HomePage_Banner
HomePage_Banner
HomePage_Banner
HomePage_Banner
HomePage_Banner
HomePage_Banner

ಗಾಂಧೀಜಿಯ ಕನಸು ನನಸುಮಾಡುವುದು ಯುವಜನತೆಯ ಕರ್ತವ್ಯ: ಹಕೀಂ ಫೈಝಿ

Puttur_Advt_NewsUnder_1
Puttur_Advt_NewsUnder_1
  • ಎಲ್ಲದಕ್ಕೂ ಗಾಂಧಿಯ ಹೆಸರು ಹೇಳುತ್ತೇವೆ ಗಾಂಧಿಯ ಆದರ್ಶ ಪಾಲಿಸುತ್ತಿಲ್ಲ


ಪುತ್ತೂರು: ಗಾಂಧೀಜಿಯ ರಾಮರಾಜ್ಯದ ಕನಸು ನನಸಾಗಲಿಲ್ಲ, ನನ್ನ ಭಾರತ ಹೇಗಿರಬೇಕು ಎಂದು ಗಾಂಧೀಜಿ ಕನಸು ಕಂಡಿದ್ದರೋ ಆ ಕನಸಿಗೆ ನಾವು ಎಳ್ಳುನೀರು ಬಿಟ್ಟಿದ್ದೇವೆ. ಎಲ್ಲದಕ್ಕೂ ಗಾಂಧಿಯ ಹೆಸರು ಹೇಳುವ ನಾವು ಅವರ ಆದರ್ಶವನ್ನು ಪಾಲನೆ ಮಾಡುತ್ತಿಲ್ಲ ಇದು ದೊಡ್ಡ ದುರಂತವಾಗಿದೆ ಎಂದು ಕುಂಬ್ರ ಬದ್ರಿಯಾ ಜುಮಾ ಮಸೀದಿಯ ಖತೀಬ್ ಹಕೀಂ ಫೈಝಿ ಹೇಳಿದರು.
ಅವರು ಕುಂಬ್ರ ಬದ್ರಿಯಾ ಜುಮಾ ಮಸೀದಿಯಲ್ಲಿ ಜುಮಾ ಪ್ರಾರ್ಥನೆಯ ಬಳಿಕ ನಡೆದ ಗಾಂಧಿ ಸ್ಮರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.

ಸರ್ವ ಧರ್ಮಿಯರ ಹೋದೋಟದಂತಿರುವ ಭಾರತದಲ್ಲಿ ಇಂದು ಧರ್ಮದ ಹೆಸರಿನಲ್ಲಿ, ಜಾತಿ ಹೆಸರಿನಲ್ಲಿ ಕಲಹಗಳು ನಿತ್ಯ ನಡೆಯುತ್ತಿದೆ. ಹೆಣ್ಣು ಮಕ್ಕಳ ಮೇಲೆ ನಿರಂತರ ಅತ್ಯಾಚಾರ , ಶೋಷಣೆಗಳು ನಡೆಯುತ್ತಲೇ ಇದೆ. ಕಾನೂನು ಎಷ್ಟೇ ಬಲವಾಗಿದ್ದರೂ ಘಟನೆಗಳು ಮತ್ತೆ ಮತ್ತೆ ಮರುಕಳಿಸುತ್ತಲೇ ಇರುವುದು ಅಪಾಯದ ಸಂಕೇತವಾಗಿದೆ. ನನ್ನ ಭಾರತದ ನೆಲದಲ್ಲಿ ನಡು ರಾತ್ರಿ ಹೆಣ್ಣು ಮಗಳು ಒಂಟಿಯಾಗಿ ನಡೆದಾಡಬೇಕು ಎಂದು ಕನಸು ಕಂಡ ಗಾಂಧೀಜಿಯವರ ಕನಸನ್ನು ನಾವು ನುಚ್ಚುನೂರು ಮಾಡಿದ್ದೇವೆ. ಭವ್ಯಪರಂಪರೆ, ಇತಿಹಾಸವನ್ನು ಹೊಂದಿರುವ ನಮ್ಮ ನಾಡಿನಲ್ಲಿ ನಾವು ಕಂಡರಿಯದ, ಕೇಳದ ಘಟನೆಗಳು ಒಂದರ ಹಿಂದೆ ಒಂದರಂತೆ ನಡೆಯುತ್ತಲೇ ಇರುವುದು ಖೇಧಕರ ಸಂಗತಿಯಾಗಿದೆ. ಗಾಂಧಿಯವರ ಆದರ್ಶವನ್ನು ಯುವ ಸಮೂಹ ಪಾಲಿಸಬೇಕಿದೆ. ಅವರವರ ಧರ್ಮಾನುಸರ ಬಾಳಿ ಪ್ರತೀಯೊಬ್ಬ ಭಾರತೀಯರು ಸಹೋದರರಂತೆ ಬಾಳಿದರೆ ಮಾತ್ರ ನಮ್ಮ ದೇಶ ಉತ್ತುಂಗ ಸ್ಥಾನಕ್ಕೆ ಏರಲು ಸಾಧ್ಯವಾಗುತ್ತದೆ. ಗಾಂಧಿಯ ಕನಸಿನ ಭಾರತವನ್ನು ಕಟ್ಟಲು ನಾವು ಪಣತೊಡಬೇಕಿದೆ ಎಂದು ಹೇಳಿದರು. ಜಮಾತ್ ಕಮಿಟಿ ಅಧ್ಯಕ್ಷ ಅಬ್ದುಲ್ ಹಮೀದ್ ರಾಯಲ್, ಜೊತೆ ಕಾರ್ಯದರ್ಶಿ ಬಶೀರ್ ಕಡ್ತಿಮಾರ್, ಮಾಜಿ ಅಧ್ಯಕ್ಷ ಅಬ್ದುಲ್ಲ ಕೋಳಿಗದ್ದೆ ಮೊದಲದವರು ಉಪಸ್ಥಿತರಿದ್ದರು

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.