ನಿಡ್ಪಳ್ಳಿ: ಕೊರೋನಾ ರೋಗ ತೊಲಗಲು ದೇವರಿಗೆ ಮೊರೆ-  ವಿಶೇಷ ಧನ್ವಂತರಿ ಪೂಜೆ

Puttur_Advt_NewsUnder_1
Puttur_Advt_NewsUnder_1
 
ನಿಡ್ಪಳ್ಳಿ: ಇಡೀ ಜಗತ್ತನ್ನೇ ಆವರಿಸಿ ಅಸಂಖ್ಯಾತ ಜನರ ಜೀವ ಪಡೆದ ಮಾಹಾಮಾರಿ ಕೊರೋನಾ ರೋಗ ತೊಲಗಿ ಲೋಕ ಕಲ್ಯಾಣವಾಗುವ ದೃಷ್ಟಿಯಿಂದ ಹವ್ಯಕ ವಲಯ ಬೆಟ್ಟಂಪಾಡಿ ಇದರ ವತಿಯಿಂದ ನಿಡ್ಪಳ್ಳಿ ಶ್ರೀ ಶಾಂತದುರ್ಗಾ ದೇವಸ್ಥಾನದಲ್ಲಿ ಅ.1 ರಂದು ವಿಶೇಷ ಧನ್ವಂತರಿ ಪೂಜೆ ನಡೆಸಿ ಪ್ರಾರ್ಥನೆ ಸಲ್ಲಿಸಲಾಯಿತು. ಶ್ರೀ ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿಗಳ ನಿರ್ದೇಶನದಂತೆ ಬೆಳಿಗ್ಗೆ ಗಣಪತಿ ಹವನ ನಂತರ ಧನ್ವಂತರಿ ಪೂಜೆ ಸಲ್ಲಿಸಿ ರೋಗ ತೊಲಗಿ ಲೋಕ ಕಲ್ಯಾಣವಾಗುವಂತೆ ದೇವರಲ್ಲಿ ಪ್ರಾರ್ಥಿಸಿ ಪ್ರಸಾದ ವಿತರಣೆ ನಂತರ ಅನ್ನಸಂತರ್ಪಣೆ ನಡೆಯಿತು.


ನವೋದಯ ಪ್ರೌಢಶಾಲೆಯ ನಿವೃತ್ತ ಮುಖ್ಯ ಗುರು ಸಂಸ್ಕ್ರತ ವಿದ್ವಾಂಸ ವೆಂಕಟ್ರಮಣ ಭಟ್ ಮಂಜುಳ ಗಿರಿ ಪೂಜೆಯ ಮಹತ್ವದ ಬಗ್ಗೆ ಉಪನ್ಯಾಸ ನೀಡಿದರು.  ಪುರೋಹಿತ ವೆಂಕಟ್ರಮಣ ಭಟ್ ಬೆಟ್ಟಂಪಾಡಿ ಪೂಜಾ ವಿಧಿ ವಿಧಾನಗಳನ್ನು ನೆರವೇರಿಸಿದರು. ಹವ್ಯಕ ವಲಯ ಸಮಿತಿ ಅಧ್ಯಕ್ಷ ಶ್ರೀ ಹರಿ ಭಟ್ ಇರ್ದೆ ಮತ್ತು ಪದಾಧಿಕಾರಿಗಳು ಸಹಕರಿಸಿದರು.ದೇವಾಲಯದ ಆಡಳಿತ ಮಂಡಳಿ ಸದಸ್ಯರು, ನಿಡ್ಪಳ್ಳಿ, ಇರ್ದೆ, ಬೆಟ್ಟಂಪಾಡಿ ಗ್ರಾಮದ ಭಕ್ತಾದಿಗಳು ಪಾಲ್ಗೊಂಡರು. 

   

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.