ಯಾಪಾರಿ ಇಸ್ಮಾಯಿಲ್ ಗಟ್ಟಮನೆ ಎಂಬವರ ಮನೆಯ ಕಡೆ ತೆರಳಿ ಅವಿತುಕೊಂಡಿದ್ದ. ಇಸ್ಮಾಯಿಲ್ ರವರ ಪತ್ನಿಗೆ ಮನೆಯಂಗಳದಲ್ಲಿ ಯಾರೋ ಇರುವ ಬಗ್ಗೆ ಅನುಮಾನ ಉಂಟಾಗಿ ಪತಿ ಇಸ್ಮಾಯಿಲ್ ಗೆ ವಿಷಯ ತಿಳಿಸುತ್ತಾರೆ. ಮನೆಯ ಹೊರಗೆ ನೋಡುವಾಗ ಆತ ಮನೆಯ ಹಿಂಭಾಗದಲ್ಲಿ ಅವಿತುಕೊಂಡಿದ್ದ. ತಕ್ಷಣವೇ ಪಕ್ಕದ ಮನೆಯವರಿಗೆ ಕರೆ ಮಾಡಿದಾಗ ಆತ ಅಲ್ಲಿಂದ ಪರಾರಿಯಾಗಿದ್ದ. ಬಳಿಕ ಹೋದ ದಾರಿಯಲ್ಲೇ ಹಿಂದಿರುಗಿ ನಾಸಿರ್ ರವರ ಮನೆಯ ಬಳಿ ಇರುವ ನೀರಿನ ಟ್ಯಾಂಕ್ ಬಳಿ ಕೆಲ ಹೊತ್ತು ನಿಂತುಕೊಂಡಿದ್ದ. ತನ್ನ ಸೊಂಟದಲ್ಲಿ ಏನೋ ವಸ್ತುವನ್ನು ಇಟ್ಟುಕೊಂಡಿದ್ದ ಆತ ಅದನ್ನು ಕೆಮರಾಗೆ ಅಡ್ಡವಾಗಿ ನಿಂತು ಸರಿಪಡಿಸುತ್ತಿದ್ದ. ಇದೆಲ್ಲವೂ ನಡೆದದ್ದು ರಾತ್ರಿ ೧೧.೪೫ ರಿಂದ ೧೨.೩೦ ರ ವೇಳೆಗೆ ಇದೆಲ್ಲವೂ ಸಿ ಸಿ ಕೆಮರಾದಲ್ಲಿ ದಾಖಲಾಗಿದೆ. ಆ ಬಳಿಕ ಆತ ಬಂದ ದಾರಿಯಲ್ಲೇ ವಾಪಸ್ಸಾಗಿದ್ದಾನೆ.  ಘಟನೆಯ ಬಗ್ಗೆ ಪೊಲೀಸರಿಗೆ ದೂರು ನೀಡಲಾಗಿದೆ. ಪೊಲೀಸರು ಸಿ ಸಿ ಕೆಮರಾ ಪರಿಶೀಲನೆ ನಡೆಸಿದ ಪೊಲೀಸರು ಕಳ್ಳನಿಗೆ ಬಲೆ ಬೀಸಿದ್ದಾರೆ.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.