HomePage_Banner
HomePage_Banner
HomePage_Banner
HomePage_Banner
HomePage_Banner
HomePage_Banner

ಅ.3: ಎಪಿಎಂಸಿಯಲ್ಲಿ ವಿವಿಧ ಕಾಮಗಾರಿಗಳ ಉದ್ಘಾಟನೆ, ಶಂಕುಸ್ಥಾಪನೆ

Puttur_Advt_NewsUnder_1
Puttur_Advt_NewsUnder_1
  •  7.56 ಕೋಟಿ ಕಾಮಗಾರಿ ಉದ್ಘಾಟನೆ
  • 2.18 ಕೋಟಿ ಕಾಮಗಾರಿ ಶಂಕುಸ್ಥಾಪನೆ

ಪುತ್ತೂರು:ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯ ಪುತ್ತೂರು ಮುಖ್ಯ ಮಾರುಕಟ್ಟೆ ಪ್ರಾಂಗಣದಲ್ಲಿ ನಡೆಸಲಾದ ವಿವಿಧ ಅಭಿವೃದ್ಧಿ ಕಾಮಗಾರಿಗಳ ಉದ್ಘಾಟನೆ ಹಾಗೂ ವಿವಿಧ ಕಾಮಗಾರಿಗಳಿಗೆ ಶಂಕುಸ್ಥಾಪನಾ ಕಾರ್ಯಕ್ರಮಗಳು ಅ.3ರಂದು ನಡೆಯಲಿದೆ ಎಂದು ಅಧ್ಯಕ್ಷ ದಿನೇಶ್ ಮೆದು ಹೇಳಿದರು. ಅ.1ರಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಉದ್ಘಾಟನೆ ಹಾಗೂ ಶಂಕುಸ್ಥಾಪನಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಾಸಕ ಸಂಜೀವ ಮಠಂದರೂರು ವಹಿಸಲಿದ್ದಾರೆ. ನವೀಕೃತ ತರಕಾರಿ ಮಾರುಕಟ್ಟೆಯನ್ನು ಕೇಂದ್ರ ಸರಕಾರದ ರಾಸಾಯನಿಕ ಮತ್ತು ರಸಗೊಬ್ಬರ ಸಚಿವ ಡಿ.ವಿ ಸದಾನಂದ ಗೌಡ ಉದ್ಘಾಟಿಸಲಿದ್ದಾರೆ. ೧೦೦೦ ಮೆಟ್ರಿಕ್ ಟನ್ ಸಾಮರ್ಥ್ಯದ ಗೋದಾಮನ್ನು ರಾಜ್ಯ ಸಹಕಾರ ಮತ್ತು ಕೃಷಿ ಮಾರುಕಟ್ಟೆ ಸಚಿವ ಎಸ್.ಟಿ ಸೋಮಶೇಖರ್ ಉದ್ಘಾಟಿಸಲಿದ್ದಾರೆ. ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಕಾಂಕ್ರೀಟ್ ರಸ್ತೆಯನ್ನು ಉದ್ಘಾಟಿಸಲಿದ್ದಾರೆ. ಸಂಸದ ನಳಿನ್ ಕುಮಾರ್ ಕಟೀಲ್ ಸಂಡ್ರಿಶಾಪ್ ಕಟ್ಟಡವನ್ನು ಉದ್ಘಾಟಿಸಲಿದ್ದಾರೆ. ಸುಳ್ಯ ಶಾಸಕ ಎಸ್. ಅಂಗಾರ ನವೀಕೃತ ಹೂತೋಟವನ್ನು ಉದ್ಘಾಟಿಸಲಿದ್ದಾರೆ ಎಂದರು. ಮುಖ್ಯ ಅತಿಥಿಗಳಾಗಿ ವಿಧಾನ ಪರಿಷತ್ ಸಭಾಪತಿ ಕೆ.ಪ್ರತಾಪ್ ಚಂದ್ರ ಶೆಟ್ಟಿ, ಜಿ.ಪಂ ಅಧ್ಯಕ್ಷೆ ಮೀನಾಕ್ಷಿ ಶಾಂತಿಗೋಡು, ವಿಧಾನ ಪರಿಷತ್ ಸದಸ್ಯರಾದ ಬಿ.ಎಂ ಫಾರೂಕ್, ಆಯನೂರು ಮಂಜುನಾಥ, ಎಸ್.ಎಲ್ ಬೋಜೇ ಗೌಡ, ಕೆ.ಹರೀಶ್ ಕುಮಾರ್, ಪ್ರತಾಪಸಿಂಹ ನಾಯಕ್, ತಾ.ಪಂ ಅಧ್ಯಕ್ಷ ರಾಧಾಕೃಷ್ಣ ಬೋರ್ಕರ್, ಜಿಲ್ಲಾಧಿಕಾರಿ ಡಾ. ರಾಜೇಂದ್ರ ಕೆ.ವಿ, ಕೃಷಿ ಮಾರಾಟ ಇಲಾಖೆಯ ನಿರ್ದೇಶಕ ಕರೀ ಗೌಡ, ತಾ.ಪಂ ಸ್ಥಾಯಿ ಸಮಿತಿ ಅಧ್ಯಕ್ಷ ಸಾಜ ರಾಧಾಕೃಷ್ಣ ಆಳ್ವ, ಕಡಬ ತಾ.ಪಂ ಅಧ್ಯಕ್ಷೆ ರಾಜೇಶ್ವರಿ ಕನ್ಯಾಮಂಗಳ ಆಗಮಿಸಲಿದ್ದಾರೆ ಎಂದು ಅವರು ಹೇಳಿದರು.

