ಅ.4ರಂದು ಉರುಂಬಿಯಲ್ಲಿ ಕುಮಾರಧಾರ ನದಿಗೆ ಬಾಗಿನ ಅರ್ಪಣೆ| ರಾಜ್ಯ ಜೀವ ವೈವಿದ್ಯ ಮಂಡಳಿ ಅಧ್ಯಕ್ಷ ಅನಂತ ಹೆಗಡೆ ಆಶೀಸರ ಭಾಗಿ| ಪತ್ರಿಕಾಗೋಷ್ಟಿಯಲ್ಲಿ ಕರುಣಾಕರ ಗೋಗಟೆ

Puttur_Advt_NewsUnder_1
Puttur_Advt_NewsUnder_1

ಕಡಬ: ಕುಮಾರಧಾರ ಪರಿಸರ ಸಂರಕ್ಷಣಾ ಸಮಿತಿ ವತಿಯಿಂದ ಕಳೆದ ಆರು ವರ್ಷಗಳಿಂದ ಕುಟ್ರುಪಾಡಿ ಗ್ರಾಮದ ಉರುಂಬಿ ಎಂಬಲ್ಲಿ ಕುಮಾರಧಾರ ನದಿ ತಟದಲ್ಲಿ ವರ್ಷಕ್ಕೊಮ್ಮೆ ಹಮ್ಮಿಕೊಳ್ಳುತ್ತಿದ್ದ ಶ್ರೀ ಸತ್ಯನಾರಾಯಣ ಪೂಜೆಯನ್ನು ಈ ಭಾರಿ ಅ.4ರಂದು ಕುಮಾರಧಾರ ನದಿಗೆ ಬಾಗಿನ ಅರ್ಪಿಸುವ ಮೂಲಕ ಸರಳ ರೀತಿಯಲ್ಲಿ ಆಚರಿಸಲಾಗುವುದು. ಕಾರ್ಯಕ್ರಮದಲ್ಲಿ ರಾಜ್ಯ ಜೀವ ವೈವಿದ್ಯ ಮಂಡಳಿಯ ಅಧ್ಯಕ್ಷ ಅನಂತ ಹೆಗಡೆ ಅಶೀಸರ ಭಾಗವಹಿಸಲಿದ್ದಾರೆ ಎಂದು ಕುಮಾರಧಾರ ಪರಿಸರ ಸಂರಕ್ಷಣಾ ಸಮಿತಿ ಅಧ್ಯಕ್ಷ ಕರುಣಾಕರ ಗೋಗಟೆ ಹೇಳಿದರು.
ಅವರು ಅ.2ರಂದು ಕಡಬದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ ಕಳೆದ ಇಪ್ಪತೈದು ವರ್ಷಗಳಿಂದ ಕುಮಾರಧಾರ ನದಿಗೆ ಅಲ್ಲಲ್ಲಿ ಅಣೆಕಟ್ಟು ನಿರ್ಮಾಣ ವಿರೋಧಿಸಿ ಸಫಲತೆಯನ್ನು ಕಂಡಿದ್ದೇವೆ. ಕಳೆದ ಹತ್ತು ವರ್ಷಗಳಿಂದ ಉರುಂಬಿಯಲ್ಲಿ ನಿರ್ಮಿಸಲು ಉದ್ದೇಶಿಸಿರುವ ಅಣೆಕಟ್ಟು ವಿರೋಧಿಸುತ್ತಾ ಬಂದಿದ್ದೇವೆ ಇದರ ಅಂಗವಾಗಿ ಕಳೆದ ಆರು ವರ್ಷಗಳಿಂದ ನದಿ ತಟದಲ್ಲಿ ಸತ್ಯನಾರಾಯಣ ಪೂಜೆ ಕಾರ್ಯ ನೆರವೇರಿಸುತ್ತಾ ಬರುತ್ತಿದ್ದೇವೆ. ಈ ವರ್ಷ ಬಾಗಿನ ಅರ್ಪಿಸುವ ಸಾಂಕೇತಿಕ ಕಾರ್ಯಕ್ರಮ ಇಟ್ಟುಕೊಂಡಿದ್ದೇವೆ.
