ನಿತ್ಯ ಚಪಾತಿಯವರ ನಿತ್ಯ ಆರೋಗ್ಯ ಆಹಾರ ಉತ್ಪನ್ನಗಳ ಮಳಿಗೆ ಶುಭಾರಂಭ

Puttur_Advt_NewsUnder_1
Puttur_Advt_NewsUnder_1


ಪುತ್ತೂರು: ಮುಕ್ವೆಯಲ್ಲಿ ಹಲವು ವರುಷಗಳಿಂದ ಕಾರ್ಯ ನಿರ್ವಹಿಸಿ ಉಡುಪಿ, ದ.ಕ, ಕೊಡಗು ಹಾಗೂ ರಾಜ್ಯದ ಹಲವು ಕಡೆ ಹಾಗೂ ಹೊರ ರಾಜ್ಯದಲ್ಲಿ ತನ್ನ ವ್ಯವಹಾರವನ್ನು ವಿಸ್ತಾರಗೊಳಿಸುತ್ತಿರುವ ನಿಧಿ ಫುಡ್ ಪ್ರೊಡಕ್ಟ್ ರವರ ನೂತನ ಮಾರಾಟ ಮಳಿಗೆ ನಿತ್ಯ ಆರೋಗ್ಯ ಆಹಾರ ಉತ್ಪನ್ನಗಳ ಮಳಿಗೆ ಅ.2ರಂದು ದರ್ಬೆ ಸರ್ಕಲ್‌ ಬಳಿಯ ಆಶ್ಯ ಕಾಂಪ್ಲೆಕ್ಸ್‌ನಲ್ಲಿ ಶುಭಾರಂಭಗೊಂಡಿತು. 

ರಾಧಾಕೃಷ್ಣ ರವರು ವ್ಯವಹಾದಲ್ಲಿ ಹೊಸತನಕ್ಕೆ ಹೋಗುತ್ತಿದ್ದಾರಲ್ಲದೆ ಇಂದಿನ ಯುವಕರಿಗೆ ಸ್ಫೂರ್ತಿಯಾಗಿದ್ದಾರೆ – ಸಂಜೀವ ಮಠಂದೂರು
ಶಾಸಕ ಸಂಜೀವ ಮಠಂದೂರುರವರು ದೀಪ ಬೆಳಗಿಸಿ ಸಂಸ್ಥೆಯನ್ನು ಉದ್ಘಾಟಿಸಿ ಸಾವಯವ ಪೌಷ್ಠಿಕ ಆಹಾರವನ್ನು ಇಲ್ಲಿ ಜನರಿಗೆ ಪೂರೈಸುತ್ತಿದ್ದು, ರಾಧಾಕೃಷ್ಣ ರವರು ವ್ಯವಹಾದಲ್ಲಿ ಹೊಸತನಕ್ಕೆ ಹೋಗುತ್ತಿದ್ದಾರಲ್ಲದೆ ಇಂದಿನ ಯುವಕರಿಗೆ ಸ್ಫೂರ್ತಿಯಾಗಿದ್ದಾರೆ.  ಈಗಿನ ಯುವಕರು ಸ್ವಾಭಿಮಾನಿ ಹಾಗೂ ಸ್ವಾವಲಂಬಿಗಳಾಗಬೇಕು ಎಂದು ಹೇಳಿ ಸಂಸ್ಥೆಗ ಶುಭಹಾರೈಸಿದರು. 


ಆರೋಗ್ಯದ ಕಾಳಜಿಗಾಗಿ ಸಂಸ್ಥೆಯನ್ನು ಪ್ರಾರಂಭಿಸಿದ್ದಾರೆ – ಡಾ. ಹರಿಕೃಷ್ಣ ಪಾಣಾಜೆ

ಪುತ್ತೂರಿನ ಆಯುರ್ವೇದ ವೈದ್ಯಾಧಕಾರಿ ಡಾ. ಹರಿಕೃಷ್ಣ ಪಾಣಾಜೆರವರು ಸಿರಿಧಾನ್ಯ ಉತ್ಪನ್ನಗಳನ್ನು ಬಿಡುಗಡೆ ಮಾಡಿ ಮಾತನಾಡಿ ಮಾನಸಿಕ ಹಾಗೂ ದೈಹಿಕ ಆರೋಗ್ಯಕ್ಕಾಗಿ ಇರುವ ಆಹಾರ  ಉತ್ಪನ್ನಗಳು ಈ ಸಂಸ್ಥೆಯಲ್ಲಿ ಲಭ್ಯ. ಆರೋಗ್ಯದ ಕಾಳಜಿಗಾಗಿ ಸಂಸ್ಥೆಯನ್ನು ಪ್ರಾರಂಭಿಸಿದ್ದಾರೆ. ಸಂಸ್ಥೆಯು ಜನರ ಮನ್ನಣೆ ಗಳಿಸಿ ವಿಶ್ವವಿಖ್ಯಾತಿಯನ್ನು ಪಡೆಯಲಿ ಎಂದು ಹೇಳಿ ಶುಭಹಾರೈಸಿದರು.