೭.೫೬ ಕೋಟಿ ಕಾಮಗಾರಿ ಉದ್ಘಾಟನೆ:
ರೂ.೧ಕೋಟಿ ವೆಚ್ಚದ ೧೦೦೦ ಮೆಟ್ರಿಕ್ ಟನ್ ಗೋದಾಮು, ರೂ.೪೮.೫೦ಲಕ್ಷದ ಸಿ.ಸಿ ರಸ್ತೆ ಮತ್ತು ಚರಂಡಿ, ರೂ.೩.೧೫ಕೋಟಿ ವೆಚ್ಚದ ಕಡಬ ಉಪ ಮಾರುಕಟ್ಟೆ ಪ್ರಾಂಗಣದ ವಿವಿಧ ಅಭಿವೃದ್ಧಿ, ೬೦ಸಿ ಯಲ್ಲಿ ೧೯ ಗ್ರಾಮೀಣ ಸಂಪರ್ಕ ರಸ್ತೆಗಳ ಅಭಿವೃದ್ಧಿ, ರೂ.೧೧.೮೦ಲಕ್ಷದ ಸಂಡ್ರಿಶಾಫ್ ಕಟ್ಟಡ, ರೂ.೩ಲಕ್ಷದಲ್ಲಿ ಕೊಂಬಾರು ಬೋಳ್ನಡ್ಕ-ಅರ್ದೇಲು-ಮುರುವಂಜಿ ರಸ್ತೆ ಅಭಿವೃದ್ಧಿ, ರೂ.೫ಲಕ್ಷದಲ್ಲಿ ಕೋಡಂಬಾಳ-ಮಜ್ಜಾರು-ಕಡವು ರಸ್ತೆ ಅಭಿವೃದ್ಧಿ, ರೂ.೩ಲಕ್ಷದಲ್ಲಿ ನೆಟ್ಟಣಿಗೆ ಮುಡ್ನೂರು ಸಾಂತ್ಯ, ಕೊಖಣಿಗುಂಡಿ ಪರಿಶಿಷ್ಟ ಜಾತಿ ರಸ್ತೆ ಅಭಿವೃದ್ಧಿ, ರೂ.೨.೫೦ಲಕ್ಷದಲ್ಲಿ ಕೊಣಾಲು ತಿರ್‍ಲೆ, ಪಾತೃಮಾಡಿ ಪರಿಶಿಷ್ಟ ಜಾತಿ ಮಿಸಲು ರಸ್ತೆ ಅಭಿವೃದ್ಧಿ, ರೂ.೧.೫೦ಕೋಟಿಯ ಮುಖ್ಯ ಮಾರುಕಟ್ಟೆ ಪ್ರಾಂಗಣದಲ್ಲಿ ಕಾಂಕ್ರೀಟ್ ರಸ್ತೆ, ಚರಂಡಿ ಹಾಗೂ ಇಂಟರ್‌ಲಾಕ್, ರೂ.೫೦ಲಕ್ಷದಲ್ಲಿ ಮುಖ್ಯ ಮಾರುಕಟ್ಟೆ ಪ್ರಾಂಗಣದ ಗೋಡೆಗಳಿಗೆ ಬಣ್ಣ, ಮೆಶ್, ರೂ.೮.೮೦ಲಕ್ಷದಲ್ಲಿ ಆಡಳಿತ ಕಚೇರಿ ಮುಂಭಾಗದ ಹೋತೋಟ, ರೂ.೬ಲಕ್ಷದಲ್ಲಿ ೪೦೦ಎಂ.ಟಿ ಗೋದಾಮು ಅಭಿವೃದ್ಧಿ, ರೂ.೧೫ಲಕ್ಷದಲ್ಲಿ ಆಡಳಿತ ಕಚೇರಿ ಅಭಿವೃದ್ಧಿ, ರೂ.೨೫ಲಕ್ಷದಲ್ಲಿ ಸಂತೆ ಮಾರುಕಟ್ಟೆ ಹಾಗೂ ಅದರ ಸುತ್ತಲಿನ ಅಂಗಡಿ ಮಳಿಗೆಗಳ ಅಭಿವೃದ್ಧಿ, ರೂ.೧೨ಲಕ್ಷದಲ್ಲಿ ೬೦ಸಿಯಲ್ಲಿ ಬಜತ್ತೂರು, ಕೊಂಬಾರು, ಬಂಟ್ರ, ನೂಜಿಬಾಳ್ತಿಲ, ಕುಂತೂರು ಮತ್ತು ಆಲಂಕಾರು ಗ್ರಾಮಗಳಲ್ಲಿ ಗ್ರಾಮೀಣ ಸಂಪರ್ಕ ರಸ್ತೆ ಅಭಿವೃದ್ಧಿ ಕಾಮಗಾರಿಗಳು ನಡೆದಿದ್ದು ಅದರ ಉದ್ಘಾಟನೆಗಳು ನಡೆಯಲಿದೆ ಎಂದು ದಿನೇಶ್ ಮೆದು ತಿಳಿಸಿದರು.