ನಮ್ಮ ಹೋರಾಟದ ಫಲವಾಗಿ ಉರುಂಬಿ ಅಣೆಕಟ್ಟು ಈಗ ಯೋಜನೆಯನ್ನು ತಾತ್ಕಾಲಿಕವಾಗಿ ತಡೆಹಿಡಿಯಲಾಗಿದೆ. ಇದು ನಮ್ಮ ಹೋರಾಟಕ್ಕೆ ಸಂದ ಜಯವಾಗಿದೆ. ಶಾಶ್ವತವಾಗಿ ಯೋಜನೆಯನ್ನು ರದ್ದುಪಡಿಸಲು ಸರಕಾರಕ್ಕೆ ಅನಂತ ಹೆಗಡೆ ಅಶೀಸರ ಅವರ ಮುಖಾಂತರ ಒತ್ತಾಯಿಸಲಾಗುವುದು. ಈ ನಿಟ್ಟಿನಲ್ಲಿ ಹೋರಾಟವನ್ನು ವಿಧಾನಸೌಧದ ಮೆಟ್ಟಿಲಿಗೆ ಕೊಂಡಯ್ಯಲಾಗುವುದು. ರೈತರ ಭೂಮಿ ಮುಳುಗಡೆ ಮಾಡಿ ನಮಗೆ ಯಾವುದೇ ಅಣೆಕಟ್ಟು ಬೇಡ. ಈ ಬಗ್ಗೆ ಈಗಾಗಲೇ ಪ್ರಧಾನಿ ಮೋದಿಯವರಿಗೂ ಪತ್ರ ಬರೆದಿದ್ದು, ಕುಮಾರಧಾರ ನದಿ ತಟದಲ್ಲಿ ಸೋಲಾರ್ ಅಳವಡಿಸಿ ವಿದ್ಯುತ್ ಉತ್ಪಾದನೆ ಅವಕಾಶ ಕಲ್ಪಿಸಬೇಕೆಂದು ಕೋರಿಕೊಂಡಿದ್ದೇವೆ. ಇದಕ್ಕೆ ಪೂರಕ ಸ್ಪಂದನೆ ದೊರೆತಿದೆ. ಇನ್ನೊಂದೆಡೆ, ಕುಮಾರಧಾರ ನದಿಗೆ ಅಲ್ಲಲ್ಲಿ ಕಿಂಡಿಅಣೆಕಟ್ಟುಗಳನ್ನು ನಿರ್ಮಾಣ ಮಾಡಿ ಕುಡಿಯುವ ನೀರಿನ ವ್ಯವಸ್ಥೆ ಕಲ್ಪಿಸುವ ಆರು ಯೋಜನೆಗಳು ಸರಕಾರದ ಮುಂದಿದೆ. ಈ ಎಲ್ಲಾ ಬೆಳವಣಿಗೆಯಿಂದಾಗಿ ಕುಮಾರಧಾರ ನದಿಗೆ ನಿರ್ಮಿಸಲು ಉದ್ದೇಶಿಸಿರುವ ಅಣೆಕಟ್ಟುಗಳನ್ನು ಶಾಶ್ವತವಾಗಿ ಕೈಬಿಡಲು ಒತ್ತಾಯಿಸಲಾಗುವುದು. ನಮ್ಮ ಹೋರಾಟಗಳಿಗೆ ಅತಂತ ಹೆಗಡೆ ಅಶೀಸರ ಅವರ ಸಂಪೂರ್ಣ ಬೆಂಬಲವಿದೆ ಎಂದು ಹೇಳಿದ ಕರುಣಾಕರ ಗೋಗಟೆಯವರು ಕುಮಾರಧಾರವನ್ನು ರಕ್ಷಿಸುವ ವಿಚಾರದಲ್ಲಿ ಯಾವುದೇ ರಾಜಿ ಇಲ್ಲ ಎಂದರು. ಪತ್ರಿಕಾಗೋಷ್ಠಿಯಲ್ಲಿ ಸಮಿತಿಯ ಕಾರ್ಯದರ್ಶಿ ಕಿರಣ್ ಗೋಗಟೆ, ಸದಸ್ಯ ಮೋನಪ್ಪ ಗೌಡ ನಾಡೋಳಿ ಮತ್ತಿತರರು ಉಪಸ್ಥಿತರಿದ್ದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.