HomePage_Banner
HomePage_Banner
HomePage_Banner
HomePage_Banner
HomePage_Banner
HomePage_Banner

ವಾಸ್ತವತೆಗೆ ಹತ್ತಿರವಾದ ಬದುಕು ಕಂಡ ಮಹಾತ್ಮ..! ಇಂದು ಗಾಂಧಿ ಜಯಂತಿ

Puttur_Advt_NewsUnder_1
Puttur_Advt_NewsUnder_1

ಮಹಾತ್ಮ ಗಾಂಧೀಜಿಯವರು ಅಂದು, ಇಂದು, ಮುಂದು, ಎಂದೆಂದೂ ಕೂಡ ಪ್ರಸ್ತುತ. ಕಾರಣ ಅವರ ಪಾರದರ್ಶಕ, ನೈತಿಕ ಬದುಕು, ಪ್ರಾಮಾಣಿಕತೆ, ಸರಳತೆ, ಸತ್ಯಸಂಧತೆ, ಅಹಿಂಸೆ, ಅಪರಿಗ್ರಹ, ಬ್ರಹ್ಮಚರ್ಯ ಹೀಗೆ ಅವರ ವ್ಯಕ್ತಿತ್ವ ಅನೇಕ ಮಜಲುಗಳಲ್ಲಿ ಬೆಳಗುತ್ತಾ ಸಾಗುತ್ತದೆ. ಅವರ ಪ್ರಕಾರ ಎಲ್ಲರ ಹಿತಸಾಧನೆಯನ್ನು ಶಕ್ತಿಮೀರಿ ಸಾಧಿಸುವ ಸರ್ಕಾರವೇ ಶ್ರೇಷ್ಠ, ಮಾನವೀಯ ನೆಲೆಗಟ್ಟಿನಲ್ಲಿ ಇಂತಹ ಸರ್ಕಾರ ಸ್ಥಾಪಿತವಾಗಬೇಕಾದರೆ, ಪ್ರತಿಯೊಬ್ಬ ಪ್ರಜೆಯೂ ತನ್ನ ಸ್ವಾರ್ಥದಿಂದ ಹೊರಗೆ ಬರಬೇಕು. ಭಾರತದ ಸ್ವಾತಂತ್ರ್ಯವೇ ಗಾಂಧೀಜಿಯವರ ಕೊನೆಯ ಧೈಯವಾಗಿರಲಿಲ್ಲ. ಸ್ವಾತಂತ್ರ್ಯವೆನ್ನುವುದು ಭಾರತಕ್ಕೆ ಒಂದು ಮೊದಲನೆ ಹೆಜ್ಜೆ. ಈ ಸ್ವಾತಂತ್ರ್ಯದಿಂದ ಜನಜಾಗೃತಿ ಬೆಳೆದು, ಹೊಸ ಸಮಾಜ ಮತ್ತು ಮಾನವತ್ವ ಭಾರತದಲ್ಲಿ ಉದ್ಬವಿಸಬೇಕೆಂದು ಅವರ ಆಸೆ ಆಕಾಂಕ್ಷೆಗಳಾಗಿದ್ದವು. ಇದೇ ಅವರ ಕನಸಿನ ಭಾರತವಾಗಿತ್ತು ಮತ್ತು ಅವರು ರಚಿಸಿದ ರಾಜಕೀಯ ತತ್ವಗಳ ಧ್ಯೇಯವೂ ಅದೇ ಆಗಿತ್ತು.

ನಮ್ಮ ಮಾತೃಭೂಮಿಯನ್ನು ವಿದೇಶಿಗರ ದಾಸ್ಯಸಂಕೋಲೆಯಿಂದ ವಿಮೋಚನೆಗೊಳಿಸಿ ಮಹಾತ್ಮ ಗಾಂಧೀಜಿ ರಾಷ್ಟ್ರಪಿತರಾದರು. ಭಾರತದ ಸ್ವಾತಂತ್ರ್ಯ ನನ್ನ ಸತ್ಯಾನ್ವೇಷಣೆಯ ದಾರಿ. ಭಾರತದ ಆತ್ಮಗೌರವ, ಮಾನ ಮತ್ತು ಮರ್ಯಾದೆಗಳ ಸಂಕೇತ. ಸ್ವತಂತ್ರರಾಗದೆ ಬಾಳುವುದಕ್ಕಿಂತ ಭಾರತವು ಮಡಿಯುವುದೇ ಮೇಲು ಎಂದು ಗಾಂಧೀಜಿಯವರು ಪರಿಗಣಿಸಿದ್ದರು. ಈ ಸ್ವಾತಂತ್ರ್ಯಕ್ಕಾಗಿ ಅನುಸರಿಸಿದ ಸತ್ಯ, ಅಹಿಂಸಾಮಾರ್ಗ ಇವರ ಹಿರಿಮೆಯನ್ನು ತೋರಿಸುತ್ತದೆ. ಇತಿಹಾಸದಲ್ಲಿ ಹಿಂದೆಂದೂ ಕೇಳರಿಯದ ಮತ್ತು ಕಂಡರಿಯದ ನೂತನ ಮಾರ್ಗ. ಬಹುಶಃ ಇತಿಹಾಸದಲ್ಲಿ ಇದೇ ಮೊದಲನೆಯ ಪ್ರಯೋಗವೆಂದರೆ ತಪ್ಪಾಗಲಾರದು. ಇದೇ ಗಾಂಧೀಜಿಯವರ ವೈಶಿಷ್ಟ್ಯ.

