HomePage_Banner
HomePage_Banner
HomePage_Banner
HomePage_Banner
HomePage_Banner
HomePage_Banner

ಹಾರಾಡಿ ವಿನೋದಿನಿ ಕೊಲೆ, ಚಿನ್ನಾಭರಣ ದರೋಡೆ ಪ್ರಕರಣ- ಅಪರಾಧಿ ಲಕ್ಷ್ಮಣ ನಾಯ್ಕಗೆ ಜೀವಾವಧಿ ಶಿಕ್ಷೆ

Puttur_Advt_NewsUnder_1
Puttur_Advt_NewsUnder_1
‌                                                          ಅಪರಾಧಿ ಲಕ್ಷ್ಮಣ ನಾಯ್ಕ್

 

                                              ಮೃತೆ ವಿನೋದಿನಿ

ಪುತ್ತೂರು: 2016ರಲ್ಲಿ ಹಾರಾಡಿಯ ಬಾಡಿಗೆ ಮನೆಯಲ್ಲಿದ್ದ ಒಂಟಿ ವೃದ್ಧೆ ವಿನೋದಿನಿ(77ವ)ಯವರನ್ನು ಕೊಲೆಗೈದು ಚಿನ್ನಾಭರಣ ದೋಚಿಕೊಂಡು ಹೋಗಿದ್ದ ಪ್ರಕರಣದ ಅಪರಾಧಿಯಾಗಿರುವ ಕರೋಪಾಡಿಯ ಲಕ್ಷ್ಮಣ ನಾಯ್ಕಗೆ ಜಿಲ್ಲಾ ಸೆಷನ್ಸ್ ನ್ಯಾಯಾಲಯ ಜೀವಾವಧಿ ಶಿಕ್ಷೆ, ದಂಡ ವಿಧಿಸಿ ಆದೇಶಿಸಿದೆ.
ದುಷ್ಕರ್ಮಿಗಳು ವಿನೋದಿನಿಯವರ ಕೈ, ಕಾಲು, ಮುಖವನ್ನು ಬಟ್ಟೆಯಿಂದ ಕಟ್ಟಿ ಕೊಲೆ ಮಾಡಿ ಅವರ ಕುತ್ತಿಗೆ ಮತ್ತು ಕಿವಿಯಲ್ಲಿದ್ದ ಸುಮಾರು ರೂ.50 ಸಾವಿರ ಮೌಲ್ಯದ 30 ಗ್ರಾಂಗಳಷ್ಟು ತೂಕದ ಚಿನ್ನಾಭರಣವನ್ನು ದೋಚಿಕೊಂಡು ಮೃತದೇಹವನ್ನು ಸ್ಥಳದಲ್ಲಿಯೇ ಬಿಟ್ಟು ಮುಂಬಾಗಿಲಿಗೆ ಬೀಗವನ್ನು ಹಾಕಿ ಹೋಗಿದ್ದ ಕುರಿತು ಮೃತರ ಮಗಳು ಮೈತ್ರಿ ನಾಯಕ್‌ರವರು ನೀಡಿದ ದೂರಿನಂತೆ ಪುತ್ತೂರು ನಗರ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದರು.ವಿನೋದಿನಿಯವರ ಮೃತದೇಹ 2016ರ ದಶಂಬರ್ 29ರಂದು ಹಾರಾಡಿ ಮನೆಯೊಳಗಡೆ ಪತ್ತೆಯಾಗಿತ್ತು.ಪ್ರಕರಣವನ್ನು ಯಾರೋ ಪರಿಚಿತರೆ ಮಾಡಿರುವ ಸಾಧ್ಯತೆ ಕುರಿತು ಸಂಶಯ ಹೊಂದಿ ತನಿಖೆ ನಡೆಸಿದ್ದ ಪೊಲೀಸರು ಮೃತ ವಿನೋದಿನಿಯವರ ಮನೆಗೆ ಬಂದು ಹೋಗುತ್ತಿದ್ದ ವ್ಯಕ್ತಿಗಳು ಮತ್ತು ಸಂಬಂಧಿಕರ ಬಗ್ಗೆ ಕೂಲಂಕುಷವಾಗಿ ಪರಿಶೀಲಿಸಿ ತನಿಖೆ ಮಾಡುತ್ತಿರುವ ವೇಳೆ ಬಂಟ್ವಾಳ ತಾಲೂಕಿನ ಕರೋಪಾಡಿ ಗ್ರಾಮದ ಮಿತ್ತನಡ್ಕ ನಿವಾಸಿ ಲಕ್ಷ್ಮಣ ನಾಯಕ್(32ವ)ರವರು ದ.23ಕ್ಕೆ ಸಂಜೆ ವೇಳೆ ವಿನೋದಿನಿಯವರ ಮನೆಗೆ ಬಂದು ಹೋಗಿದ್ದ ಬಗ್ಗೆ ಸ್ಥಳೀಯವಾಗಿ ಮಾಹಿತಿ ಕಲೆ ಹಾಕಲಾಗಿತ್ತು.