HomePage_Banner
HomePage_Banner
HomePage_Banner
HomePage_Banner
HomePage_Banner
HomePage_Banner

ಐತ್ತೂರು ಗ್ರಾ.ಪಂ ನಲ್ಲಿ ಸ್ವಚ್ಚತಾ ಕಾರ್ಯಕ್ರಮ

Puttur_Advt_NewsUnder_1
Puttur_Advt_NewsUnder_1


ಕಡಬ : ಸ್ವಚ್ಚ ಭಾರತ ಯೋಜನೆಯಡಿ ಐತ್ತೂರು ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಸ್ವಚ್ಚ ಭಾರತ ಅಭಿಯಾನ ಅ.2ರಂದು ವಿಶ್ವ ಹಿಂದೂ ಪರಿಷತ್, ಸ್ತ್ರೀ ಶಕ್ತಿ ಸಂಘ ಹಾಗೂ ಐತ್ತೂರು ಗ್ರಾಮ ನಾಗರಿಕರ ವತಿಯಿಂದ ಮರ್ಧಾಳದಿಂದ ಸುಂಕದಕಟ್ಟೆ ವರೆಗೆ ಸುಬ್ರಹ್ಮಣ್ಯ – ಮಂಗಳೂರು ರಾಜ್ಯ ಹೆದ್ದಾರಿಯ ಇಕ್ಕಡೆಗಳಲ್ಲಿ ಹಾಗೂ ಐತ್ತೂರು ಗ್ರಾ.ಪಂ ವಠಾರವನ್ನು ಸ್ವಚ್ಚಗೊಳಿಸಲಾಯಿತು. ಕಡಬ ಸರಸ್ವತಿ ವಿದ್ಯಾಲಯದ ಸಂಚಾಲಕರಾದ ವೆಂಕಟ್ರಮಣ ರಾವ್ ಮಂಕೂಡೆ ರವರು ಸ್ವಚ್ಚತೆಗೆ ಚಾಲನೆ ನೀಡಿ ಸ್ವಚ್ಚ ಭಾರತ ನಿರ್ಮಾಣದಲ್ಲಿ ಪ್ರತಿಯೊಬ್ಬರ ಪಾತ್ರವು ಅತ್ಯಮೂಲ್ಯವಾಗಿದ್ದು ತಮ್ಮ ತಮ್ಮ ಪರಿಸರ ಸ್ವಚ್ಚತೆಗೆ ಆಧ್ಯತೆ ನೀಡಬೇಕೆಂದರು. ಜೆ.ಸಿ.ಐ ವಲಯ-15 ಅಧ್ಯಕ್ಷ ರವಿ ಕಕ್ಕೆಪದವು ಸ್ವಚ್ಚತಾ ಕಾರ್ಯಕ್ಕೆ ವಾಹನ ಸೌಲಭ್ಯವನ್ನು ಒದಗಿಸಿ ಶುಭ ಹಾರೈಸಿದ್ದರು.


ವಿಶ್ವ ಹಿಂದೂ ಪರಿಷತ್ ಐತ್ತೂರು ಘಟಕದ ಅಧ್ಯಕ್ಷ ನವೀನ್ ಕಲ್ಲಾಜೆಯವರ ನೇತೃತ್ವದಲ್ಲಿ ನಡೆದ ಸ್ವಚ್ಚತಾ ಕಾರ್ಯಕ್ರಮದಲ್ಲಿ ವಿಶ್ವ ಹಿಂದೂ ಪರಿಷತ್ ಕಡಬ ಪ್ರಖಂಡದ ಪ್ರಮುಖರಾದ ಸುರೇಶ್ ಕುಮಾರ್, ಸಂತೋಷ್ ಕುಮಾರ್ ಸುವರ್ಣ ಕೋಡಿಬೈಲ್, ಕಡಬ ಸಿ.ಎ ಬ್ಯಾಂಕಿನ ಮಾಜಿ ನಿರ್ದೇಶಕ ಪೂವಪ್ಪ ಐತ್ತೂರು, ಸಿ.ಎ ಬ್ಯಾಂಕ್ ನಿರ್ದೇಶಕ ಉಮೇಶ್ ಬ್ರಹ್ಮಶ್ರೀ, ಮರ್ಧಾಳ ಗ್ರಾ.ಪಂ ಮಾಜಿ ಸದಸ್ಯ ಹರೀಶ್ ಕೊಡಂದೂರು, ಉದ್ಯಮಿ ಈಶ್ವರ ರೆಡ್ಡಿ ಮರ್ಧಾಳ, ಅಂಗನವಾಡಿ ಕಾರ್ಯಕರ್ತೆ ದೇವಕಿ, ಐತ್ತೂರು ಘಟಕದ ಸದಸ್ಯರಾದ ರೋಹಿತ್ ಅಂತಿಬೆಟ್ಟು, ಶೇಷಪ್ಪ ಗೌಡ, ಜಯರಾಮ ಕಡಮಾಜೆ, ವಿಶ್ವನಾಥ ಗೌಡ ಮಲಂಪಡ್ಕ, ಕುಲಶೇಖರ ಗೌಡ ಹೊಸೊಕ್ಲು, ಲತೀಶ್ ಕುಮಾರ್ ಅಂತಿಬೆಟ್ಟು, ವಾಸುದೇವ ಅಂತಿಬೆಟ್ಟು, ನಿತಿನ್ ಕುಮಾರ್ ಅಂತಿಬೆಟ್ಟು, ಪ್ರೀತಮ್ ಅಂತಿಬೆಟ್ಟು, ಚರಣ್ ಅಂತಿಬೆಟ್ಟು, ಹಿತೇಶ್ ಮಲಂಪಡ್ಕ, ನಿತೀಶ್ ಮಲಂಪಡ್ಕ ಯಕ್ಷಿತ್ ಕಲ್ಲಾಜೆ, ಶರತ್ ಕಲ್ಲಾಜೆ, ಲೋಕೆಶ್ ಪಂಜೋಡಿ, ಲೋಕೆಶ್ ಅಂತಿಬೆಟ್ಟು, ಪೂವಪ್ಪ ಗೌಡ ಪೂಜಾರಿ ಮನೆ, ಗಂಗಾಧರ ಬಸವಪಾಲು, ವಿನಯ ಕೇನ್ಯ ದೀಕ್ಷಿತ್ ಕಂಪ, ದಿವಕರ ಕಂಪ, ಐತ್ತೂರು ಸ್ತ್ರೀಶಕ್ತಿ ಸಂಘದ ಹರ್ಷಿತಾ, ಪುಷ್ಪಾವತಿ, ಶೋಭ, ಜಯಂತಿ, ತಮಿಳುಸೆಲ್ವಿ, ಸರಸ್ವತಿ, ರಾಜೇಶ್ವರಿ, ಪದ್ಮಾವತಿ, ಜಯಲಕ್ಷ್ಮೀ, ಕೃಷವೇಣಿ, ಸೆಲ್ವರಾಣಿ ಮೊದಲಾದವರು ಸ್ವಚ್ಚತೆಯಲ್ಲಿ ಪಾಲ್ಗೋಂಡರು. ದೇವಿಪ್ರಸಾದ್ ಮರ್ಧಾಳ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.