ಈ ಮಹಾನಾಯಕನ ನೇತೃತ್ವದಲ್ಲಿ ನಡೆದ ಸತ್ಯ, ಅಹಿಂಸಾ ಮಾರ್ಗಗಳಿಂದ ಕೂಡಿದ ರಾಷ್ಟ್ರೀಯ ಚಳುವಳಿ ಮತ್ತು ಘಟನೆಗಳು ಭಾರತೀಯರಲ್ಲಿ ಒಂದು ನವಚೇತನವನ್ನುಂಟು ಮಾಡಿದುದಲ್ಲದೆ, ಈ ಸಾಧನೆಗಳ ಪರಿಣಾಮವಾಗಿ ಹೊಸ ರಾಜಕೀಯ ನೀತಿ ಮತ್ತು ತತ್ವಗಳೂ ಉದ್ಬವಿಸಲು ಸಹಾಯಕವಾಯಿತು. ಬಹುಶ: ಗಾಂಧೀಜಿಯವರು ಈ ಪರ್ವಕಾಲದಲ್ಲಿ ಪ್ರವೇಶಿಸಿದರೆ ಏನಾಗುತ್ತಿತ್ತೋ ಎಂಬ ಶಂಕೆಯೂ ಕೂಡ ನಮ್ಮಲ್ಲಿ ಬರುವುದು ಸಹಜ. ಗಾಂಧೀಜಿಯವರ ಸತ್ಯ ಮತ್ತು ಅಹಿಂಸೆಯ ಸಿದ್ದಾಂತ ಭಾರತಕ್ಕೆ ಮಾತ್ರ ಸೀಮಿತವಾಗಿರಲಿಲ್ಲ, ವಾಸ್ತವವಾಗಿ ಇಡೀ ಜಗತ್ತು ಅವರನ್ನು ಮತ್ತು ಅವರ ಬೋಧನೆಗಳನ್ನು ಅನುಸರಿಸುತ್ತದೆ. ಹಾಗಾಗಿ ಅವರ ಆಲೋಚನೆಗಳು ಸದಾ ಜನರ ಹೃದಯದಲ್ಲಿ ನೆಲೆಸಿರುತ್ತದೆ.

ಮಹಾತ್ಮ ಗಾಂಧೀಜಿ ಕೇವಲ ಒಬ್ಬ ವ್ಯಕ್ತಿಯಾಗಿರದೆ ಒಂದು ಮಹಾನ್ ಶಕ್ತಿಯಾಗಿದ್ದರು. ಅವರು ಇಡೀ ಮಾನವ ಕೋಟಿಯನ್ನು ಬಹಳವಾಗಿ ಪ್ರೀತಿಸುತ್ತಿದ್ದರು. ಜನರ ಕಲ್ಯಾಣಕ್ಕಾಗಿ, ಸ್ವಾತಂತ್ರ್ಯಕ್ಕಾಗಿ, ನೆಮ್ಮದಿ ಜೀವನಕ್ಕಾಗಿ ಸದಾ ಹಂಬಲಿಸುತ್ತಿದ್ದರು. ಪರಿಶ್ರಮ ಪ್ರವೃತ್ತಿಯುಳ್ಳವರಾಗಿ ಸತತ ದುಡಿಯಬೇಕೆಂದ ಅವರು ನುಡಿದಂತೆ ನಡೆದು ಮೇಲ್ಪಂಕ್ತಿ ಹಾಕಿಕೊಟ್ಟರು.

