HomePage_Banner
HomePage_Banner
HomePage_Banner
HomePage_Banner
HomePage_Banner
HomePage_Banner

ಅಲ್ಪಸಂಖ್ಯಾತ ಮೌಲಾನಾ ಅಜಾದ್ ಆಂಗ್ಲಮಾಧ್ಯಮ ಶಾಲೆಗೆ ಮಂಜೂರಾದ ಸ್ಥಳ ರದ್ದುಪಡಿಸುವಂತೆ ಆಗ್ರಹ – ಮನವಿ

Puttur_Advt_NewsUnder_1
Puttur_Advt_NewsUnder_1
  • ಸ್ಥಳೀಯರಿಂದ ಶಂಕುಸ್ಥಾಪನೆ ದಿನ ಪ್ರತಿಭಟನೆ ಎಚ್ಚರಿಕೆ


ಪುತ್ತೂರು: ಬೆದ್ರಾಳ ಮತ್ತು
ಕಾಡುಮನೆ ಸಮೀಪ ಅಲ್ಪಸಂಖ್ಯಾತ ಮೌಲನಾ ಅಜಾದ್ ಆಂಗ್ಲಮಾಧ್ಯಮ ಶಾಲೆಗೆ ಮಂಜೂರಾದ ಸ್ಥಳವನ್ನು ರದ್ದು ಪಡಿಸುವಂತೆ ಆಗ್ರಹಿಸಿ ಸಾರ್ವಜನಿಕ ಹಿತಾಸಕ್ತಿ ಅರ್ಜಿಯೊಂದನ್ನು ಸ್ಥಳೀಯರು ಸೇರಿ ಶಾಸಕರಿಗೆ, ಸಹಾಯಕ ಆಯುಕ್ತರಿಗೆ, ತಹಶೀಲ್ದಾರಿಗೆ, ಪೌರಾಯುಕ್ತರಿಗೆ ನೀಡಿದ್ದಾರೆ. ಸ್ಥಳವನ್ನು ರದ್ದು ಪಡಿಸದಿದ್ದಲ್ಲಿ ಶಂಕುಸ್ಥಾಪನೆ ದಿನ ಅದೇ ಸ್ಥಳದಲ್ಲಿ ಪ್ರತಿಭಟನೆ ಮಾಡಲಿದ್ದೇವೆ ಎಂದು ಎಚ್ಚರಿಕೆ ನೀಡಿದ್ದಾರೆ. ಅ.3ರಂದು ಶಾಲೆಯ ಕಟ್ಟಡ ನಿರ್ಮಾಣಕ್ಕೆ ಶಂಕುಸ್ಥಾಪನೆ ನೆರವೇರಲಿದೆ ಎಂದು ಸುದ್ದಿ ಪತ್ರಿಕೆಯಲ್ಲಿ ನೋಡಿ ಮಾಹಿತಿ ಪಡೆದು ಕೊಂಡಿದ್ದೇವೆ. ಆದರೆ ಈ ಶಾಲೆಯ ಸ್ಥಳವನ್ನು  1968-69ರಂದು ಸರ್ವೆ ನಂಬ್ರ 55/1ಎ, ಡಿಪಿ2. ವಿಸ್ತೀರ್ಣ 81 ಸೆಂಟ್ಸ್ ಜಾಗವನ್ನು ಬೆದ್ರಾಳದ ದಿ.ವೆಂಕಟ್ರಮಣ ಭಟ್ ಅವರ ಪುತ್ರ ದಿ.ಮಹಾಲಿಂಗ ಭಟ್ರ್‌ವರು ಬೆದ್ರಾಳ ಹಿ.ಪ್ರಾ.ಶಾಲೆಗೆ ಭೂಮಿಯನ್ನು ದಾನವಾಗಿ ನೀಡಿದ್ದರು. ತದನಂತರ ಊರಿನವರ ಸಹಾಯದಿಂದ ಕೆಮ್ಮಿಂಜೆ, ನರಿಮೊಗ್ರು, ಚಿಕ್ಕಮುಡ್ನೂರು ಗ್ರಾಮ ಸಹಾಯದಿಂದ ಶಾಲೆ ನಿರ್ಮಾಣಗೊಂಡು ಮಕ್ಕಳ ವಿದ್ಯಾಭ್ಯಾಸಕ್ಕೆ ತುಂಬಾ ಅನುಕೂಲಕರಾವಾಯಿತು. ಕೂರ್ನಡ್ಕದಿಂದ ಬೆದ್ರಾಳದ ತನಕ ಅರ್ಧ ಕಿ.ಮೀಗೆ ಒಂದರಂತೆ ಮುಸ್ಲಿಂರ 2 ಮಸೀದಿ, 2 ಮದರಾಸ ಶಾಲೆಗಳಿವೆ. ಮುಂದೆ ಈ ಶಾಲೆಯನ್ನು ಯಾವ ಕಾರಣಕ್ಕೂ ಅಲ್ಪಸಂಖ್ಯಾತ ಮೌಲನ ಅಜಾದ್ ಆಂಗ್ಲಮಾಧ್ಯಮ ಶಾಲೆಗಾಗಿ ಮಂಜೂರಾದ ಸ್ಥಳ ಮತ್ತು ಶಾಲೆಯನ್ನು ಮಂಜೂರು ಮಾಡಬಾರದು. ಮಂಜೂರು ಮಾಡಿದ್ದರೆ ಅದನ್ನು ರದ್ದುಪಡಿಸಬೇಕು. ಬೆದ್ರಾಳ ಶಾಲೆಯನ್ನು ಸಾರ್ವಜನಿಕ ಶಾಲೆಯಾಗಿ ಅಥವಾ ಇತರ ಸರಕಾರಿ ಇಲಾಖೆಗೆ ನೀಡುವುದರಲ್ಲಿ ನಮ್ಮ ಆಕ್ಷೇಪ ಇರುವುದಿಲ್ಲ ಎಂದು ಮನವಿಯಲ್ಲಿ ತಿಳಿಸಿದ ಅವರು ನಮ್ಮ ಮನವಿಗೆ ಸ್ಪಂಧಿಸದಿದ್ದಲ್ಲಿ ಶಂಕುಸ್ಥಾಪನೆಯ ಸಂದರ್ಭ ನಾವು ಧರಣಿ ಕುಳಿತುಕೊಳ್ಳಲಿದ್ದೇವೆ ಎಂದು ಎಚ್ಚರಿಸಿದ್ದಾರೆ. ಸ್ಥಳೀಯರಾದ ಸೂರ್ಯ ಮರೀಲ್, ಕಿರಣ್, ಹರ್ಷಿತ್, ಸಂದೀಪ್, ರಾಜ, ವೇಣು, ರಾಧಾಕೃಷ್ಣ, ದೀಪಕ್, ಪ್ರಕಾಶ್ ಅವರು ಮನವಿ ನೀಡುವ ಸಂದರ್ಭ ಉಪಸ್ಥಿರಿದ್ದರು.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.