ಈ ನಿಟ್ಟಿನಲ್ಲಿ ಲಕ್ಷ್ಮಣ ನಾಯಕ್‌ರವರನ್ನು ಪುತ್ತೂರು ಕೆ.ಎಸ್.ಆರ್.ಟಿ.ಸಿ ಬಸ್ ನಿಲ್ದಾಣದ ಬಳಿ ಪತ್ತೆ ಮಾಡಿ ಕೂಲಂಕುಷವಾಗಿ ವಿಚಾರಿಸಿದಾಗ ತಾನೇ ಈ ಕೃತ್ಯ ಸಂಜೆ ನಡೆಸಿರುವುದಾಗಿ ಒಪ್ಪಿಕೊಂಡಿದ್ದ.ಕೊಲೆ ಮಾಡಿ ಆಕೆಯಿಂದ ದೋಚಿದ ಚಿನ್ನ ಮತ್ತು ಕೊಲೆಮಾಡಲು ಉಪಯೋಗಿಸಿದ ಕತ್ತಿಯನ್ನು ಪೊಲಿಸರು ವಶಪಡಿಸಿಕೊಂಡಿದ್ದರು.ಆರೋಪಿಯನ್ನು ಪೊಲೀಸರು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದರು.ಪ್ರಕರಣದ ವಿಚಾರಣೆ ನಡೆಸಿದ ಪುತ್ತೂರಿನ ಐದನೇ ಹೆಚ್ಚುವರಿ ಜಿಲ್ಲಾ ಸೆಷನ್ಸ್ ನ್ಯಾಯಾಲಯದ ನ್ಯಾಯಾಧೀಶ ರುಡಾಲ್ಫ್ ಪಿರೇರಾ ಅವರು ಆರೋಪಿ ಲಕ್ಷ್ಮಣ ನಾಯ್ಕ ಅವರ ಮೇಲಿನ ಆರೋಪ ಸಾಬೀತಾಗಿದೆ ಎಂದು ತೀರ್ಪು ನೀಡಿದ್ದಾರೆ.ಅಪರಾಧಿಗೆ ಕೊಲೆ ಅಪರಾಧಕ್ಕಾಗಿ ಜೀವಾವಧಿ ಶಿಕ್ಷೆ ಮತ್ತು 10 ಸಾವಿರ ರೂ.ದಂಡ, ದರೋಡೆ ಅಪರಾಧಕ್ಕಾಗಿ 10 ವರ್ಷ ಜೈಲು ಶಿಕ್ಷೆ ಮತ್ತು 10 ಸಾವಿರ ರೂ.ದಂಡ ವಿಧಿಸಿ ಆದೇಶಿಸಲಾಗಿದೆ.ಎರಡೂ ಅಪರಾಧಗಳಿಗೆ ಸಂಬಂಧಿಸಿ ದಂಡ ತೆರಲು ತಪ್ಪಿದಲ್ಲಿ ಹೆಚ್ಚುವರಿಯಾಗಿ 4 ತಿಂಗಳ ಸೆರೆಮನೆ ವಾಸ ಶಿಕ್ಷೆ ಅನುಭವಿಸುವಂತೆ ಆದೇಶದಲ್ಲಿ ತಿಳಿಸಲಾಗಿದೆ.ದಂಡದ ಹಣದಲ್ಲಿ ರೂ.15 ಸಾವಿರವನ್ನು ಮೃತರ ಪುತ್ರಿ ಮೈತ್ರಿ ನಾಯಕ್ ಅವರಿಗೆ ನೀಡುವಂತೆಯೂ ಆದೇಶದಲ್ಲಿ ತಿಳಿಸಲಾಗಿದೆ.ಈ ಪ್ರಕರಣದಲ್ಲಿ ಪ್ರಾಸಿಕ್ಯೂಶನ್ ಪರ ಸರಕಾರಿ ಅಭಿಯೋಜಕರಾಗಿರುವ ಕೃಷ್ಣವೇಣಿ ವಾದಿಸಿದ್ದರು.ಬಂಧಿತನಾಗಿ ನ್ಯಾಯಾಂಗ ಬಂಧನದಲ್ಲಿರುವ ಲಕ್ಷ್ಮಣ ನಾಯ್ಕ ಚಿಕ್ಕಮಗಳೂರು ಜೈಲಲ್ಲಿದ್ದಾರೆ.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.