ಅಂತಹ ಮಹಾತ್ಮರ ನಡೆ ನುಡಿಗಳನ್ನು ಪರಿಪಾಲಿಸಿದ್ದಲ್ಲಿ ಪ್ರತಿಯೊಬ್ಬ ಭಾರತೀಯನು ಸಭ್ಯ ಹಾಗೂ ಸತ್ಪ್ರಜೆಯಾಗಿ ಬಾಳಬಹುದು. ಗಾಂಧೀಜಿಯು ಇಟ್ಟ ಪ್ರತಿ ಸಾಧನೆಯ ಹಾದಿಗಳು ದುರ್ಗಮವಾದುದು. ಅಂತಹ ಎಲ್ಲ ದುರ್ಗಮ ಹಾದಿಗಳನ್ನು ದಾಟಿ ಮಹಾತ್ಮರಾದರು. ಬರೀ ಓದು ಅಲ್ಲ, ಅದರ ಹಿಂದೆ ಕಷ್ಟಕರ ಪರಿಶ್ರಮ, ಸರಳ ಜೀವನ, ಬ್ರಹ್ಮಚರ್ಯ, ಉಪವಾಸದಂತಹ ಕಠಿಣವೆನಿಸುವ ವ್ಯಕ್ತಿತ್ವದ ಪರಿಕಲ್ಪನೆಗಳಿವೆ. ಅವುಗಳೊಂದಿಗೆ ಸಹಬಾಳ್ವೆ ನಡೆಸುತ್ತಾ, ಸಾರ್ವಕಾಲಿಕ ಸತ್ಯಪೂರಿತ ಮೌಲ್ಯಗಳನ್ನು ಮೈಗೂಡಿಸಿಕೊಂಡ ನೈತಿಕತೆ, ಸರಳತೆಯ ಸಾಧನೆಗಳು ಇಂದೂ ಸಹ ಪ್ರತಿಯೊಬ್ಬ ಭಾರತೀಯನಿಗೂ ಪ್ರಸ್ತುತ ಹಾಗೂ ಅತ್ಯಂತ ಅಗತ್ಯ ಕೂಡ. ಹಾಗಾಗಿಯೇ ಗಾಂಧೀಜಿಯವರು ವಾಸ್ತವತೆಯ ಬದುಕು ಕಂಡ ಮಹಾತ್ಮ ಎಂತಲೂ ಕರೆಯಬಹುದು. ಗಾಂಧೀಜಿಯ ಅಂತರಂಗವನ್ನು ಅರ್ಥಮಾಡಿಕೊಳ್ಳುವ ಪ್ರಯತ್ನಗಳನ್ನು ಮಾಡಿದಾಗ ಅವರು ಎಂದೆಂದೂ ಪ್ರಸ್ತುತವಾಗುತ್ತಾರೆ ಮತ್ತು ಮತ್ತೆ ಮತ್ತೆ ನೆನಪಾಗುತ್ತಾರೆ.

ಮತ್ತೆ ಮತ್ತೆ ನೆನಪಾಗುವ ಗಾಂಧೀಜಿಗೊಂದು ನಮನ..
ಇಂದು ಮಹಾತ್ಮ ಗಾಂಧೀಜಿಯವರ ೧೫೧ನೇ ಜನ್ಮದಿನವನ್ನು ಆಚರಿಸುವ ನಮಗೆ ಅವರ ರಾಜಕೀಯ ಕ್ಷೇತ್ರದಲ್ಲಿ ಮಾಡಿದ ಸೇವೆಗೆ ನಾವು ಕೃತಜ್ಞತೆಯನ್ನು ಸಲ್ಲಿಸುವುದು, ಅವರು ಬೋಧಿಸಿದ ರಾಜಕೀಯ ತತ್ವಗಳನ್ನು ಜ್ಞಾಪಿಸಿಕೊಳ್ಳುವುದು ನಮ್ಮ ಪವಿತ್ರ ಕರ್ತವ್ಯ. ನಮ್ಮ ನಾಡಿನ ಕಪ್ಪು ಹಣೆಬರಹವನ್ನೇ ಸತ್ಯ ಮತ್ತು ಅಹಿಂಸೆಗಳೆಂಬ ಅಪೂರ್ವ ಆಯಧಗಳನ್ನು ಬಳಸಿ ಶಾಶ್ವತವಾಗಿ ಅಳಿಸಿ, ಪ್ರಜ್ವಲವಾದ ಬೆಳಕಿನಿಂದ ಕೂಡಿದ ಉಜ್ವಲ ಭವಿಷ್ಯವನ್ನು ಪ್ರತಿಷ್ಟಾಪಿಸಿದ ಮಹಾನ್ ನಾಯಕನ ಆರಾಧನೆ ಮಾಡುತ್ತೇವೆ.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.