೨.೧೮ಕೋಟಿ ಕಾಮಗಾರಿ ಶಂಕುಸ್ಥಾಪನೆ:
ಮುಖ್ಯ ಪ್ರಾಂಗಣದಲ್ಲಿ ರೂ.೫೦ಲಕ್ಷದ ವಿದ್ಯುತ್ ಕಾಮಗಾರಿ, ರೂ.೧೦ಲಕ್ಷದ ಕಾರ್ಯದರ್ಶಿಯವರ ವಸತಿಗೃಹ ಅಭಿವೃದ್ಧಿ, ರೂ.೪೮ ಲಕ್ಷದಲ್ಲಿ ಕೆದಂಬಾಡಿ, ಬಲ್ನಾಡು, ಕೊಲ, ಬೆಟ್ಟಂಪಾಡಿ, ಕೊಳ್ತಿಗೆ, ಕುದ್ಮಾರು, ನೆಲ್ಯಾಡಿ, ಬೆಳ್ಳಿಪ್ಪಾಡಿ ಮತ್ತು ಸವಣೂರು ಗ್ರಾಮಗಳು, ರೂ.೬೦ಲಕ್ಷದಲ್ಲಿ ಅರಿಯಡ್ಕ, ನಿಡ್ಪಳ್ಳಿ, ಕುರಿಯ, ಸವಣೂರು, ಪುಣ್ಚಪ್ಪಾಡಿ, ಕೌಕ್ರಾಡಿ, ಉಪ್ಪಿನಂಗಡಿ, ಹಿರೇಬಂಡಾಡಿ, ಕೊಳ್ತಿಗೆ, ಬೆಳ್ಳಿಪ್ಪಾಡಿ, ಸರ್ವೆ, ಕೆಯ್ಯೂರು, ಕೆದಂಬಾಡಿ, ೧೦೨ನೆಕ್ಕಿಲಾಡಿ, ಐತ್ತೂರು, ಬಲ್ಯ, ಕಡಬ, ಮತ್ತು ಪೆರಾಬೆ ಗ್ರಾಮಗಳಲ್ಲಿ ಪರಿಶಿಷ್ಟ ಜಾತಿ, ಪಂಗಡ ಮೀಸಲು ಸಂಪರ್ಕ ರಸ್ತೆ ಅಭಿವೃದ್ಧಿ, ರೂ.೧೦Pಲಕ್ಷ ವೆಚ್ಚದಲ್ಲಿ ರೈತ ಸಭಾಭವನದ ಅಭಿವೃದ್ಧಿ, ಅದರ ಮುಂಭಾದ ಹಾಗೂ ಅತಿಥಿ ಗೃಹದ ಹಿಂಭಾಗ ಇಂಟರ್‌ಲಾಕ್ ಅಳವಡಿಕೆ, ರೂ.೨೩ಲಕ್ಷದ ಬ್ಯಾಂಕ್ ಕಟ್ಟಡ, ಅಂಚೆ ಕಚೇರಿ, ಹೊಸ ಕ್ಯಾಂಟೀನ್, ಜೀಪ್ ಶೆಡ್‌ಗಳ ಅಭಿವೃದ್ಧಿ, ರೂ.೧ಲಕ್ಷದ ಮುಖ್ಯ ರಸ್ತೆಯ ಬಳಿಯಿರುವ ಸ್ವಾಗತ ಕಮಾನು ದುರಸ್ಥಿ, ಹಾಗೂ ರೂ.೧೬ಲಕ್ಷದ ಕಡಬ ಉಪಮಾರುಕಟ್ಟೆ ಪ್ರಾಂಗಣದಲ್ಲಿ ಆಡಳಿತ ಕಚೇರಿ, ಶೌಚಾಲಯ ಸುತ್ತ ಇಂಟರ್ ಲಾಕ್ ಅಳವಡಿಸುವ ಕಾಮಗಾರಿಗಳಿಗೆ ಶಂಕುಸ್ಥಾಪನೆ ನಡೆಯಲಿದೆ ಎಂದು ಅಧ್ಯಕ್ಷರು ತಿಳಿಸಿದರು. ಸದಸ್ಯರಾದ ಬೂಡಿಯಾರ್ ರಾಧಾಕೃಷ್ಣ ರೈ ಹಾಗೂ ತೀರ್ಥಾನಂದ ದುಗ್ಗಳ ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.