HomePage_Banner
HomePage_Banner
HomePage_Banner
HomePage_Banner
HomePage_Banner
HomePage_Banner

ಉಪ್ಪಿನಂಗಡಿ ಶ್ರೀ ಕ್ಷೇತ್ರ ಧರ್ಮಸ್ಥಳ ಯೋಜನೆ ವತಿಯಿಂದ ಗಾಂಧಿ ಜಯಂತಿ ಕಾರ್‍ಯಕ್ರಮ

Puttur_Advt_NewsUnder_1
Puttur_Advt_NewsUnder_1
  • ಸ್ವಚ್ಛತೆ ಕಾರ್‍ಯಕ್ರಮ ಗಾಂಧಿ ಜಯಂತಿ ದಿನಕ್ಕೆ ಸೀಮಿತ ಆಗಬಾರದು-ರಾಧಾಕೃಷ್ಣ ಬೋರ್ಕರ್


ಉಪ್ಪಿನಂಗಡಿ: ಸ್ವಚ್ಛತೆ ಕಾರ್‍ಯಕ್ರಮ ಗಾಂಧಿ ಜಯಂತಿ ಕಾರ್‍ಯಕ್ರಮಕ್ಕೆ ಸೀಮಿತ ಆಗಬಾರದು, ಅದು ನಿತ್ಯ ನಿರಂತರವಾಗಿರಬೇಕು ಮತ್ತು ನಮ್ಮ ಮನಸ್ಸು, ಪರಿಸರ, ಗ್ರಾಮ, ತಾಲ್ಲೂಕು ಹೀಗೆ ಅದು ವಿಸ್ತಾರವಾಗುವ ಮೂಲಕ ಉತ್ತಮ ಸಮಾಜ ನಿರ್ಮಾಣಕ್ಕೆ ಪ್ರೇರಿತವಾಗಿರಬೇಕು ಎಂದು ತಾಲ್ಲೂಕು ಪಂಚಾಯಿತಿ ಅಧ್ಯಕ್ಷ ರಾಧಾಕೃಷ್ಣ ಬೋರ್ಕರ್ ಹೇಳಿದರು.
ಅವರು ಅ. 2ರಂದು ಉಪ್ಪಿನಂಗಡಿಯಲ್ಲಿ ಶ್ರೀ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ, ಉಪ್ಪಿನಂಗಡಿ ವಲಯ ಮತ್ತು ಪ್ರಗತಿ ಬಂಧು ಸಂಘಗಳ ಒಕ್ಕೂಟ ಉಪ್ಪಿನಂಗಡಿ ವಲಯ ಇದರ ಸಂಯುಕ್ತ ಆಶ್ರಯದಲ್ಲಿ ಹಮ್ಮಿಕೊಳ್ಳಲಾದ ಗಾಂಧಿ ಜಯಂತಿ ಪ್ರಯುಕ್ತ ನಡೆದ ಗಾಂಧಿಸ್ಮೃತಿ ಕಾರ್‍ಯಕ್ರಮವನ್ನು ಉದ್ಘಾಟಿಸಿ  ಮಾತನಾಡಿದರು. ತಾಲ್ಲೂಕು ಪಂಚಾಯಿತಿ ಸದಸ್ಯ ಮುಕುಂದ ಗೌಡ ಬಜತ್ತೂರು ಮಾತನಾಡಿ ಗಾಂಧೀಜಿಯವರ ತತ್ವ, ಆದರ್ಶ ನಮಗೆ ಮಾದರಿ ಆಗಿದ್ದು, ಅವರ ಸ್ಮರಣೆ ಸಲುವಾಗಿ ಅವರ ಜನ್ಮ  ದಿನವನ್ನು ಶುಚಿತ್ವಕ್ಕೆ ಮೀಸಲಿಡುವ ಮೂಲಕ ಇಂದಿನ ಯುವ ತಲೆಮಾರಿಗೆ ತಿಳಿಸುವ, ಜಾಗೃತಿ ಮೂಡಿಸುವ ಕೆಲಸ ಮಾಡಬೇಕು ಎಂದರು. ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆಯ ಉಪ್ಪಿನಂಗಡಿ ವಲಯಾಧ್ಯಕ್ಷ ಮೋಹನ ಪಕ್ಕಳ ಅಧ್ಯಕ್ಷತೆಯಲ್ಲಿ ನಡೆದ ಸಮಾರಂಭದಲ್ಲಿ ಯೋಜನೆಯ ಕೃಷಿ ಮೇಲ್ವಿಚಾರಕರಾದ ಉಮೇಶ್, ಗ್ರಾಮಾಭಿವೃದ್ಧಿ ಯೋಜನೆಯ ಉಪ್ಪಿನಂಗಡಿ ವಲಯದ ವಲಯಾಧ್ಯಕ್ಷ ಪ್ರಶಾಂತ್ ಪೆರಿಯಡ್ಕ, ಶ್ರೀ ಸಹಸ್ರಲಿಂಗೇಶ್ವರ ದೇವಸ್ಥಾನದ ಕೃಷ್ಣ ಪ್ರಸಾದ್ ಬಡಿಲ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಸಮಾರಂಭದಲ್ಲಿ ತಾಲ್ಲೂಕು ಪಂಚಾಯಿತಿ ಮಾಜಿ ಸದಸ್ಯ ಉಮೇಶ್ ಶೆಣೈ, ಸ್ಥಳೀಯ ಪ್ರಮುಖರಾದ ಜಯಂತ ಪೊರೋಳಿ, ಕೈಲಾರ್ ರಾಜ್‌ಗೋಪಾಲ್ ಭಟ್, ಹರಿರಾಮಚಂದ್ರ, ಶ್ರೀಮತಿ ಹೇಮಲತಾ ಶೆಟ್ಟಿ ಮತ್ತಿತರರು ಉಪಸ್ಥಿತರಿದ್ದರು.

ಗ್ರಾಮಾಭಿವೃದ್ಧಿ ಯೋಜನೆ ಮೇಲ್ವಿಚಾರಕ ರವಿ ಕೆ. ಸ್ವಾಗತಿಸಿ, ಸೇವಾನಿರತೆ ಉಷಾ ವಂದಿಸಿದರು. ಲೊಕೇಶ್ ಬೆತ್ತೋಡಿ ಕಾರ್‍ಯಕ್ರಮ ನಿರೂಪಿಸಿದರು. ಇದೇ ಸಂದರ್ಭದಲ್ಲಿ  ನವಜೀವನ ಸಮಿತಿಯ ಹಿರಿಯ ಸದಸ್ಯ ಕೊರಗಪ್ಪ ಗೌಡರವರನ್ನು ಗೌರವಿಸಲಾಯಿತು. ಸಭಾ ಕಾರ್‍ಯಕ್ರಮದ ಬಳಿಕ ಯೋಜನೆಯ ಪದಾಧಿಕಾರಿಗಳು, ಕಾರ್‍ಯಕರ್ತರು ಶ್ರೀ ಸಹಸ್ರಲಿಂಗೇಶ್ವರ ದೇವಸ್ಥಾನದ ಸುತ್ತ ಶ್ರಮದಾನದ ಮೂಲಕ ಶುಚಿಗೊಳಿಸಿದರು.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.