ಐತ್ತೂರು ಗ್ರಾಮ ಪಂಚಾಯತಿನಲ್ಲಿ ಉದ್ಯೋಗ ಖಾತರಿ ವಿಶೇಷ ಗ್ರಾಮ ಸಭೆ

Puttur_Advt_NewsUnder_1
Puttur_Advt_NewsUnder_1


ಕಡಬ : ಮಹಾತ್ಮಾ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯ ವಿಶೇಷ ಗ್ರಾಮ ಸಭೆಯು
ಅ.2ರಂದು ಐತ್ತೂರು ಗ್ರಾಮ ಪಂಚಾಯತ್‌ನ ರಾಜೀವ ಗಾಂಧಿ ಸೇವ ಕೇಂದ್ರದ ಸಭಾಭವನದಲ್ಲಿ ನಡೆಯಿತು. ಐತ್ತೂರು ಗ್ರಾ.ಪಂ ಅಭಿವೃದ್ಧಿ ಅಧಿಕಾರಿ ಶೆಖರ್ ಬಿ ಯವರು ಸಭೆಯ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿ ಗಾಂದಿಜಿಯವರ ಗ್ರಾಮ ಸ್ವರಾಜ್ಯದ ಕನಸನ್ನು ಕನಸು ಮಾಡುವ ಮೂಲಕ ಗ್ರಾಮೀಣ ಅಭಿವೃದ್ಧಿಗೆ ಪೂರಕವಾದ ರಾಷ್ಟ್ರೀಯ ಉದ್ಯೋಗ ಖಾತರಿ ಯೋಜನೆಯಲ್ಲಿ ಗ್ರಾಮಸ್ಥರು ತಮ್ಮ ಸಾರ್ವಜನಿಕ ಹಾಗೂ ವೈಯಕ್ತಿಕ ಕಾಮಗಾರಿಗಳನ್ನು ನಡೆಸುವ ಮೂಲಕ ಯೋಜನೆಯ ಪ್ರಯೋಜನ ಪಡೆದುಕೊಳ್ಳಬೇಕೆಂದು ಹೇಳಿದರು. ಗ್ರಾ.ಪಂ ನಿಕಟ ಪೂರ್ವ ಸದಸ್ಯ ಇಸ್ಮಾಯಿಲ್ ಎಂ ಹೆಚ್ ದೀಪ ಬೆಳಗಿಸುವ ಮೂಲಕ ಗಾಂಧಿ ಜಯಂತಿ ಆಚರಣೆಗೆ ಚಾಲನೆ ನೀಡಿ ಶುಭಾಶಯ ಕೋರಿದರು.


ಗ್ರಾಮ ಪಂಚಾಯತ್ ಸಿಬ್ಬಂದಿಗಳು ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು. ಈ ಸಂದರ್ಭದಲ್ಲಿ ಸಾರ್ವಜನಿಕರಿಂದ ಉದ್ಯೋಗ ಖಾತರಿ ಅರ್ಜಿಗಳನ್ನು ಪಡೆದುಕೊಳ್ಳಲಾಯಿತು. ಗ್ರಾ.ಪಂ ಕಾರ್ಯದರ್ಶಿ ರಮೇಶ್ ಆಚಾರಿ ಸ್ವಾಗತಿಸಿ ವಂದಿಸಿದ್ದರು. ಗ್ರಾ.ಪಂ ಸಿಬ್ಬಂದಿಗಳಾದ ದೇವಿಕಾ, ಚೈತ್ರಾ, ಗಣನಾಥ ಸಹಕರಿಸಿದರು. ಬಳಿಕ ಗ್ರಾಮ ಪಂಚಾತ್ ವತಿಯಿಂದ ಸ್ವಚ್ಚತೆ ನಡೆಸಲಾಯಿತು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.