ಪುತ್ತೂರಿನ ಜನತೆಗೆ ಉತ್ತಮ ಕೊಡುಗೆಯಾಗಿದೆ – ಕೃಷ್ಣ ಮೋಹನ್ ಪಿ ಎಸ್
ರೋಟರಿ ಕ್ಲಬ್ ಪುತ್ತೂರು ಸಿಟಿ ಇದರ ಅಧ್ಯಕ್ಷ ಕೃಷ್ಣ ಮೋಹನ್ ಪಿ ಎಸ್ ರವರು ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿ ಜನರ ಆರೋಗ್ಯವೇ ಮುಖ್ಯ ಎಂಬ ಉದ್ದೇಶದಿಂದ ಸಂಸ್ಥೆಯನ್ನು ಪ್ರಾರಂಭಿಸಿದ್ದಾರೆ. ಇದು ಉತ್ತಮ ವಿಟಮಿನ್ ಹಾಗೂ ಪ್ರೊಟೀನ್ ಯುಕ್ತ ಅಂಶಗಳನ್ನೊಳಗೊಂಡ ಕೃಷಿ ಆಹಾರ ಉತ್ಪನ್ನಗಳ ಮಳಿಗೆಯಾಗಿದ್ದು, ಪುತ್ತೂರಿನ ಜನತೆಗೆ ಉತ್ತಮ ಕೊಡುಗೆಯಾಗಿದೆ.

ಈ ಸಂದರ್ಭದಲ್ಲಿ ತಾಲೂಕಿ ಪಂಚಾಯತ್ ಸ್ಥಾಯಿ ಸಮಿತಿ ಅಧ್ಯಕ್ಷ ಸಾಜ ರಾಧಾಕೃಷ್ಣ ಆಳ್ವ, ಇಂಜಿನಿಯರ್ ಸಚ್ಚಿದಾನಂದ, ಎವಿಜಿ ಅಸೋಸಿಯೇಟ್ಸ್ ನ ಮಾಲಕ ಎವಿ ನಾರಾಯಣ್, ಓರೆಂಟಿಯಲ್ ಇನ್ಸೂರೆನ್ಸ್ ನ ವ್ಯವಸ್ಥಾಪಕ ಆನಂದ ಗೌಡ, ನ್ಯಾಯಾವಾದಿ ಚಿದಾನಂದ ಬೈಲಾಡಿ ಸೇರಿದಂತೆ ಹಲವು ಗಣ್ಯರು ಆಗಮಿಸಿ ಸಂಸ್ಥೆಗೆ ಶುಭಹಾರೈಸಿದರು.

ಸಂಸ್ಥೆಯ ಮಾಲಕರಾಧಾಕೃಷ್ಣ  ಇಟ್ಟಿಗುಂಡಿ  ರವರು ಅತಿಥಿಗಳನ್ನು ಸ್ವಾಗತಿಸಿ ನಮ್ಮಲ್ಲಿ ಅಗಸೆ ಬೀಜದ ಉತ್ಪನ್ನಗಳು, ಸಿರಿ ಧಾನ್ಯಗಳು, ಸಿರಿ ಧಾನ್ಯ ಬಿಸ್ಕಟ್‌ಗಳು, ಸಿರಿಧಾನ್ಯದ ಪೌಡರ್, ರವ ಇಡ್ಲಿ, ಪರೋಟ, ಪೂರಿ, ಚಪಾತಿ, ಟೆಂಡರ್ ಕೋಕೋನಟ್ ಚಿಪ್ಸ್, ಫ್ರುಟ್ಸ್‌ಲಾಡ್, ಹಪ್ಪಳ, ಬಾಳೆಕಾಯಿ ಚಿಪ್ಸ್, ರಾಗಿ ಚಪಾತಿ, ಮಶ್ರೂಮ್ ಚಟ್ನಿ, ರಸಂ ಉತ್ಪನ್ನಗಳು, ರಾಗಿಯ ಉತ್ಪನ್ನಗಳು, ಹಲಸಿನ ಬೀಜದ ಉತ್ಪನ್ನಗಳು ಲಭ್ಯವಿದೆ. ಹೆಚ್ಚಿನ ಮಾಹಿತಿಗಾಗಿ – 9611470575 ಸಂರ್ಕಿಸಬಹುದು ಎಂದು ಹೇಳಿ ಎಲ್ಲರ ಸಹಕಾರ ಕೋರಿದರು. ಕಾರ್ಯಕ್ರಮವನ್ನು ತೀರ್ಥಾನಂದ ಕೊಡಂಕೇರಿಯವರು ನಿರ್ವಹಿಸಿದರು. 

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.