HomePage_Banner
HomePage_Banner
HomePage_Banner
HomePage_Banner
HomePage_Banner
HomePage_Banner

ಉಪ್ಪಿನಂಗಡಿ: ಕೈನೆಟಿಕ್‌ಗೆ ವಾಹನ ಡಿಕ್ಕಿ ಹೊಡೆದು ಪರಾರಿ ಬೇಂಗಿಲ ನಿವಾಸಿ ಮಹಮ್ಮದ್ ಆರಿಫ್ ಮೃತ್ಯು

Puttur_Advt_NewsUnder_1
Puttur_Advt_NewsUnder_1

ಉಪ್ಪಿನಂಗಡಿ: ಇಲ್ಲಿನ ಎಚ್.ಎಂ. ಆಡಿಟೋರಿಯಂ ಬಳಿಯಲ್ಲಿ ಕೈನೆಟಿಕ್‌ವಾಹನಕ್ಕೆ ಇನ್ನೊಂದು ವಾಹನ ಡಿಕ್ಕಿ ಹೊಡೆದು ಸಂಭವಿಸಿದ ಅಪಘಾತದಲ್ಲಿ ಕೈನೆಟಿಕ್ ಸವಾರ ತಲೆಗೆ ಗಾಯಗೊಂಡು ಸ್ಥಳದಲ್ಲೇ ಮೃತಪಟ್ಟಿದ್ದು, ಕೈನೆಟಿಕ್‌ಗೆ ಡಿಕ್ಕಿ ಹೊಡೆದ ವಾಹನ ನಿಲ್ಲಿಸದೆ ಪರಾರಿ ಆಗಿರುವುದಾಗಿ ತಿಳಿದು ಬಂದಿದೆ.

ಮೃತಪಟ್ಟಿರುವ ಕೈನೆಟಿಕ್ ಸವಾರ ಬಾರ್‍ಯ ಗ್ರಾಮದ ಬೇಂಗಿಲ ತುಂಬೆತ್ತಡ್ಕ ನಿವಾಸಿ ಅಬೂಬಕ್ಕರ್ ಎಂಬವರ ಪುತ್ರ ಮಹಮ್ಮದ್ ಆರಿಫ್ ಯಾ ಮುಸ್ತಫಾ (೨೩ ವ.) ಎಂಬವರಾಗಿರುತ್ತಾರೆ.

ಮಹಮ್ಮದ್ ಆರಿಫ್ ಉಪ್ಪಿನಂಗಡಿ ಕಡೆಯಿಂದ ಕರಾಯ ಕಡೆಗೆ ತನ್ನ ಕೈನೆಟಿಕ್ ವಾಹನದಲ್ಲಿ ಹೋಗುತ್ತಿದ್ದಾಗ ಬೆಳ್ತಂಗಡಿ ಕಡೆಯಿಂದ ಉಪ್ಪಿನಂಗಡಿ ಕಡೆಗೆ ಬರುತ್ತಿದ್ದ ಯಾವುದೋ ವಾಹನ ಡಿಕ್ಕಿ ಹೊಡೆದು ಈ ಅವಘಡ ಸಂಭವಿಸಿದೆ. ಡಿಕ್ಕಿ ಹೊಡೆದ ವಾಹನ ಅಲ್ಟೋ ಕಾರು ಎಂದು ಹೇಳಲಾಗಿದ್ದು, ಅದು ನಿಲ್ಲಿಸದೆ ಪರಾರಿ ಆಗಿರುವುದಾಗಿ ಪೊಲೀಸರು ತಿಳಿಸಿದ್ದಾರೆ. ಮಹಮ್ಮದ್ ಆರಿಫ್ ಉಪ್ಪಿನಂಗಡಿಯಲ್ಲಿ ಬಟ್ಟೆ ಅಂಗಡಿಯೊಂದರಲ್ಲಿ ಕಳೆದ ೨ ವರ್ಷಗಳಿಂದ ಸೇಲ್ಸ್ ಮೆನ್ ಆಗಿ ಕೆಲಸದಲ್ಲಿ ಇದ್ದು, ಬುಧವಾರ ಮತ್ತು ಗುರುವಾರ ತನ್ನ ಸಂಬಂಧಿಕರ ಮನೆಯಲ್ಲಿ ಕಾರ್‍ಯಕ್ರಮ ಇದ್ದ ಕಾರಣ ಕೆಲಸಕ್ಕೆ ರಜೆ ಹಾಕಿದ್ದರು ಎಂದು ಹೇಳಲಾಗಿದ್ದು, ಸಂಜೆ ಪೇಟೆಗೆ ಬಂದಿದ್ದ ಆತ ಬೇಕರಿ ವಸ್ತುಗಳನ್ನು ಮತ್ತು ಫ್ರೂಟ್‌ಗಳನ್ನು ಖರೀದಿಸಿ ಮನೆಗೆ ಹೋಗುವಾಗ ಎದುರಿನಿಂದ ಬಂದ ಕಾರು ಡಿಕ್ಕಿ ಹೊಡೆದು ಈ ಅವಘಡ ಸಂಭವಿಸಿದೆ. ಸ್ಥಳಕ್ಕೆ ಸಂಚಾರಿ ಪೊಲೀಸರು ಭೇಟಿ ನೀಡಿ ಪ್ರಕರಣ ದಾಖಲಿಸಿದ್ದಾರೆ.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.